ಹೆಲ್ಮೆಟ್ ಕಡ್ಡಾಯ: ಜನರ ಪ್ರಶ್ನೆಗೆ ಸರ್ಕಾರ ಏನು ಹೇಳುತ್ತೆ?

Subscribe to Oneindia Kannada

ಬೆಂಗಳೂರು, ಜನವರಿ, 08: "ಹಿಂದೆ ಕುಳಿತುಕೊಳ್ಳುವರಿಗೂ ಹೆಲ್ಮೆಟ್ ಕಡ್ಡಾಯ... ಇದೆಂಥಾ ನ್ಯಾಯ ಸ್ವಾಮಿ.. ಕಾನೂನು ಮಾಡಿದ್ದಾರಲ್ಲ ಅವರು ಮೊದಲು ಬೀದಿಗೆ ಇಳಿದು ಬೈಕ್ ನಲ್ಲಿ ಓಡಾಡಲಿ.. ಆಗ ಗೊತ್ತಾಗುತ್ತೆ ನಮ್ಮ ತಾಪತ್ರಯ.."

"ಮೊದಲೇ ನಗರದಲ್ಲಿ ಸರಗಳ್ಳತನ ಹೆಚ್ಚಾಗಿತ್ತು... ಈಗ ಇಬ್ಬರಿಗೂ ಹೆಲ್ಮೆಟ್ ಅಂದರೆ ಕಳ್ಳರಿಗೆ ವರ ನೀಡಿದಂತೆ ಆಗುತ್ತದೆ... ಇಂಥ ಯೋಜನೆ ಜಾರಿಗೆ ಮುನ್ನ ಸಾರ್ವಜನಿಕ ಅಭಿಪ್ರಾಯ ಕೇಳಬೇಕು..."ಈ ಬಗೆಯ ಪ್ರತಿಕ್ರಿಯೆಗಳು ಬೆಂಗಳೂರು ನಾಗರಿಕರಿಂದ ಬಂದವು.

ಹಿಂಬದಿ ಸವರರಿಗೂ ಹೆಲ್ಮೆಟ್ ಕಡ್ಡಾಯ. ಮಗುವನ್ನು ಕೂರಿಸಿಕೊಂಡರೂ ಹೆಲ್ಮೆಟ್ ಹಾಕಬೇಕು ಎಂಬ ನಿಯಮದ ಬಗ್ಗೆ ಬೆಂಗಳೂರು ನಾಗರಿಕರನ್ನು ಪ್ರಶ್ನೆ ಮಾಡಿದಾಗ ಸಿಕ್ಕ ಉತ್ತರಗಳು ಇವು. [ಮಂಗಳೂರಿಗರು ಏನಂತಾರೆ?]

ಹೌದು .. ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಹಿಂಬದಿ ಸವಾರರಿಗೂ ಹೆಲ್ಮೆಟ್ ಎನ್ನುವ ನಿಯಮ ಜಾರಿ ಮಾಡಲಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಹೆಲ್ಮೆಟ್ ಕಡ್ಡಾಯ ಬೇಕೋ ಬೇಡವೋ ಎಂದಾಗ... ಸಿಕ್ಕ ಉತ್ತರಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ... ಇದಕ್ಕೆ ಸರ್ಕಾರ ಏನು ಹೇಳುತ್ತದೆ? ಕಾದು ನೋಡಬೇಕು

ಕಳ್ಳರಿಗೆ ಪಾಸ್ ಕೊಟ್ಟಂತೆ

ಕಳ್ಳರಿಗೆ ಪಾಸ್ ಕೊಟ್ಟಂತೆ

ಹೆಲ್ಮೆಟ್ ಕಡ್ಡಾಯ ಮಾಡೋದು ಅಂದ್ರೆ ಕಳ್ಳರಿಗೆ ಪಾಸ್ ಕೊಟ್ಟಂತೆ. ಬೆಳಗ್ಗೆ ರಂಗೋಲಿ ಹಾಕುವ ಮಹಿಳೆಯರು ಇನ್ನು ಮುಂದೆ ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದಲ್ಲಿ ಕಳ್ಳರನ್ನು ಪತ್ತೆಹಚ್ಚಲು ಮತ್ತಷ್ಟು ಪೊಲೀಸರನ್ನು ನಿಯೋಜನೆ ಮಾಡಿಕೊಳ್ಳಬೇಕಾಗುತ್ತದೆ--ನಂಜಪ್ಪ..

ಎಲ್ಲಾದಕ್ಕೂ ಸುಪ್ರೀಂ ಕೋರ್ಟ್ಲ ಕೇಳ್ತಾರ?

ಎಲ್ಲಾದಕ್ಕೂ ಸುಪ್ರೀಂ ಕೋರ್ಟ್ಲ ಕೇಳ್ತಾರ?

ಸುಪ್ರೀಂ ಕೋರ್ಟ್ ಮಾಲಿನ್ಯ ತಡೆಗೆ ನಿಯಮಾವಳಿ ನೀಡಿದೆ. ಮಹಿಳೆಯರ ರಕ್ಷಣೆ ಮಾಡಲು ನಿರ್ದಿಷ್ಟ ಸೂತ್ರಗಳನ್ನು ತಿಳಿಸಿದೆ. ಇವೆಲ್ಲವನ್ನು ರಾಜ್ಯ ಸರ್ಕಾರದ ಗಮನಕ್ಕೆ ಬಂದಿಲ್ಲವೇ? ಕೇವಲ ಹೆಲ್ಮೆಟ್ ಗೆ ಮಾತ್ರವೇ?-ವಿಕ್ರಾಂತ್, ವ್ಯಾಪಾರಿ

ವಾಹನಗಳ ಸಂಖ್ಯೆ ಡಬಲ್ ಆಗುತ್ತೆ

ವಾಹನಗಳ ಸಂಖ್ಯೆ ಡಬಲ್ ಆಗುತ್ತೆ

ಈಗಲೇ ಬೆಂಗಳೂರು ಟ್ರಾಫಿಕ್ ಸಹಿಸಲು ಅಸಾಧ್ಯ. ಇನ್ನು ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿದ್ರೆ ವಾಹನಗಳ ಸಂಖ್ಯೆ ಡಬಲ್ ಆಗುತ್ತದೆ. ಅಷ್ಟೆ. ತ್ಯಾಗರಾಜ್, ವ್ಯಾಪಾರಿ

ತುಘಲಕ್ ಆಡಳಿತ

ತುಘಲಕ್ ಆಡಳಿತ

ಇಡೀ ಕಾಂಗ್ರೆಸ್ ಸರ್ಕಾರಕ್ಕೆ ಗ್ರಹಣ ಬಡಿದಿದೆ. ಹೆಲ್ಮೆಟ್ ಕಡ್ಡಾಯ ಹಿಂದೆ ಲಾಬಿ ಇದೆ. ನಿಜವಾಗಿ ಹೆಲ್ಮೆಟ್ ಹಾಕಬೇಕಾಗಿದ್ದು ಸರ್ಕಾರಕ್ಕೆ.. ರಹಮಾನ್

ಮೊದಲು ರಸ್ತೆ ದುರಸ್ತಿ ಮಾಡಿ

ಮೊದಲು ರಸ್ತೆ ದುರಸ್ತಿ ಮಾಡಿ

ಮೊದಲು ಕಿತ್ತುಹೋಗಿರುವ ರಸ್ತೆ ದುರಸ್ತಿಮ ಮಾಡಿ. ಆಗ ಅಪಘಾತಗಳ ಸಂಖ್ಯೆ ತನ್ನಿಂದ ತಾನೇ ಕಡಿಮೆಯಾಗುತ್ತದೆ. ಇಂಥ ಯೋಜನೆಗಳು ಅವೈಜ್ಞಾನಿಕ .. ರಾಜೇಶ್ ಕಾರುಮಗೆ

ರಸ್ತೆ ಸರಿ ಇಲ್ಲದಿದ್ರೆ ಸರ್ಕಾರ ದಂಡ ಕಟ್ಟುತ್ತಾ?

ರಸ್ತೆ ಸರಿ ಇಲ್ಲದಿದ್ರೆ ಸರ್ಕಾರ ದಂಡ ಕಟ್ಟುತ್ತಾ?

ಹೆಲ್ಮೆಟ್ ಹಾಕದಿದ್ದಲಿ ಹೇಗೆ ದಂಡ ಹಾಕುತ್ತಾರೋ ಹಾಗೆ ಸರಿಯಾದ ರಸ್ತೆ ಕೊಡದ ಸರ್ಕಾರಕ್ಕೆ ದಂಡ ವಿಧಿಸುವುವರುಯಾರು? ಕರ್ನಾಟಕ ಹೈಕೋರ್ಟ್ ಈ ಕೆಲಸ ಮಾಡುತ್ತದೆಯೇ, ಹೊಸಾ ವಾಹನ ಖರೀದಿಸುವಾಗ ರಸ್ತೆ ತೆರಿಗೆ ಕಟ್ಟುವುದು ಹೇಗೆ ಸಾರ್ವಜನಿಕರ ಕರ್ತ್ಯವ್ಯವೋ ಹಾಗೆ ಒಳ್ಳೆಯ ರಸ್ತೆ ಕೊಡುವುದು ಸರ್ಕಾರದ ಕರ್ತ್ಯವಲ್ಲವೇ? ಇದನ್ನು ಪ್ರಶ್ನೆ ಮಾಡುವವರು ಯಾರು?

ಅವೈಜ್ಞಾನಿಕ ಯೋಜನೆ

ಅವೈಜ್ಞಾನಿಕ ಯೋಜನೆ

ಇದು ಅವೈಜ್ಞಾನಿಕ ಯೋಜನೆ. ಇಂಥ ಯೋಜನೆ ಜಾರಿಗೆ ಮುನ್ನ ಸರ್ಕಾರ ಸಮರ್ಪಕ ಅನುಷ್ಠಾನ ಸಾಧ್ಯವೇ ಎಂದು ತನ್ನನ್ನು ತಾನು ಪ್ರಶ್ನೆ ಮಾಡಿಕೊಳ್ಳಬೇಕಿತ್ತು. ರಘುನಾಥ, ನಿವೃತ್ತ

ಮಗುವಿಗೆ ಹೆಲ್ಮೆಟ್ ಹಾಕಲು ಸಾಧ್ಯವೇ?

ಮಗುವಿಗೆ ಹೆಲ್ಮೆಟ್ ಹಾಕಲು ಸಾಧ್ಯವೇ?

ಹೆಂಡತಿ ಮಕ್ಕಳನ್ನು ಕರೆದುಕೊಂಡು ಹೋದರೆ ಮಕ್ಕಳಿಗೂ ಹೆಲ್ಮೆಟ್ ಹಾಕಲು ಸಾಧ್ಯವೇ? ಬೇರೆಡೆಯಿಂದ ಕರೆದುಕೊಂಡು ಬರಬೇಕು, ಸ್ಕೂಲಿಗೆ ಬಿಡಬೇಕು ಎಂದಾದಲ್ಲಿ ಹೆಲ್ಮೆಟ್ ಹಾಕಿಕೊಂಡು ಕರೆದುಕೊಂಡು ಹೋಗಲು ಸಾಧ್ಯವಿಲ್ಲ.- ನಾಗರಾಜ್ ಸಾಪ್ಟವೇರ್ ಉದ್ಯೋಗಿ

 ಅನಿವಾರ್ಯ ಎದುರಾದರೆ!

ಅನಿವಾರ್ಯ ಎದುರಾದರೆ!

ಅನಿವಾರ್ಯ ಸಂದರ್ಭ ಎದುರಾದರೆ, ಗೆಳೆಯನನ್ನು ಕರೆದುಕೊಂಡು ಬರಬೇಕಾದರೆ ಮತ್ತೊಂದು ಹೆಲ್ಮೆಟ್ ತೆಗೆದುಕೊಂಡು ಹೋಗಬೇಕೆ? ಇಂಥ ಯೋಜನೆಗಳ ವಿರುದ್ಧ ಆನ್ ಲೈನ್ ಕ್ಯಾಂಪೇನ್ ಶುರು ಮಾಡ್ತೆವೆ- ಧನುಷ್, ವಿಜಯ ಕಾಲೇಜು ವಿದ್ಯಾರ್ಥಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Transport Department has finally decided to make helmets mandatory for pillion riders within the limits of urban centres. It is expected to be implemented in next 15 days. After this Government statement Bengaluru People reacts their won way and openly tells their opinion.
Please Wait while comments are loading...