ಕುದುರೆಗೆ ಮಾದಕ ದ್ರವ್ಯ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ

Posted By:
Subscribe to Oneindia Kannada

ಬೆಂಗಳೂರು, ಜನವರಿ 02: ಕುದುರೆ ಕ್ವೀನ್ ಲತೀಫಾಗೆ ಡೋಪಿಂಗ್ ನೀಡಿದ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದೆ.

ಕ್ವೀನ್ ಲತೀಫಾ ಎಂಬ ಕುದುರೆಗೆ ಮಾದಕ ದ್ಯವ್ಯ ತಿನ್ನಿಸಿ ರೇಸ್ ನಲ್ಲಿ ಓಡಿಸಲಾಗಿತ್ತು ಎಂದು ಎಚ್.ಎಸ್.ಚಂದ್ರೇಗೌಡ ಅವರು ಪೊಲೀಸರಿಗೆ ದೂರು ನೀಡಿದ್ದರು, ಈ ಪ್ರಕರಣವನ್ನು ರದ್ದು ಮಾಡಬೇಕು ಎಂದು ಬೆಂಗಳೂರು ಟರ್ಫ್ ಕ್ಲಬ್ ಕಾರ್ಯನಿರ್ವಹಣಾ ಅಧಿಕಾರಿ ನಿರ್ಮಲ್ ಪ್ರಸಾದ್ ಅರ್ಜಿ ಸಲ್ಲಿಸಿದ್ದರು.

Highcourt refuses give stay on doping race horse

ಪ್ರಕರಣಕ್ಕೆ ತಡೆಯಾಜ್ಞೆ ನೀಡದಂತೆ ಪ್ರಾಸಿಕ್ಯೂಷನ್ ವಕೀಲ ರಾಚಯ್ಯ ಮನವಿ ಮಾಡಿದ್ದರು. ಹೈಕೋರ್ಟ್ ಈಗ ಪ್ರಕರಣ ರದ್ದು ಮಾಡಲು ಆಗುವುದಿಲ್ಲ ಎಂದು ಹೇಳಿದೆ.

ಮಾರ್ಚ್ 5, 2017 ರಂದು ಬೆಂಗಳೂರು ಟರ್ಫ್ ಕ್ಲಬ್ ನಲ್ಲಿ ಕುದುರೆ ರೇಸ್ ನಡೆದಿತ್ತು. ರೇಸ್ ನಲ್ಲಿ ಕ್ವೀನ್ ಲತೀಫಾ ಗೆಲುವು ಸಾಧಿಸಿತ್ತು. ಮೂತ್ರದ ಮಾದರಿ ಪರೀಕ್ಷೆಯಲ್ಲಿ ಮಾದಕ ದ್ರವ್ಯ ಸೇವಿಸಿದ್ದು ಸಾಬೀತಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chandregowda complained that horse queen Lathifa has been doped before the race. Bangaluru Turf Club CEO requested court that give stay on the issue but today high court refuses to give stay on the issue.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ