ಇಂದಿರಾ ಕ್ಯಾಂಟೀನ್ ನ ಮೆನು, ದರ ಮತ್ತಿತರ ಮಾಹಿತಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 20: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ನ ಮೆನು ಮತ್ತಿತರ ಮಾಹಿತಿ ಇದು. ಪ್ರತಿ ಕ್ಯಾಂಟೀನ್ ನಲ್ಲಿ ನಿತ್ಯವೂ ಮುನ್ನೂರು ಮಂದಿಗೆ ಊಟ-ತಿಂಡಿಯನ್ನು ಉಣಬಡಿಸಲಾಗುತ್ತದೆ. ಆಗಸ್ಟ್ ಹದಿನೈದರಂದು ಯೋಜನೆಗೆ ಚಾಲನೆ ದೊರೆಯಲಿದೆ.

ಶಿಷ್ಟಾಚಾರದ ಹೆಸರಿನಲ್ಲಿ ಒಳ್ಳೆ ಚಾನ್ಸ್ ಮಿಸ್ ಮಾಡ್ಕೊಂಡ್ರಾ ಸಿದ್ದರಾಮಯ್ಯ?

ಈಗಾಗಲೇ ಟೆಂಡರ್ ಕರೆಯಲಾಗಿದೆ. ಕ್ಯಾಂಟೀನ್ ನಲ್ಲಿ ಸಿಗುವ ಊಟ-ತಿಂಡಿಯ ಮೆನು ಏನೇನು ಇರಬೇಕು ಎಂದು ಪಟ್ಟಿ ಸಿದ್ಧಪಡಿಸಲಾಗಿದೆ. ಸಾರ್ವಜನಿಕರಿಗೆ ರುಚಿ ಹಾಗೂ ಶುಚಿಯಾಗಿ ಊಟ-ತಿಂಡಿಯನ್ನು ವಿತರಣೆ ಮಾಡಬೇಕು ಎಂದು ಸೂಚನೆಯನ್ನು ನೀಡಲಾಗಿದೆ. ಅಂದಹಾಗೆ ಟೆಂಡರ್ ಗೆ ಅರ್ಜಿ ಹಾಕಲು ಜುಲೈ ಹತ್ತು ಕೊನೆ ದಿನವಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯ ಇಪ್ಪತ್ತೇಳು ವಿಧಾನಸಭಾ ಕ್ಷೇತ್ರಗಳಲ್ಲಿ ಅಡುಗೆ ಮನೆಗಳು ಹಾಗೂ ನೂರಾ ತೊಂಬತ್ತೆಂಟು ವಾರ್ಡ್ ಗಳಲ್ಲಿ ಒಂದೊಂದು ಕ್ಯಾಂಟೀನ್ ನಿರ್ಮಾಣ ಆಗಲಿದೆ. ಇನ್ನು ಇಪ್ಪತ್ತೇಳು ಕ್ಷೇತ್ರಗಳಲ್ಲಿ ಐದು ಕ್ಷೇತ್ರವನ್ನು ಮಹಿಳಾ ಸ್ವಸಹಾಯ ಗುಂಪುಗಳಿಗೆ ಅಂತಲೇ ಮೀಸಲಿಡಲಾಗಿದೆ.

ಸಿದ್ದರಾಮಯ್ಯನವರಿಂದ ರಾಜ್ಯಕ್ಕೆ 1.29 ಲಕ್ಷ ಕೋಟಿ 'ಸಾಲ ಭಾಗ್ಯ'

ಅಡುಗೆಯನ್ನು ಸಿದ್ಧಪಡಿಸುವ, ಬಡಿಸುವ ಮತ್ತು ಊಟ-ತಿಂಡಿ ಪೂರೈಸುವ ಕೆಲಸವನ್ನು ಮಹಿಳಾ ಸ್ವಸಹಾಯ ಗುಂಪುಗಳೇ ಮಾಡಲಿವೆ. ಸಾರ್ವಜನಿಕರಿಗೆ ಐದು ರುಪಾಯಿಗೆ ತಿಂಡಿ ಹಾಗೂ ಹತ್ತು ರುಪಾಯಿಗೆ ಊಟ ವಿತರಣೆ ಮಾಡಬೇಕು.

ತಿಂಡಿ, ಊಟಕ್ಕೆ ಏನೇನು?

ತಿಂಡಿ, ಊಟಕ್ಕೆ ಏನೇನು?

ಇಡ್ಲಿ- ಚಟ್ನಿ ಅಥವಾ ಪುಳಿಯೋಗರೆ, ಚಿತ್ರಾನ್ನ, ಖಾರಾಬಾತ್, ಪೊಂಗಲ್, ವಾಂಗೀಬಾತ್ ಮಾಡಲಾಗುತ್ತದೆ. ಊಟಕ್ಕೆ ಎರಡು ಆಯ್ಕೆ ಇರುತ್ತದೆ. ಅನ್ನ, ಸಾಂಬಾರು, ಮೊಸರನ್ನ, ಚಟ್ನಿ ಅಥವಾ ಬಿಸಿಬೇಳೆಬಾತ್, ಟೊಮೆಟೊ ಬಾತ್, ವಾಂಗೀಬಾತ್ ಈ ಪೈಕಿ ಯಾವುದಾದರೂ ಒಂದನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು.

ಎಷ್ಟೊತ್ತಿಗೆ ಮಾರಾಟ ಮಾಡುತ್ತಾರೆ

ಎಷ್ಟೊತ್ತಿಗೆ ಮಾರಾಟ ಮಾಡುತ್ತಾರೆ

ಬೆಳಗ್ಗೆ ಏಳೂ ಮೂವತ್ತರಿಂದ ಹತ್ತು ಗಂಟೆವರೆಗೆ ತಿಂಡಿ, ಮಧ್ಯಾಹ್ನ ಹನ್ನೆರಡು ಮೂವತ್ತರಿಂದ ಮೂರರವರೆಗೆ ಊಟ ಹಾಗೂ ರಾತ್ರಿ ಏಳು ಮೂವತ್ತರಿಂದ ಒಂಬತ್ತರವರಗೆ ಊಟ ದೊರೆಯುತ್ತದೆ.

ಕ್ಯಾಂಟೀನ್ ಮಾಹಿತಿ

ಕ್ಯಾಂಟೀನ್ ಮಾಹಿತಿ

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಗಳ ಸಂಖ್ಯೆಯ ಆಧಾರದಲ್ಲಿ ಕ್ಯಾಂಟೀನ್ ಮಾಡಲಾಗಿದೆ. ಸಿವಿ ರಾಮನ್ ನಗರ 7, ಹೆಬ್ಬಾಳ 8, ಪುಲಿಕೇಶಿ ನಗರ 7, ಸರ್ವಜ್ಞ ನಗರ 8, ಶಾಂತಿನಗರ 7, ಶಿವಾಜಿ ನಗರ 7, ಚಾಮರಾಜ ಪೇಟೆ 7, ಗಾಂಧಿನಗರ 7, ಗೋವಿಂದರಾಜನಗರ 9, ಮಹಾಲಕ್ಷ್ಮಿ ಲೇಔಟ್ 7, ಮಲ್ಲೇಶ್ವರ 7, ರಾಜಾಜಿನಗರ 7, ಬಿಟಿಎಂ ಲೇಔಟ್ 8, ಬಸವನಗುಡಿ 6, ಚಿಕ್ಕಪೇಟೆ 7, ಜಯನಗರ 7, ಪದ್ಮನಾಭನಗರ 8, ವಿಜಯನಗರ 8, ಕೆಆರ್ ಪುರಂ 9, ಮಹದೇವಪುರ 8, ರಾಜರಾಜೇಶ್ವರಿ ನಗರ 9, ಯಶವಂತಪುರ 5, ಬ್ಯಾಟರಾಯನಪುರ 7, ಯಲಹಂಕ 4, ಬೆಂಗಳೂರು ದಕ್ಷಿಣ 8, ಬೊಮ್ಮನಹಳ್ಳಿ 8, ದಾಸರಹಳ್ಳಿ 8.

ತಲಾ ಐದು ವಿಧಾನಸಭಾ ಕ್ಷೇತ್ರ

ತಲಾ ಐದು ವಿಧಾನಸಭಾ ಕ್ಷೇತ್ರ

ಒಬ್ಬ ಗುತ್ತಿಗೆದಾರರಿಗೆ ಐದು ವಿಧಾನಸಭಾ ಕ್ಷೇತ್ರಗಳ ಗುತ್ತಿಗೆ ವಹಿಸಲು ನಿರ್ಧಾರ. ಕನಿಷ್ಠ ಮೂರು ವರ್ಷ ಅನುಭವ ಇರಬೇಕು. ದಿನವೂ ಎರಡು ಸಾವಿರ ಮಂದಿಗೆ ಊಟ-ತಿಂಡಿ ಒದಗಿಸುವಂತಿರಬೇಕು. ವಿದ್ಯುತ್ ಹಾಗೂ ನೀರಿನ ಖರ್ಚನ್ನು ಗುತ್ತಿಗೆದಾರರೇ ವಹಿಸಿಕೊಳ್ಳಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka government announced about Indira canteen in the budget. Here is the details of menu, price etc of canteen.
Please Wait while comments are loading...