ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಚ್ಚಾಗುತ್ತಿರುವ ಕೌಂಟರ್ ಡ್ರಗ್ಸ್ : ಹೈಕೋರ್ಟ್ ಗರಂ

By Manjunatha
|
Google Oneindia Kannada News

ಬೆಂಗಳೂರು, ನವೆಂಬರ್ 24 : ಮಾದಕ ದ್ರವ್ಯ ನಿರ್ಮೂಲನೆ ಶ್ರಮಿಸುತ್ತಿರುವ ಬೆಂಗಳೂರು ಪೊಲೀಸರಿಗೆ ಹೈಕೋರ್ಟ್ ನೀಡಿರುವ ಈ ಸೂಚನೆ ಇನ್ನಷ್ಟು ಬಲ ತುಂಬಲಿದೆ.

ಡಿ.ಫಾರ್ಮಾ ಕಾಲೇಜುಗಳ ಮಾನ್ಯತೆ ಹಾಗೂ ಪರವಾನಗಿ ನವೀಕರಣ ಪ್ರಕರಣದಲ್ಲಿ ಏಕಸದಸ್ಯ ಪೀಠದಿಂದ ಫಾರ್ಮಸಿ ಕಾಲೇಜುಗಳ ಶಿಕ್ಷಣ ಪದ್ಧತಿಗೆ ತಪರಾಕಿ ಹಾಕಿರುವ ಹೈಕೋರ್ಟ್ ಬೇಕಾಬಿಟ್ಟಿ ಡಿ.ಫಾರ್ಮಾ ಲೈಸೆನ್ಸ್, ಕಾಲೇಜು ಮಾನ್ಯತೆ ನೀಡುವುದನ್ನು ಬಿಡಬೇಕೆಂದು ಎಚ್ಚರಿಕೆ ನೀಡಿದೆ.

ಯಾರದೊ ಸರ್ಟಿಫಿಕೇಟ್ ಇರುತ್ತದೆ ಮೆಡಿಕಲ್ ಶಾಪ್ ಇನ್ಯಾರೊ ನಡೆಸುತ್ತಿರುತ್ತಾರೆ ಇದರಿಂದ ಕೌಂಟರ್ ಡ್ರಗ್ಸ್ ಮಾರಾಟ ಹೆಚ್ಚಿದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕತಪಡಿಸಿದೆ.

High court warns D.Pharm colleges on issuing medical shop license

ನಮ್ಮ ವ್ಯವಸ್ಥೆಯೇ ಕುಸಿದು ಹೋಗಿದೆ ಭ್ರಷ್ಟಾಚಾರ ಎಂಬುದು ಅಧಿಕಾರಿಗಳು ಮತ್ತು ಸರ್ಕಾರದ ನಿಯಂತ್ರಣ ಕೈ ತಪ್ಪಿ ಹೋಗಿದೆ. ಮುಂದುವರಿದ ದೇಶಗಳಲ್ಲಿ ಹೀಗೇ ಇದೆಯಾ ಹೋಗಿ ನೋಡಿ. ೭೦ ವರ್ಷದಲ್ಲಿ ನಾವು ಸಾಧಿಸಿರೋದು ಇದೇನಾ? ನಿಮ್ಮ ಕಚೇರಿಗೆ, ನಿಮ್ಮ ದುಡಿಮೆಗೆ ಮೊದಲು ಕಟಿಬದ್ಧರಾಗಿ ಎಂದು ಹೈಕೋರ್ಟ್ ಹೇಳಿದೆ.

ಬೇಕಾಬಿಟ್ಟಿಯಾಗಿ ಮೆಡಿಕಲ್ ಶಾಪ್ ಲೈಸೆನ್ಸ್ ಗಳು ವಿತರಣೆ ಆಗಿದ್ದ ಕಾರಣ ಕೌಂಟರ್ ಡ್ರಗ್ಸ್ ಹೆಚ್ಚಾಗಿತ್ತು, ಅನೇಕರು ಮೆಡಿಕಲ್ ಶಾಪ್ ನಿಂದ ಅಮಲುಬರುವ ಪದಾರ್ಥಗಳನ್ನು ಪಡೆದು ಉಪಯೋಗಿಸುತ್ತಿದ್ದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಕೌಂಟರ್ ಡ್ರಗ್ಸ್ ಹೆಚ್ಚಾಗುತ್ತಿರುವ ಬಗ್ಗೆ ಬೆಂಗಳೂರು ಪೊಲೀಸರು ಇತ್ತೀಚೆಗೆ ಮಾಹಿತಿ ನೀಡಿದ್ದರು.

English summary
High court warns D.pharm colleges on negligence in issuing medical shop license. High court says it could lead to increase in counter drug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X