ಮಾರ್ಚ್‌ 12ರ ತನಕ ನಲಪಾಡ್‌ಗೆ ಬಿಡುಗಡೆ ಭಾಗ್ಯವಿಲ್ಲ

Posted By: Gururaj
Subscribe to Oneindia Kannada

ಬೆಂಗಳೂರು, ಮಾರ್ಚ್ 9 : ಮೊಹಮ್ಮದ್ ನಲಪಾಡ್‌ಗೆ ಜೈಲು ವಾಸ ತಪ್ಪಿಲ್ಲ. ಕರ್ನಾಟಕ ಹೈಕೋರ್ಟ್ ಜಾಮೀನು ಅರ್ಜಿಯ ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿದೆ. ನಲಪಾಡ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ ಶುಕ್ರವಾರ ನಡೆಯಿತು. ನ್ಯಾಯಮೂರ್ತಿ ಹರೀಶ್ ಕುಮಾರ್ ಅವರು ಎರಡೂ ಕಡೆಯ ವಾದವನ್ನು ಆಲಿಸಿದರು.

ನಲಪಾಡ್ ಪ್ರಕರಣ: ತಲೆಮರೆಸಿಕೊಂಡ ಆರೋಪಿಗಾಗಿ ಹುಡುಕಾಟ

ಮೊಹಮ್ಮದ್ ನಲಪಾಡ್ ಪರವಾಗಿ ಹಿರಿಯ ವಕೀಯ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದರು. ವಿದ್ವತ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶ್ಯಾಮ ಸುಂದರ್ ವಾದ ಮಂಡನೆ ಮಾಡಿದರು.

High Court adjourned Mohammed Nalapad bail application hearing

ಮೊಹಮ್ಮದ್ ನಲಪಾಡ್ ಪರವಾಗಿ ವಾದ ಮಂಡನೆ ಮಾಡಿದ ಸಿ.ವಿ.ನಾಗೇಶ್ ಅವರು, ಇದು ಜಾಮೀನು ನೀಡಬಹುದಾದದ ಆರೋಪ. ಎಲ್ಲಾ ಆರೋಪಿಗಳಿಗೂ ಜಾಮೀನು ನೀಡಬಹುದಾಗಿದೆ ಎಂದರು.

ನಲಪಾಡ್ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ

ಸಿ.ವಿ.ನಾಗೇಶ್ ವಾದಕ್ಕೆ ಎಸ್‌ಪಿಪಿ ಶ್ಯಾಮ್ ಸುಂದರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವರು ಮಾಡಿದ ವಾದದ ಅಂಶಗಳು ಇಲ್ಲಿವೆ...

* ನಲಪಾಡ್ ನೇರವಾಗಿ ಹಲ್ಲೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ನಾವು ಮುಚ್ಚಿದ ಲಕೋಟೆಯಲ್ಲಿ ನಿಮಗೆ ಸಿಡಿ ಕೊಡಲಿದ್ದೇವೆ. ತನಿಖಾಧಿಕಾರಿಗಳು ಕೋರ್ಟ್‌ಗೆ ಸಿಡಿ ಕೊಡುತ್ತಾರೆ. ಸಿಡಿಯಲ್ಲಿರುವ ದೃಶ್ಯಾವಳಿಯನ್ನೊಮ್ಮೆ ವೀಕ್ಷಿಸಿ. ಆಗ ನಲಪಾಡ್ ಗೂಂಡಾಗಿರಿ ಗೊತ್ತಾಗಲಿದೆ ಎಂದು ವಾದಿಸಿದರು.

* ವಿದ್ವತ್‌ ಬದಲು ಮಲ್ಯ ಆಸ್ಪತ್ರೆಯ ವೈದ್ಯ ಆನಂದ್‌ಗೆ ಜೀವ ಬೆದರಿಕೆ ಇದೆ. ಆದ್ದರಿಂದ, ವೈದ್ಯ ಆನಂದ್ ವರದಿಯನ್ನು ತಿರುಚಿ ನೀಡಿದ್ದಾರೆ. ಡಿಸ್ ಚಾರ್ಜ್ ಮಾಡಿದ ವರದಿ ಹ್ಯಾರೀಸ್ ಅವರ ಕೈಗೆ ಸಿಕ್ಕಿದ್ದು ಹೇಗೆ? ಅದನ್ನು ಅವರು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

* ವೈದ್ಯ ಆನಂದ್ ಮೇಲೆ ಸಾಕಷ್ಟು ಗುಮಾನಿಗಳಿವೆ. ಅವರು ನಲಪಾಡ್ ಫ್ಯಾಮಿಲಿ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಇಲ್ಲೇ ತನಿಖಾಧಿಕಾರಿಗಳ ತನಿಖೆಯಲ್ಲಿ ನಲಪಾಡ್ ಫ್ಯಾಮಿಲಿ ಮಧ್ಯಪ್ರವೇಶಿಸಿದೆ. ಮುಂಚೆ ವೈದ್ಯ ಆನಂದ್ ವಿದ್ವತ್‌ಗೆ ಪ್ಲಾಸ್ಟಿಕ್ ಸರ್ಜರಿ ಅವಶ್ಯಕತೆ ಇದೆ ಎಂದು ಹೇಳಿದ್ದರು. ಇದೀಗ ರಿಪೋರ್ಟ್ ವಿದ್ವತ್ ವಿರುದ್ಧವಾಗಿ ನೀಡಿದ್ದಾರೆ. ನಲಪಾಡ್ ಫ್ಯಾಮಿಲಿ ತನಿಖೆಯ ದಿಕ್ಕು ತಪ್ಪಿಸುತ್ತಿದೆ.

* ವೈದ್ಯ ಆನಂದ್ ವಿರುದ್ಧ ಈ ಕುರಿತು ತನಿಖೆಯಾಗಬೇಕು. ತನಿಖಾಧಿಕಾರಿಗಳಿಗೂ ಸಿಗದ ವೈದ್ಯಕೀಯ ದಾಖಲೆಗಳು ಆರೋಪಿ ಪರ ವಕೀಲರಿಗೆ ಹೇಗೆ ಸಿಕ್ಕವು. ದಾಖಲಾತಿಗಳು ಲೀಕ್ ಆಗಿರುವುದು ನಲಪಾಡ್ ತನಿಖೆಯಲ್ಲಿ ಮೂಗು ತೂರಿಸುತ್ತಿರುವುದನ್ನು ತೋರಿಸುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shantinagar Congress MLA N.A.Haris son Mohammed Nalapad bail application hearing adjourned by Karnataka High Court to March 12, 2018. The 63rd City Civil and Sessions Court Bengaluru rejected bail to Mohammed Nalapad.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ