ಹೆಲ್ಮೆಟ್ ಇಲ್ಲದೆ ಸವಾರಿ, 100 ರು. ದಂಡ ಕಟ್ರಿ

Subscribe to Oneindia Kannada

ಬೆಂಗಳೂರು, ಜನವರಿ, 19: ಜನವರಿ 20 ರಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ. ಸರ್ಕಾರದ ಕ್ರಮದಲ್ಲಿ ಯಾವುದೇ ರಾಜಿಯಿಲ್ಲ. ಕಾನೂನು ಉಲ್ಲಂಘನೆ ಮಾಡಿದರೆ 100 ರು. ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಎಂ ಎ ಸಲೀಂ ಎಚ್ಚರಿಸಿದ್ದಾರೆ.

ಈಗಾಗಲೇ ಶೇ. 30 ರಷ್ಟು ನಾಗರಿಕರು ಹೆಲ್ಮೆಟ್ ಖರೀದಿ ಮಾಡಿದ್ದಾರೆ. ಬೆಂಗಳೂರಿನ ಜನ ಕಾನೂನು ಪಾಲನೆಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಜನರ ಒಳಿತಿಗಾಗಿ ಕಾನೂನು ಮಾಡಲಾಗಿದ್ದು ಇಲ್ಲಿ ಯಾವುದೇ ಹೇರಿಕೆಯಲ್ಲ ಎಂದು ಸಲೀಂ ತಿಳಿಸಿದ್ದಾರೆ.[ಜನವರಿ 20ರಿಂದ ನೀವು ಧರಿಸುವ ಹೆಲ್ಮೆಟ್ ಹೀಗಿರಬೇಕು]

bengaluru

ಮೊದಲ ಬಾರಿ ಉಲ್ಲಂಘಿಸಿದರೆ 100 ರೂ. ದಂಡ, 2ನೇ ಬಾರಿ ಉಲ್ಲಂಘಿಸಿದರೆ 200 ರೂ. ದಂಡ ಸಂಚಾರಿ ಪೊಲೀಸರ ಬಳಿ ಕಟ್ಟಬೇಕು. 3ನೇ ಬಾರಿ ಉಲ್ಲಂಘಿಸಿದರೆ 500 ರೂ. ದಂಡವನ್ನು ನ್ಯಾಯಾಲಯಕ್ಕೆ ತೆರಳಿ ಕಟ್ಟಬೇಕು. ನಿಯಮ ಜಾರಿ ಹಿನ್ನೆಲೆಯಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳು ಸೇರಿದಂತೆ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129 ರ ಅನ್ವಯ ಹೆಲ್ಮೆಟ್ ಕಡ್ಡಾಯ ನೀತಿಯನ್ನು ಜಾರಿ ಮಾಡಲಾಗಿದೆ. ಜನರ ಪ್ರಾಣ ರಕ್ಷಣೆಯೇ ಕಾನೂನು ಜಾರಿ ಮಾಡಲು ಕಾರಣ ಎಂದು ಸಲೀಂ ಸ್ಪಷ್ಟನೆ ನೀಡಿದ್ದಾರೆ.[ಥತ್ತೇರಿಕೆ.. ಹುಡುಗಿ ಡ್ರಾಪ್ ಕೇಳಿದ್ರು ಕೊಡಂಗಿಲ್ಲ]

ಹೆಲ್ಮೆಟ್ ಯಾಕೆ ಧರಿಸಬೇಕು ಎಂಬುದನ್ನು ಸಲೀಂ ವಿವರಿಸಿದ್ದಾರೆ.
* ದ್ವಿಚಕ್ರ ವಾಹನ ಸವಾರರೇ ಅತಿ ಹೆಚ್ಚು ಅಪಘಾತಕ್ಕೆ ಈಡಾಗುತ್ತಿದ್ದಾರೆ.
* ಅಪಘಾತದ ಪರಿಣಾಮ ಅಂಗವೈಕಲ್ಯಕ್ಕೆ ಗುರಿಯಾಗುತ್ತಿರುವವರ ಸಂಖ್ಯೆ ಹೆಚ್ಚಿದೆ
* ವಾಹನದ ಅತಿಯಾದ ವೇಗದ ಪರಿಣಾವೇ ಅಪಘಾತಗಳಾಗುತ್ತಿವೆ ಎಂದು ಸಂಶೋಧನೆಗಳು ಹೇಳಿವೆ
* ದ್ವಿಚಕ್ರ ವಾಹನ ಸವಾರರಿಗೆ ಓವರ್ ಟೇಕ್ ಮಾಡುವ ವೇಳೆ ಸಮಸ್ಯೆ ಉದ್ಭವಿಸುವುದು ಸಹಜ
* ಅಪಘಾತವಾಗಿ ತಲೆ ಅಥವಾ ಮೆದುಳಿಗೆ ಪೆಟ್ಟು ಬಿದ್ದರೆ ಚಿಕಿತ್ಸಾ ವೆಚ್ಚ ದುಬಾರಿ
* ಹೆಲ್ಮೆಟ್ ಧರಿಸುವುದರಿಂದ ಶೇ. 20-30 ರಕ್ಷಣೆ ಪಡೆಯಲು ಸಾಧ್ಯವಿದೆ.
* ತಲೆಗೆ ಏಟು ಬಿದ್ದು ರಕ್ತ ಸ್ರಾವವಾದರೆ ವ್ಯಕ್ತಿ ಕೆಲವೇ ಕ್ಷಣದಲ್ಲಿ ಸಾಗವಿಗೀಡಾಗುವ ಸಾಧ್ಯತೆ ಇದೆ.
* ಉಳಿದ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನ ವಾತಾವರಣವೂ ಅನುಕೂಲಕರವಾಗಿದ್ದು ಹೆಲ್ಮೆಟ್ ಧರಿಸಿ ಸುರಕ್ಷಿತ ಚಾಲನೆ ಮಾಡಿರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The rule making helmets mandatory for pillion riders comes into force from January 20, Additional Commissioner of Police (Traffic) M.A. Saleem told in a press release. This rule will see strict enforcement across Bengaluru. The fine for a helmet-less pillion is Rs 100," Saleem said.
Please Wait while comments are loading...