ಬೆಂಗಳೂರಿನ ಶಾಲಾ ಬಾಲಕಿ ಪೂಜಿತಾ ನಿಗೂಢ ನಾಪತ್ತೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 27 : ಬೆಂಗಳೂರಿನ ದೇವಯ್ಯ ಪಾರ್ಕ್ ನಿವಾಸಿ 13 ವರ್ಷದ ಪೂಜಿತ ಹುಬ್ಬಳ್ಳಿಯಲ್ಲಿ ಭಾನುವಾರ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ. [ಪೂಜಿತ ಹುಬ್ಬಳ್ಳಿಯಲ್ಲಿ ಪತ್ತೆ]

ಹಿಂದಿನ ಸುದ್ದಿ : ರಾಜಾಜಿನಗರದಲ್ಲಿರುವ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದ ಎಂ.ಕೆ. ಪೂಜಿತಾ ಎಂಬ, ನೋಡಲು ಲಕ್ಷಣವಾಗಿರುವ ಹದಿಮೂರು ವರ್ಷದ ಬಾಲಕಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ.

ಆಟಪಾಠದಲ್ಲಿ ಮುಂದಿದ್ದ ಬಾಲಕಿ ಪೂಜಿತಾ ಶಾಲೆಯ ಸಮವಸ್ತ್ರದಲ್ಲಿಯೇ ನಾಪತ್ತೆಯಾಗಿದ್ದು, ಆಕೆಯ ಪೋಷಕರನ್ನು ಚಿಂತೆಗೀಡು ಮಾಡಿದೆ. ಶಾಲೆಗೆ ಹೋಗಿದ್ದವಳು ಸಂಜೆ ಮರಳದಿದ್ದರಿಂದ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR no. 151/2016) ದಾಖಲಿಸಲಾಗಿದೆ.

Help trace missing girl Puujita from Bengaluru

ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಓದಲು ಮತ್ತು ಮಾತಾಡಲು ಬಲ್ಲವಳಾಗಿರುವ ಪೂಜಿತಾ ಬೀಳಿ ಬಣ್ಣದ, ಕಂದು ಪಟ್ಟಿಗಳಿರುವ ಅಂಗಿ ಮತ್ತು ಕಂದು ಬಣ್ಣದ ಸ್ಕರ್ಟ್ ತೊಟ್ಟಿದ್ದು, ಕಪ್ಪು ಬಣ್ಣದ ಟಾಪ್ ಹಾಗು ಪ್ಯಾಂಟನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಆಕೆ ಕೆಂಪು ಬಣ್ಣದ ಸ್ಕೂಲ್ ಬ್ಯಾಗನ್ನು ಕೂಡ ತೆಗೆದುಕೊಂಡು ಹೋಗಿದ್ದಾಳೆ.

ಶಾಲೆಯಲ್ಲಿ ಓದುಬರಹದಲ್ಲಿ ಮುಂದಿದ್ದ ಮಗಳು ಇದ್ದಕ್ಕೆ ನಾಪತ್ತೆಯಾಗಿದ್ದು ಪಾಲಕರನ್ನು ಚಿಂತೆಗೀಡು ಮಾಡಿದೆ. ಆಕೆ ಮನೆಗೆ ಬರುತ್ತಿದ್ದಂತೆ ಶಾಲೆಯಲ್ಲಿ ಅಂದು ನಡೆದ ಎಲ್ಲ ಘಟನೆಗಳನ್ನು ವಿವರಿಸುತ್ತಿದ್ದಳು ಮತ್ತು ಶಾಲೆಗೆ ಹೋಗುವುದನ್ನು ತುಂಬಾ ಇಷ್ಟಪಡುತ್ತಿದ್ದಳು ಎಂದು ಆಕೆಯ ತಾಯಿ ಪದ್ಮಿನಿ ತಿಳಿಸಿದ್ದಾರೆ.

"ಪ್ಲೀಸ್ ಮನೆಗೆ ಮರಳಿ ಬಾ ಮಗಳೆ, ನಿನಗಾಗಿ ನಾನು ಕಾಯುತ್ತಿದ್ದೇನೆ. ಐ ಆ್ಯಮ್ ಸಾರಿ. ದಯವಿಟ್ಟು ಮನೆಮಂದಿ ಎಲ್ಲ ಕಾಯುತ್ತಿದ್ದಾರೆ, ಕೂಡಲೆ ಮನೆಗೆ ಮರಳಿ ಬಾ" ಎಂದು ತಾಯಿ ಪದ್ಮಿನಿ ಕಣ್ಣೀರುಗರೆಯುತ್ತಿದ್ದಾರೆ. [ನಾಪತ್ತೆಯಾಗಿದ್ದ ಹುಣಸೂರು ಬಾಲಕಿ ಪ್ರಕರಣಕ್ಕೆ ವಿಚಿತ್ರ ತಿರುವು]

Help trace missing girl Puujita from Bengaluru

ಪೂಜಿತಾ ಇತ್ತೀಚೆಗೆ ಮುಗಿದ ಗಣಿತ ಪರೀಕ್ಷೆಯಲ್ಲಿ ಸ್ವಲ್ಪ ಕಡಿಮೆ ಅಂಕ ಪಡೆದಿದ್ದಳು. ಈ ಕಾರಣದಿಂದ ಬೇಜಾರಾಗಿ ಮನೆಬಿಟ್ಟು ಹೋಗಿರಬಹುದು ಎಂದು ಆಕೆಯ ತಂದೆ ಮಧುಕಿರಣ್ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆಕೆಯ ಹುಡುಕಾಟದಲ್ಲಿ ತೊಡಗಿದ್ದಾರೆ.

ಆಗಸ್ಟ್ 24ನೇ ತಾರೀಖಿನಂದೇ ನಾಪತ್ತೆಯಾಗಿರುವ ಐದಡಿ ಎತ್ತರವಿರುವ ಪೂಜಿತಾ ಎಲ್ಲಿಯಾದರೂ ಪತ್ತೆಯಾದರೆ ಮಧುಕಿರಣ್ (99022 70300) ಸಂಖ್ಯೆಗೆ ತಿಳಿಸಬೇಕಾಗಿ ಕೋರಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 13-year-old girl MK Puujita is missing from Bengaluru. She was studying National Public School in Rajajinagar. She was wearing school uniform. She is 5 ft tall and speaks Kannada, English and Hindi fluently. FIR has been filed in Srirampura police station.
Please Wait while comments are loading...