ಅನಿವಾಸಿ ಕನ್ನಡಿಗರಿಗಾಗಿ ಕರ್ನಾಟಕದ ಎನ್ಆರ್‌ಐ ನೀತಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 06 : ಹದಿನಾಲ್ಕನೇ ಪ್ರವಾಸಿ ಭಾರತೀಯ ದಿವಸದ ಆತಿಥ್ಯ ವಹಿಸುತ್ತಿರುವ ಸಂದರ್ಭದಲ್ಲಿ, ಕರ್ನಾಟಕವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಗಟ್ಟಿಯಾಗಿಸುವ ಉದ್ದೇಶದಿಂದ ಸರಕಾರ ಅನಿವಾಸಿ ಕನ್ನಡಿಗರಿಗಾಗಿ ಎನ್ಆರ್‌ಐ ನೀತಿಯನ್ನು ಪ್ರಕಟಿಸಿದೆ.

ಕರ್ನಾಟಕದ ಶ್ರೇಯೋಭಿವೃದ್ಧಿಗಾಗಿ, ನಾಡನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಕಟ್ಟುವ ಉದ್ದೇಶದಿಂದ ಕರ್ನಾಟಕ ಸರಕಾರ ಮತ್ತು ಅನಿವಾಸಿ ಭಾರತೀಯರ ನಡುವೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಈ ಎನ್ಆರ್‌ಐ ನೀತಿಗಳ ರೆಡ್ ಕಾರ್ಪೆಟ್ ಅನ್ನು ಹಾಸಲಾಗಿದೆ.

2008ರಲ್ಲಿ ಸ್ಥಾಪಿಸಲಾದ ಅನಿವಾಸಿ ಭಾರತೀಯ ಫೋರಂ, ಕರ್ನಾಟಕ ಮತ್ತು ಜಾಗತಿಕವಾಗಿ ವಿಸ್ತರಿಸಿಕೊಂಡಿರುವ ವಿವಿಧ ಸಾಂಸ್ಕೃತಿಕ ಸಂಘಟನೆಗಳ ನಡುವೆ ಬಂಧನದ ಬೆಸುಗೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ರಾಜ್ಯಕ್ಕೆ ಅನಿವಾಸಿ ಭಾರತೀಯರಿಂದ ಬಂಡವಾಳ ಹರಿದು ಬರುವಂತೆ ಮಾಡುವಲ್ಲಿ ಸಾಕಷ್ಟು ಶ್ರಮಿಸುತ್ತಿದೆ.

Highlights of the NRI Policy of Karnataka

ಕರ್ನಾಟಕದ ಎನ್ಆರ್‌ಐ ನೀತಿಯ ಪ್ರಮುಖ ಅಂಶಗಳು ಕೆಳಗಿನಂತಿವೆ

* ಅನಿವಾಸಿ ಭಾರತೀಯರು ಮತ್ತು ಅನಿವಾಸಿ ಕನ್ನಡಿಗರ ಡೇಟಾಬೇಸ್ - ಇದು ಜಾಗತಿಕವಾಗಿ ಕನ್ನಡಿಗರು ಪರಸ್ಪರ ಸಂಪರ್ಕ ಸಾಧಿಸಲು, ಸಮಸ್ಯೆಗಳು, ಅನಿಸಿಕೆಗಳನ್ನು ಹಂಚಿಕೊಳ್ಳಲು ಇದನ್ನು ಸೃಷ್ಟಿಸಲಾಗುತ್ತಿದೆ.

* ಅನಿವಾಸಿ ಕನ್ನಡಿಗರ ಕಾರ್ಡ್ - ವೇಗವಾದ ಸೇವೆಗಾಗಿ ಅನಿವಾಸಿ ಕನ್ನಡಿಗರಿಗಾಗಿ ಗುರುತಿನ ಚೀಟಿಯನ್ನು ನೀಡಲಾಗುವುದು.

* ನಮ್ಮ ಊರು ನಮ್ಮ ನಾಡು - ಅನಿವಾಸಿ ಕನ್ನಡಿಗರು ಮತ್ತು ಅನಿವಾಸಿ ಭಾರತೀಯರು ದಾನಧರ್ಮದಂಥ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಮತ್ತು ತಮ್ಮ ಮೂಲ ಊರು ಜನರೊಂದಿಗೆ ಬೆರೆಯಲು.

* ಪ್ರವಾಸಿ ಭಾರತೀಯ ದಿವನದಲ್ಲಿ ಭಾಗವಹಿಸುವುದು - ಸಾಧಕರೊಬ್ಬರಿಗೆ 'ವರ್ಷದ ಅನಿವಾಸಿ ಕನ್ನಡಿಗ' ಪ್ರಶಸ್ತಿಯನ್ನು ಕರ್ನಾಟಕ ಸರಕಾರದ ವತಿಯಿಂದ ನೀಡಲಾಗುವುದು.

* ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕದ ಜನತೆ ಮತ್ತು ಅನಿವಾಸಿ ಕನ್ನಡಿಗರ ನಡುವೆ ಕಲೆ, ಯೋಗ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಿನಿಮಯ.

* ವಿಶ್ವದಾದ್ಯಂತ ಇರುವ ಕನ್ನಡ ಕೂಟಗಳ ಉತ್ತೇಜನ - ಕನ್ನಡ ಭಾಷೆ, ಸಂಸ್ಕೃತಿಗೆ ಇಂಬು ನೀಡಲು ಮತ್ತು ವಿಶ್ವಕನ್ನಡಿಗರೊಂದಿಗೆ ಸಂಪರ್ಕ ಸಾಧಿಸಲು ಎಲ್ಲೇ ಇದ್ದರೂ ಅಲ್ಲೇ ಕನ್ನಡ ಕೂಟಗಳನ್ನು ಸ್ಥಾಪಿಸಲು ಕನ್ನಡಿಗರಿಗೆ ಉತ್ತೇಜನ.

* ಅನಿವಾಸಿ ಕನ್ನಡಿಗರು ಮತ್ತು ಅನಿವಾಸಿ ಭಾರತೀಯರು ಕರ್ನಾಟಕದಲ್ಲಿ ಉದ್ಯಮ ಸ್ಥಾಪಿಸಲು ವರ್ಷದ ಆರಂಭದಲ್ಲಿ ಕೆಲ ತಿಂಗಳುಗಳ ಮಟ್ಟಿಗೆ ತಿಂಗಳ ಬಾಡಿಗೆ ರೂಪದಲ್ಲಿ ಇನ್‌ಕ್ಯೂಬೇಷನ್ ಕೇಂದ್ರವನ್ನು ರಾಜ್ಯ ಸರಕಾರ ನೀಡಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Government has brought out its Non-Resident Kannadiga policy even as the state is all set to host the Pravasi Bharatiya Divas at Bengaluru from Jan7-9, 2017. Here are highlights of the NRI Policy of Karnataka.
Please Wait while comments are loading...