ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search

ಇದು ಕಾಡಲ್ಲ, ಡೆಂಟಲ್ ಕ್ಲೀನಿಕ್ ಅಂದ್ರೆ ನಂಬ್ತೀರಾ..?!

Subscribe to Oneindia Kannada
For Quick Alerts
ALLOW NOTIFICATIONS
For Daily Alerts
        Dento Jungle : ಇದು ಕಾಡಲ್ಲ, ಡೆಂಟಲ್ ಕ್ಲಿನಿಕ್ ಅಂದ್ರೆ ನಂಬಲೇಬೇಕು! | Oneindia Kannada

        ಬೆಂಗಳೂರು, ನವೆಂಬರ್ 07: ದಂತ ವೈದ್ಯರನ್ನು ಭೇಟಿ ಮಾಡೋದು ಅಂದ್ರೆ ಚಿಕ್ಕ ಮಕ್ಕಳಿಗೆ ಹೋಗಲಿ, ದೊಡ್ಡವರಿಗೂ ಭಯವೇ. ಅದಕ್ಕೆಂದೇ ಎಷ್ಟೋ ಜನ ಹಲ್ಲು ಪೂರ್ತಿ ಹಾಳಾಗುವವರೆಗೂ ಡೆಂಟಿಸ್ಟ್ ಗಳ ಬಳಿ ಹೋಗದೆ ಸುಮ್ಮನೆ ಕೂರುವುದುಂಟು. ಆದರೆ ಡೆಂಟಿಸ್ಟ್ ಗಳ ಬಳಿ ಹೋಗುವುದಕ್ಕೆ ಭಯಪಡುವ ಬದಲು ಅತ್ಯಂತ ಖುಷಿಯಿಂದ ರೋಗಿಗಳು ಬರುವಂತಾಗಬೇಕೆಂಬ ಕಾರಣಕ್ಕೆ ಬೆಂಗಳೂರಿನ ಜೆಪಿ ನಗರದಲ್ಲಿ 'ವಾತ್ಸಲ್ಯ ಡೆಂಟಲ್-ಡೆಂಟೋ ಜಂಗಲ್' ಹೆಸರಿನಲ್ಲಿ ಕ್ಲಿನಿಕ್ ವೊಂದು ತಲೆಯೆತ್ತಿದೆ.

        Here is a dental clinic which looks same like a forest!

        ಮುಖ್ಯವಾಗಿ ಚಿಕ್ಕ ಮಕ್ಕಳಲ್ಲಿ ಡೆಂಟಲ್ ಕ್ಲಿನಿಕ್ ಗಳ ಬಗ್ಗೆ ಭಯ ಹೋಗಲಾಡಿಸುವ ಉದ್ದೇಶ ಈ ಕ್ಲಿನಿಕ್ ನದ್ದು. ಈ ಕ್ಲಿನಿಕ್ ನ ವಿಶೇಷತೆ ಏನಂದ್ರೆ, ಇದು ಪಕ್ಕಾ ಕಾಡಿನ ಹಾಗೇ ಇದೆ! ಹೌದು, ಕಾಡಿನ ವಾತಾವರಣವನ್ನೇ ಇಲ್ಲಿ ಬಿಂಬಿಸಲಾಗಿದೆ.

        ಕ್ಲಿನಿಕ್ ಗೆ ಅಡಿಯಿಡುತ್ತಿದ್ದಂತೆಯೇ ದೈತ್ಯ ಗೋರಿಲ್ಲಾವೊಂದು ನಿಮ್ಮನ್ನು ಸ್ವಾಗತಿಸುತ್ತದೆ. ನಂತರ ಬಸ್ಸಿನ ಆಕಾರದ ರೂಮುಗಳು, ಎಲ್ಲೆಲ್ಲೂ ಬೆಳೆದು ನಿಂತ ಮರದ ಆಕೃತಿ, ಬಣ್ಣ ಬಣ್ಣದ ಚಿತ್ತಾರ... ಈ ಎಲ್ಲವೂ, ಭೇಟಿ ನೀಡುವ ಮಕ್ಕಳಲ್ಲಿ ಭಯದ ಭಾವ ಹೋಗಲಾಡಿಸಿ ಹೊಸ ಉತ್ಸಾಹ ಬಿತ್ತುತ್ತವೆ.

        'ಥೇಟು ಪ್ಲೇಹೋಂನಂತೆಯೇ ಕಾಣುವ ಇದು ಯಾವುದೇ ಕಾರಣಕ್ಕೂ ಆಸ್ಪತ್ರೆಯ ಹಾಗೆ ಕಾಣಬಾರದೆಂದೇ ಇದನ್ನು ಹೀಗೆ ವಿನೂತನವಾಗಿ ರೂಪಿಸಲಾಗಿದೆ' ಎನ್ನುತ್ತಾರೆ ಈ ಕ್ಲಿನಿಕ್ ನ ರೂವಾರಿ ಡಾ.ಶ್ರೀವತ್ಸ್ ಭಾರಾಧ್ವಜ್.

        Here is a dental clinic which looks same like a forest!

        ಜಂಗಲ್ ಬುಕ್ ನ ಮೌಗ್ಲಿ ಹಾಗೂ ಬಗೀರ ಪಾತ್ರಗಳೂ ಈ ಕ್ಲಿನಿಕ್ಕಿನ ಗೋಡೆಗಳ ಮೇಲಿವೆ! ಒಟ್ಟಿನಲ್ಲಿ ಈ ಕ್ಲಿನಿಕ್ಕಿಗೆ ಭೇಟಿ ನೀಡುವವರಿಗೆ ಸಫಾರಿಗೆ ಹೋದ ಅನುಭವವಾದರೆ ಅಚ್ಚರಿಯೇನಿಲ್ಲ!

        ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

        English summary
        Here is a dental clinic which looks same like a forest! To make children happy while visiting the hospital the clinic is designed like a forest. The name of the hospital is Vatsalya Dental-dento Jungle. It is in JP Nagar Bengaluru.

        Oneindia ಬ್ರೇಕಿಂಗ್ ನ್ಯೂಸ್,
        ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

        X
        We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more