ಮೆಟ್ರೋ ಹಸಿರು ಲೈನ್ ನ ಬಗ್ಗೆ ಇಲ್ಲಿದೆ ಮಾಹಿತಿ...

Posted By:
Subscribe to Oneindia Kannada

ಬೆಂಗಳೂರು, ಜೂನ್ 17: ಬೆಂಗಳೂರು ಮೆಟ್ರೋ ಮೊದಲ ಹಂತದ ಹಸಿರು ಲೈನ್ ಅನ್ನು ವಿಧಾನಸೌಧದಲ್ಲಿ ಶನಿವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟನೆ ಮಾಡಿದರು. ಕೊಚ್ಚಿ ಮೆಟ್ರೋ ಹಾಗೂ ಬೆಂಗಳೂರಿನ ಮೆಟ್ರೋ ಹಸಿರು ಲೈನ್ ಒಂದೇ ದಿನದಲ್ಲಿ ಉದ್ಘಾಟನೆಯಾಯಿತು.

ಬೆಂಗಳೂರಿನಲ್ಲಿ ಈಗಾಗಲೇ ಉತ್ತರ-ದಕ್ಷಿಣ ಭಾಗವನ್ನು ಸಂಪರ್ಕಿಸುವ ಅಂದರೆ ನಾಗಸಂದ್ರದಿಂದ ಯಲಚೇನಹಳ್ಳಿ ಮಾರ್ಗವನ್ನು ಹಸಿರು ಲೈನ್ ಎನ್ನುತ್ತಾರೆ. ಆ ಮಾರ್ಗಕ್ಕೆ ಶನಿವಾರ ರಾಷ್ಟ್ರಪತಿಗಳು ಚಾಲನೆ ನೀಡಿದ್ದಾರೆ. ಇನ್ನು ಪೂರ್ವ-ಪಶ್ಚಿಮ ಮೈಸೂರು ರಸ್ತೆ ಹಾಗೂ ಬೈಯಪ್ಪನಹಳ್ಳಿಯನ್ನು ಸಂಪರ್ಕಿಸುವ ಪರ್ಪಲ್ ಲೈನ್ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ.

ಸಂಪಿಗೆ ರಸ್ತೆಯಿಂದ ಶುರುವಾಯ್ತು ಯಲಚೇನ ಹಳ್ಳಿ ಮೆಟ್ರೊ ಪಯಣ

ಒಟ್ಟಾರೆ ಬೆಂಗಳೂರಿನ ಬಹುತೇಕ ಭಾಗ ಮೆಟ್ರೋದಿಂದ ಸಂಪರ್ಕ ಪಡೆದಂತಾಗಿದೆ. ಈ ಯೋಜನೆಯ ಬಗ್ಗೆ ಮತ್ತಷ್ಟು ವಿವರಗಳು ನೀಡುವ ಉದ್ದೇಶದಿಂದಲೇ ಈ ಲೇಖನ ಸಿದ್ಧವಾಗಿದೆ. ಕೆಲವು ಮೂಲಪ್ರಶ್ನೆಗಳಿಗೆ ಉತ್ತರ ನೀಡಲಾಗಿದ್ದು, ಪ್ರಶ್ನೋತ್ತರ ಮಾದರಿಯಲ್ಲೇ ಇರುತ್ತದೆ.

ಏನು ಆ ಪ್ರಶ್ನೆಗಳು ಅಂತ ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಗಳನ್ನು ಓದಿರಿ.

24.2 ಕಿ.ಮೀ ವ್ಯಾಪ್ತಿ

24.2 ಕಿ.ಮೀ ವ್ಯಾಪ್ತಿ

ಉತ್ತರ-ದಕ್ಷಿಣ ಭಾಗಗಳನ್ನು ಸಂಪರ್ಕಿಸುವ ಈ ಹಸಿರು ಲೈನ್ ಸಂಪಿಗೆ ರಸ್ತೆಯ ಮಂತ್ರಿ ಸ್ಕ್ವಯರ್ ನಿಂದ ಯಲಚೇನಹಳ್ಳಿಯನ್ನು ಸಂಪರ್ಕಿಸುತ್ತದೆ. ಭಾನುವಾರದಿಂದ ಇದರ ವಾಣಿಜ್ಯ ಚಟುವಟಿಕೆ ಆರಂಭವಾಗುತ್ತದೆ. ಒಟ್ಟಾರೆ ನಾಗಸಂದ್ರದಿಂದ ಯಲಚೇನಹಳ್ಳಿ 24.2 ಕಿ.ಮೀ ವ್ಯಾಪ್ತಿಯಲ್ಲಿ 24 ನಿಲ್ದಾಣದ ಮೂಲಕ ಸಂಚಾರ ಮಾಡುತ್ತದೆ.

ದರ ಎಷ್ಟು?

ದರ ಎಷ್ಟು?

ಸದ್ಯಕ್ಕೆ ಎರಡು ತುದಿಯ ಮಧ್ಯೆ ದರ ನಿಗದಿಯಾಗಿದೆ. ಅಂದರೆ ನಾಗಸಂದ್ರದಿಂದ ಯಲಚೇನಹಳ್ಳಿ ಹಾಗೂ ಯಲಚೇನಹಳ್ಳಿಯಿಂದ ನಾಗಸಂದ್ರಕ್ಕೆ ಐವತ್ತೈದು ರುಪಾಯಿ ಎಂದು ನಿಗದಿ ಪಡಿಸಲಾಗಿದೆ. ಆದರೆ ನಿಲ್ದಾಣಕ್ಕೆ ಇಂತಿಷ್ಟು ಎಂಬ ದರವು ಮೆಟ್ರೋದ ವೆಬ್ ಸೈಟ್ ನಲ್ಲಿ ಕೂಡ ದೊರೆಯುತ್ತಿಲ್ಲ.

ಅರ್ಧ ಗಂಟೆ ಸಮಯ ಸಾಕು

ಅರ್ಧ ಗಂಟೆ ಸಮಯ ಸಾಕು

ಉತ್ತರ ತುದಿಯಿಂದ ದಕ್ಷಿಣದ ತುದಿ, ಅದೇ ರೀತಿ ದಕ್ಷಿಣ ತುದಿಯಿಂದ ಉತ್ತರ ತುದಿ ಮುಟ್ಟಲು ಮೆಟ್ರೋದಲ್ಲಿ ಅರ್ಧ ಗಂಟೆ ಸಮಯ ಸಾಕು.

ನಾಲ್ಕು ಕಿಲೋಮೀಟರ್ ಸುರಂಗ ಮಾರ್ಗ

ನಾಲ್ಕು ಕಿಲೋಮೀಟರ್ ಸುರಂಗ ಮಾರ್ಗ

ಸಂಪಿಗೆ ರಸ್ತೆಯಿಂದ ನ್ಯಾಷನಲ್ ಕಾಲೇಜಿನವರೆಗೆ ನಾಲ್ಕು ಕಿಲೋಮೀಟರ್ ಸುರಂಗ ಮಾರ್ಗ, ಉಳಿದಿದ್ದು ಎಲಿವೇಟಡ್ ಮಾರ್ಗ.

ಇವು ನಾಲ್ಕು ಪ್ರಮುಖವಾದವು

ಇವು ನಾಲ್ಕು ಪ್ರಮುಖವಾದವು

ಬನಶಂಕರಿ, ಲಾಲ್ ಬಾಗ್, ಕೆಆರ್ ಮಾರುಕಟ್ತೆ ಹಾಗೂ ಸೌತ್ ಎಂಡ್ ವೃತ್ತ ಪ್ರಮುಖವಾದವು. ಇಲ್ಲೆಲ್ಲ ಬಸ್ ಡಿಪೋ ಕೂಡ ಇವೆ

ವಿವಿಧೆಡೆ ಪಾರ್ಕಿಂಗ್ ವ್ಯವಸ್ಥೆ

ವಿವಿಧೆಡೆ ಪಾರ್ಕಿಂಗ್ ವ್ಯವಸ್ಥೆ

ಚಿಕ್ಕಪೇಟೆ, ಕೆ ಆರ್ ಮಾರುಕಟ್ಟೆ, ಲಾಲ್ ಬಾಗ್, ನ್ಯಾಷನಲ್ ಕಾಲೇಜು, ಜೆಪಿನಗರ, ಸೌಂತ್ ಎಂಡ್ ಮತ್ತು ಯಲಚೇನಹಳ್ಳಿ ಮುಂತಾದೆಡೆ ಪಾರ್ಕಿಂಗ್ ವ್ಯವಸ್ಥೆ ಇದೆ.

ಮಾರ್ಗ ಬದಲಿಸಲು ಮೆಜೆಸ್ಟಿಕ್ ನಲ್ಲಿ ಇಳಿಯಿರಿ

ಮಾರ್ಗ ಬದಲಿಸಲು ಮೆಜೆಸ್ಟಿಕ್ ನಲ್ಲಿ ಇಳಿಯಿರಿ

ಪ್ರಯಾಣಿಕರು ಹಸಿರು ಮಾರ್ಗದಿಂದ ಪರ್ಪಲ್ ಮಾರ್ಗಕ್ಕೆ ಬದಲಾಯಿಸಿಕೊಳ್ಳ ಬೇಕಾದರೆ ಮೆಜೆಸ್ಟಿಕ್ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ.

ಮೆಟ್ರೋ ಕಾರ್ಡ್, ಟೋಕನ್ ಪಡೆಯುವುದು ಹೇಗೆ?

ಮೆಟ್ರೋ ಕಾರ್ಡ್, ಟೋಕನ್ ಪಡೆಯುವುದು ಹೇಗೆ?

ಇದರ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿರಿ..

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ticket fare, travelling time, number of stops and other details of Bengaluru Metro green line is here.
Please Wait while comments are loading...