ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿ.ನಾಗರಾಜ್‌ಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 21 : ಮಾಜಿ ರೌಡಿ ಶೀಟರ್ ವಿ.ನಾಗರಾಜ್ ಮತ್ತು ಅವರ ಇಬ್ಬರು ಪುತ್ರರಿಗೆ ಕರ್ನಾಟಕ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಮೇ ತಿಂಗಳಿನಲ್ಲಿ ತಮಿಳುನಾಡಿನಲ್ಲಿ ವಿ.ನಾಗರಾಜ್ ಬಂಧಿಸಲಾಗಿತ್ತು.

ಗುರುವಾರ ಹೈಕೋರ್ಟ್ ವಿ.ನಾಗರಾಜ್, ಪುತ್ರರಾದ ಶಾಸ್ತ್ರೀ, ಗಾಂಧಿಗೆ ಏಳು ಪ್ರಕರಣದಲ್ಲಿ ಜಾಮೀನು ನೀಡಲಾಗಿದೆ. ಮೇ ತಿಂಗಳಿನಲ್ಲಿ ತಮಿಳುನಾಡಿನಲ್ಲಿ ನಾಗರಾಜ್ ಬಂಧಿಸಲಾಗಿತ್ತು.

ರೌಡಿ ಶೀಟರ್ ನಾಗನ ಪತ್ತೆಯ ಹಿಂದಿನ ರೋಚಕ ಕಹಾನಿರೌಡಿ ಶೀಟರ್ ನಾಗನ ಪತ್ತೆಯ ಹಿಂದಿನ ರೋಚಕ ಕಹಾನಿ

High court grants bail to Rowdy sheeter V.Nagaraj

2 ಲಕ್ಷ ರೂ. ಬಾಂಡ್, ಪ್ರತಿ ಗುರುವಾರ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂಬ ಷರತ್ತಿನ ಅನ್ವಯ ಜಾಮೀನು ಮಂಜೂರು ಮಾಡಲಾಗಿದೆ. ವಿ.ನಾಗರಾಜ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದಾಗ ಅಪಾರ ಪ್ರಮಾಣದ ನಿಷೇಧಿತ ನೋಟುಗಳು ಪತ್ತೆಯಾಗಿದ್ದವು.

ಸಿದ್ದರಾಮಯ್ಯ ಪಿಎ, ದಿನೇಶ್ ಗುಂಡೂರಾವ್ ವಿರುದ್ಧ ಬಾಂಬ್ ನಾಗ ಆರೋಪಸಿದ್ದರಾಮಯ್ಯ ಪಿಎ, ದಿನೇಶ್ ಗುಂಡೂರಾವ್ ವಿರುದ್ಧ ಬಾಂಬ್ ನಾಗ ಆರೋಪ

ಮನೆಯ ಮೇಲೆ ದಾಳಿ ನಡೆಯುತ್ತಿದ್ದಂತೆ ನಾಗರಾಜ್ ಮತ್ತು ಇಬ್ಬರು ಪುತ್ರರು ತಲೆಮರೆಸಿಕೊಂಡಿದ್ದರು. ಸುಮಾರು 27 ದಿನಗಳ ಬಳಿಕ ತಮಿಳುನಾಡಿನಲ್ಲಿ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು.

ತಲೆಮರೆಸಿಕೊಂಡಿದ್ದಾಗಲೇ 2 ವಿಡಿಯೋಗಳನ್ನು ಬಿಡುಗಡೆ ಮಾಡಿದ್ದ ನಾಗ ಸಿದ್ದರಾಮಯ್ಯ ಪಿಎ ಸೇರಿದಂತೆ ಹಲವರ ವಿರುದ್ಧ ಆರೋಪಗಳನ್ನು ಮಾಡಿದ್ದ.

English summary
High Court of Karnataka on September 21, 2017 granted bail to V.Nagaraj and his two sons. Former corporator V.Nagaraj was held by the Bengaluru police at Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X