ರಾಘವೇಶ್ವರ ಸ್ವಾಮೀಜಿ ಸಂತರನ್ನು ಒಗ್ಗೂಡಿಸುತ್ತಿರುವುದೇಕೆ?

By: ಶಿಶಿರ ಅಂಗಡಿ
Subscribe to Oneindia Kannada

ಬೆಂಗಳೂರು, ಜೂನ್ 16: ಸನಾತನ ಧರ್ಮದ ಉಳಿವಿಗಾಗಿ, ಸಮತರಲ್ಲಿ ಒಗ್ಗಟ್ಟು ಮೂಡಿಸುವ ಸಲುವಾಗಿ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಯವರು ಸಂತರ ಸಂಘಟನೆಯನ್ನು ಮಾಡುತ್ತಿದ್ದಾರೆ.

ಆದರೆ 'ಯಾಕೆ ಸುಮ್ಮನೆ ಅವರು ಸಾವಿರಾರು ಸಂತರನ್ನು ಒಂದೆಡೆ ಸೇರಿಸುವ ಸಾಹಸಕ್ಕೆ ಕೈಹಾಕುತ್ತಿದ್ದಾರೆ? ಅವರ ಸ್ವಾರ್ಥಕ್ಕಿರಬಹುದು ಎಂದು ಕೆಲವರು ಹಿಂಬದಿಯಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ. ಆದರೆ ಸ್ವಾಮೀಜಿಗಳ ನೈಜ ಉದ್ದೇಶ ಏನು ಎಂಬುದನ್ನು ತಿಳಿಯದೆ ಮಾತನಾಡುವುದು ತರವಲ್ಲ.

ರಾಘವೇಶ್ವರ ಭಾರತಿ ಗುರುಗಳು ಅಂದೇ ಘೋಷಿಸಿದ್ದರು, 'ಸಂತ ಸಂಸ್ಕೃತಿಯನ್ನೇ ನಾಶ ಮಾಡಲು ಹುನ್ನಾರ ನಡೆಯುತ್ತಿದೆ, ಸಂತ ಸಮಾಜದ ನಿರ್ಮಾಣ ಮಾಡುತ್ತಿರುವುದು ನಮಗಾಗಿ ಅಲ್ಲ, ಮುಂದಿನ ದಿನಗಳಲ್ಲಿ ಎಲ್ಲ ಸಂತರಿಗೂ ಇಂತಹ ಪರಿಸ್ಥಿತಿ ಬರುತ್ತದೆ, ಅಂತಹ ಸಂದರ್ಭಗಳಲ್ಲಿ ನಾವು ಒಟ್ಟಾಗಿ ಹೋರಾಡಬೇಕು. ಇಲ್ಲದಿದ್ದರೆ ಹಿಂದೂ ಧರ್ಮ ಸಂಸ್ಕೃತಿಯನ್ನೇ ನಾಶಮಾಡಬಿಡಬಹದು. ಹಾಗಾಗಿ ಸಂತ ಸಂಘಟನೆ ಅತ್ಯಗತ್ಯ' ಎಂದು.

Here is why sri Raghaveswara Swamiji organising Santa Samavesh

ಇಂದು‌ ಎಲ್ಲೆಡೆ ಸಂತರ ಮೇಲೆ ಆಕ್ರಮಣಗಳು ನಡೆಯುತ್ತಿವೆ. ಸರ್ಕಾರದ ಕಪಿಮುಷ್ಠಿಯಲ್ಲಿದ್ದ ಕೂಡ್ಲಿ ಶೃಂಗೇರಿ ಮಠ ಇಷ್ಟು ದಿನ ಪಡಬಾರದ ಪಾಡು ಅನುಭವಿಸಿತ್ತು. ಇದೀಗ ಅದು ಸ್ವತಂತ್ರವಾಗಿದೆ.

ಸೋಸಲೆ ಮಠದ ವಿಚಾರವನ್ನು ಮುಂದಿಟ್ಟುಕೊಂಡು ಬೇರೆ ಬೇರೆ ಮಠಗಳನ್ನು ಕಬಳಿಸುವ ಹುನ್ನಾರ ಚಾಲ್ತಿಯಲ್ಲಿದೆ. ಹೀಗಿರುವಾಗ ಧರ್ಮಗುರುಗಳು ಹಿಂದುತ್ವದ ರಕ್ಷಣೆಗೆ ಇಳಿಯಬೇಕು ಮತ್ತು ನಾವೆಲ್ಲ ಅವರ‌ ಹಿಂದೆ ನಿಲ್ಲಬೇಕು. ಇಂತಹ ಹೋರಾಟಗಳಿಗೆ ಸಂತರು ಸಂಘಟಿತರಾಗುವುದು ಅತಿ ಮುಖ್ಯ.

Here is why sri Raghaveswara Swamiji organising Santa Samavesh

ಈಗ ನೋಡಿ ಪರಮಪೂಜ್ಯ ಶೃಂಗೇರಿ ಶ್ರೀಗಳಿಗೆ ಕಾರ್ಯಕ್ರಮದಲ್ಲಿ ಸರಿಯಾದ ಗೌರವ ಕೊಡದೆ ಅವಮಾನಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದು ಕೇವಲ ಪ್ರಾರಂಭ ಅಷ್ಟೇ, ಇಂತಹ ಸಂದರ್ಭಗಳು ಯಾರನ್ನೂ ಬಿಡುವುದಿಲ್ಲ ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.

Here is why sri Raghaveswara Swamiji organising Santa Samavesh

ನಾವು ಇಂತಹ ವಿಷಯಗಳನ್ನು ಒಟ್ಟಾಗಿ ಖಂಡಿಸುವ ಮೂಲಕ ಮುಂದೊಂದು ದಿನ ಬರುವ ದೊಡ್ಡ ಆಪತ್ತನ್ನು ತಡೆಯಬೇಕು. ಇಂಥವುಗಳನ್ನು ಯಾರೂ ಸಹ ತಮ್ಮ ರಾಜಕೀಯ ಲಾಭಗಳಿಗೆ ಬಳಸಿಕೊಳ್ಳಬಾರದು. ಇಂತಹ ಕುತಂತ್ರಗಳ ವಿರುದ್ಧ ಎಲ್ಲರೂ ಹೋರಾಡಬೇಕು. ಧರ್ಮಯುದ್ಧದಲ್ಲಿ ಕೈಜೋಡಿಸುವುದು ಎಲ್ಲರ ಕರ್ತವ್ಯವಾಗಿದೆ. ಸಂತರ ಸತ್ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲೋಣ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To create unity in the religious scholars and saints, Raghaveswara Bharati Swamini of Ramachandrapura math has oftenly organising Santa Samavesha (Saints conference). It will definitly helpful to protect Sanatana culture, the devotees of Ramachandrapur math confidently told.
Please Wait while comments are loading...