ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ತಪ್ಪಾಗದಂತೆ ಎಚ್ಚರ ವಹಿಸಿ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 3: ಇದು ಕ್ರೆಡಿಟ್ ಕಾರ್ಡ್ ಜಮಾನಾ. ಅನೇಕರಿಗೆ ಹೆಚ್ಚು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಹೊಂದುವುದೆಂದರೆ ಪ್ರತಿಷ್ಠೆಯ ಸಂಗತಿ. ಆದರೆ, ಹೆಚ್ಚಿನವರಿಗೆ ಕ್ರೆಡಿಟ್ ಕಾರ್ಡ್ ಉಪಯೋಗ ತಿಳಿದಿದ್ದರೂ, ಬಳಕೆಯಲ್ಲಿ ತಪ್ಪಾಗದಂತೆ ರಕ್ಷಿಸಿಕೊಳ್ಳುವ ಸೂಕ್ಷ್ಮ ತಿಳಿದಿರದು. ಈ ಕುರಿತು ಕೆಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. [ಇನ್ನು ಮುಂದೆ ಕ್ರೆಡಿಟ್ ಕಾರ್ಡ್ ಪಿನ್ ಅಂಚೆಯಲ್ಲಿ ಬರಲ್ಲ]

credit

  • ಕಡಿಮೆ ಅವಧಿಯಲ್ಲಿ ಅನೇಕ ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬೇಡಿ. ಹೀಗೆ ಮಾಡಿದರೆ ನಿಮ್ಮ ಮೇಲೆ ಅನುಮಾನ ಬರಬಹುದು. ಅಲ್ಲದೆ, ನೀವು ಸಾಲ ಪಡೆಯುವ ಹವ್ಯಾಸದವರು ಎಂಬ ಅರ್ಥ ಬರುತ್ತದೆ.
  • ಒಂದು ಕ್ರೆಡಿಟ್ ಕಾರ್ಡ್ ಓಪನ್ ಆದ ನಂತರ ಕನಿಷ್ಠ ಒಂದು ವರ್ಷವಾದರೂ ಆಕ್ಟಿವ್ ಆಗಿರಬೇಕು. ಒಂದು ಕ್ರೆಡಿಟ್ ಕಾರ್ಡ್ ಓಪನ್ ಆಗುವುದು ಮತ್ತು ಸ್ಥಗಿತಗೊಳ್ಳುವ ಅವಧಿ ಕಡಿಮೆಯಾದಷ್ಟೂ ನಿಮ್ಮ ಸಾಲ ನಿರ್ವಹಣೆ ಸಾಮರ್ಥ್ಯದ ಕುರಿತು ಅನುಮಾನ ಹೆಚ್ಚುತ್ತದೆ.
  • ಒಂದು ಕ್ರೆಡಿಟ್ ಕಾರ್ಡ್‌ ಉಪಯೋಗವಾಗಿರಲಿ ಅಥವಾ ಇಲ್ಲದಿರಲಿ. ಅದರ 12 ತಿಂಗಳುಗಳ ಇತಿಹಾಸವು ನಿಮ್ಮ ಆರ್ಥಿಕತೆ ಹಾಗೂ ಪುನರ್ ಪಾವತಿಯ ಸಾಮರ್ಥ್ಯವನ್ನು ತಿಳಿಸುತ್ತದೆ ಎಂಬುದು ಗಮನದಲ್ಲಿರಲಿ. [ಕೊನೆಗೂ ಕ್ರೆಡಿಟ್ ಕಾರ್ಡ್ ಕೊಟ್ಟ ಬ್ಯಾಂಕ್]
  • ನಿಮ್ಮ ಕಾರ್ಡ್‌ ಹೊಂದಿರುವ ಸಾಲದ ಗರಿಷ್ಠ ಮಿತಿ ಮುಟ್ಟುವವರೆಗೂ ಕಾಯಬೇಡಿ. ನಿಮ್ಮ ಸಾಲ ಮಿತಿಯ ಶೇ. 30ರಷ್ಟೇ ಉಪಯೋಗಿಸಿದರೆ ಅತ್ಯುತ್ತಮ. ನಿಮ್ಮ ಸಾಲದ ಗರಿಷ್ಠ ಮಿತಿವರೆಗೂ ಸಾಲ ಪಡೆಯುತ್ತಲೇ ಇದ್ದರೆ ಸಿಬಿಲ್ (Credit Information Bureau (India) Limited) ಕ್ರೆಡಿಟ್ ಸ್ಕೋರ್ ಋಣಾತ್ಮಕ ಪರಿಣಾಮ ತೋರಿಸುತ್ತದೆ.
  • ಆಡ್ ಆನ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಹಿಡಿತವಿರಲಿ. ಇಂತಹ ಕಾರ್ಡ್‌ಗಳನ್ನು ನಿತ್ಯ ಗಮನಿಸುತ್ತಿರಿ ಮತ್ತು ಶೀಘ್ರ ಸಾಲ ಪಾವತಿ. ಆಡ್ ಆನ್ ಕ್ರೆಡಿಟ್ ಕಾರ್ಡ್ ಮೇಲೆ ಸಾಲ ಬಾಕಿ ಉಳಿದರೆ, ಅದು ಕ್ರೆಡಿಟ್ ಕಾರ್ಡ್ ಮಾಲೀಕನ ಸಾಲದ ಪ್ರೊಫೈಲ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
  • ಕ್ರೆಡಿಟ್ ಕಾರ್ಡ್ ಮೂಲಕ ಹಣ ನಗದೀಕರಣ ಬೇಡ. ಇದು ಸಾಲ ಪಡೆಯುವುದಕ್ಕಿಂತ ದುಬಾರಿ ಕೃತ್ಯ ಎಂದು ಪರಿಗಣಿಸಲ್ಪಡುತ್ತದೆ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. [ಡೆಬಿಟ್ ಕಾರ್ಡ್ ಬಳಸಿ ಆದಾಯ ತೆರಿಗೆ ತುಂಬುವುದು ಹೇಗೆ?]
  • ಯಾವುದೇ ಹಣ ಪಾವತಿಯನ್ನು ತಪ್ಪಿಸಿಕೊಳ್ಳಬೇಡಿ. ಕ್ರೆಡಿಟ್ ಕಾರ್ಡ್ ಎಂಬುದು ಸಾಲದ ಅಸುರಕ್ಷಿತ ರೂಪ ಎಂಬುದನ್ನು ತಿಳಿದುಕೊಳ್ಳಬೇಕಾದದ್ದು ಬಹುಮುಖ್ಯ.
  • ನೆನಪಿಡಿ. ನೀವು ಕ್ರೆಡಿಟ್ ಕಾರ್ಡ್‌ ಅನ್ನು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಉಪಯೋಗಿಸುತ್ತಿದ್ದು, ನಿರಂತರವಾಗಿ ಸಾಲ ಮರುಪಾವತಿಸುತ್ತಿದ್ದರೆ, ನೀವು ಸಾಲದ ಕುರಿತು ಉತ್ತಮ ಇತಿಹಾಸವನ್ನು ಸೃಷ್ಟಿಸಿಕೊಂಡಿದ್ದೀರಿ ಎಂದರ್ಥ. ಅಲ್ಲದೆ, ಅತ್ಯುತ್ತಮ ಸಿಬಿಲ್ ಸ್ಕೋರ್ ಕೂಡ ದಾಖಲಾಗಿರುತ್ತದೆ. ಇದು ಸಾಲದಾತರಿಗೆ ನಿಮ್ಮ ಸಾಲ ಮರುಪಾವತಿಯ ಸಾಮರ್ಥ್ಯದ ಕುರಿತು ವಿಶ್ವಾಸ ಮೂಡಿಸುತ್ತದೆ.
  • ನಿಮ್ಮ ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಅನ್ನು ಎಚ್ಚರಿಕೆಯಿಂದ ನಿರಂತರವಾಗಿ ಗಮನಿಸುತ್ತಿರಿ. ಸ್ಟೇಟ್‌ಮೆಂಟ್ ನೀಡುವಾಗ ಬ್ಯಾಂಕ್ ತಪ್ಪು ಮಾಡಬಹುದು. ಯಾವುದೇ ತಪ್ಪು ನಿಮ್ಮ ಗಮನಕ್ಕೆ ಬಂದರೂ ತಕ್ಷಣ ಬ್ಯಾಂಕ್ ಸಂಪರ್ಕಿಸಿ ತಿಳಿಸಿ.
English summary
To make sure that you tread the credit path carefully, here is some suggestions to avoid credit mistakes. Remember, few credit mistakes on your credit card can hurt your Cibil score.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X