ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಸ್ತ್ರಾಣ ಕಡ್ಡಾಯ: ಗ್ರಾಹಕರಿಗೆ ಹೆಲ್ಮೆಟ್ ದರ ಏರಿಕೆ ಭಾಗ್ಯ!

|
Google Oneindia Kannada News

ಬೆಂಗಳೂರು, ಜನವರಿ , 06: ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿರುವ ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆ ಬೈಕ್ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂದು ಹೇಳಿದೆ. ಜನವರಿ ಅಂತ್ಯದೊಳಗೆ ಯೋಜನೆ ಜಾರಿ ಮಾಡಲು ಉದ್ದೇಶ ಹೊಂದಿದೆ.

ಇದರ ಪರಿಣಾಮ ಹೆಲ್ಮೆಟ್ ವ್ಯಾಪಾರಿಗಳು ಸಹ ಹೆಚ್ಚು ಲಾಭ ಮಾಡಿಕೊಳ್ಳಲು ಮುಂದಾಗಿದ್ದು ಹೆಲ್ಮೆಟ್ ದರವನ್ನು ಶೇ. 10 ರಿಂದ 25 ರಷ್ಟು ಏರಿಕೆ ಮಾಡಲು ಮುಂದಾಗಿದ್ದಾರೆ.[ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ: ಬೇಕಾ? ಬೇಡ್ವಾ?]

Helmet Mandatory: Vendors to increase the price

5000 ರು. ಬೆಲೆಯ ಅತ್ಯುತ್ತಮ ದರ್ಜೆ ಹೆಲ್ಮೆಟ್ ಅನ್ನು 6 ಸಾವಿರಕ್ಕೆ ಏರಿಸಲಾಗಿದೆ. ಅತಿ ಕಡಿಮೆ ಬೆಲೆಯ 300 ರು. ಹೆಲ್ಮೆಟ್ ಗೆ 450 ರು ನೀಡಬೇಕಿದೆ. ಗ್ರಾಹಕರು ಸಹ ಯೋಜನೆ ಬಗ್ಗೆ ಗೊಂದಲದಲ್ಲಿದ್ದಾರೆ. ಸರ್ಕಾರದ ಸ್ಪಷ್ಟ ಆದೇಶ ಬರುವವರೆಗೂ ಏನೂ ಹೇಳಲು ಸಾಧ್ಯವಿಲ್ಲ.[ಬೆಂಗಳೂರಲ್ಲಿ ಕಳುವಾದ ಸ್ಕೂಟಿಯ ಇಂಟರೆಸ್ಟಿಂಗ್ ಕತೆ!]

ನಮ್ಮಲ್ಲಿ ಎಲ್ಲ ಬಗೆಯ ಹೆಲ್ಮೆಟ್ ಸಿಗುತ್ತದೆ. ಐಎಸ್ ಐ ಮಾರ್ಕ್ ಇದ್ದೇ ಇರುತ್ತದೆ. ಸರ್ಕಾರ ಕಾನೂನು ತರಲು ಹೊರಟಿದೆ ಎಂಬ ಕಾರಣಕ್ಕೆ ದರ ಏರಿಕೆ ಮಾಡಿಲ್ಲ ಎಂದು ಲಾಲ್ ಬಾಗ್ ಊರ್ವಶಿ ಚಿತ್ರಮಂದಿರ ಸಮೀಪದ ಹೆಲ್ಮೆಟ್ ವ್ಯಾಪಾರಿಯೊಬ್ಬರು ಹೇಳುತ್ತಾರೆ. ಸರ್ಕಾರ ಹೆಲ್ಮೆಟ್ ನೀತಿಯನ್ನು ಇನ್ನಷ್ಟು ಸರಳ ಮಾಡಿದರೆ ಗ್ರಾಹಕರಿಗೆ ಆಗುವ ತೊಂದರೆ ತಪ್ಪಿಸಬಹುದು.

English summary
Bengaluru: Vendors cashing in on Karnataka Government decision to make protective headgear mandatory for pillion riders. Many vendors are planning to increase the price of helmets by anywhere between 10 per cent and 25 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X