ಹೆಲ್ಮೆಟ್ ಕಡ್ಡಾಯ; ಸಿ.ಎಂ ಮನೆ ಮುಂದೆ ಯುವಕ-ಯುವತಿ ಮಾಡಿದ್ದೇನು?

By: ಹರಾ
Subscribe to Oneindia Kannada

ಶಿವಾ ಅಂತ ಹೋಗುತ್ತಿದ್ದೆ ರೋಡಿನಲಿ....
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ...
ಅರ್ಧ ಟ್ಯಾಂಕು ಪೆಟ್ರೋಲ್ ಇತ್ತು ಬೈಕಿನಲಿ....
ನೀ ಕಂಡೆ ಸೈಡಿನಲಿ...

ಕಂಡು ಕಂಡು ಬಿದ್ಹಂಗಾಯ್ತು ಹಳ್ಳದಲಿ...
ಕಂಬ್ಳಿ ಹುಳ ಬಿಟ್ಟಂಗಾಯ್ತು ಹಾರ್ಟಿನಲಿ...
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲಿ...
ನೀ ಕುಂತಾಗ ಬೈಕಿನಲಿ...

Helmet mandatory; High Drama in front of CM Siddaramaiah Residence

ಮೇನ್ ರೋಡ್ ನಲ್ಲಿ ಹೋಗಂಗಿಲ್ಲ...
ಸುಮ್ನೆ ಗಲ್ಲಿ ಸುತ್ತಂಗಿಲ್ಲ...
ಅಯ್ಯೋ ಪಾಪಾ ಹುಡುಗಿ ತಲೆಯಲ್ಲಿ ಹೆಲ್ಮೆಟ್ ಇಲ್ಲ, ಪೊಲೀಸರು ಕಂಡ್ರೆ ಅಷ್ಟೆ ಗುರು...
ಥೂ ನಂಗೆ ಯಾಕೆ ಹಿಂಗೆ ಎಲ್ಲಾ ಅನಿಸುವುದು..!?

ಒಂದು ಮಾತು ಕೇಳಲಿಲ್ಲ...
ಹಿಂದೆ ಮುಂದೆ ನೋಡಲಿಲ್ಲ...
ಸೀದಾ ಮೇನ್ ರೋಡ್ ನಲ್ಲಿ ನುಗ್ಗಿಬಿಟ್ಟೆ
ಪೊಲೀಸರ ಕೈಲಿ ಸಿಕ್ಕಿಬಿಟ್ಟೆ.!!

ಹೂವಿನಂತಹ ಹುಡುಗ ನಾನು ತುಂಬಾ ಮೃದು...
ಪೊಲೀಸರ ಮುಂದೆ ಸಾಫ್ಟ್ ಆಗೋದೇ ಗುರು...
ಆ ಹುಡುಗಿ ರಾಂಗ್ ಆದ್ಲು ನೋಡು...
ಅಯ್ಯೋ ದೇವ್ರೆ ಪೊಲೀಸರು ಫೈನ್ ಅನ್ತಿದ್ದಂತೆ ಕೈ ಕೊಟ್ಟು ಓಡಿ ಹೋದ್ಲು ಗುರು...
ಥೂ ಸಿಕ್ಕಿಬಿದ್ನಲ್ಲಾ ನಾನು....
ಹೆಣ್ಮಕ್ಕಳನ್ನ ನಂಬಂಗಿಲ್ಲ ಗುರು..!!!!!!!!

ಪುನೀತ್ ರಾಜ್ ಕುಮಾರ್ ಅಭಿನಯದ 'ಜಾಕಿ' ಚಿತ್ರದ 'ಶಿವಾ ಅಂತ ಹೋಗುತ್ತಿದ್ದೆ....' ಹಾಡನ್ನ ಸ್ವಲ್ಪ ರೀಮಿಕ್ಸ್ ಮಾಡಿ ನಾವು ನಿಮಗೆ ಹೇಳುವುದಕ್ಕೆ ಕಾರಣ ಇಂದು ಸಿ.ಎಂಸಿದ್ದರಾಮಯ್ಯ ಮನೆ ಮುಂದೆ ನಡೆದ ಒಂದು ಘಟನೆ.

ಬೆಳಗ್ಗೆ ಸುಮಾರು 8.30 ರ ಸಮಯ. ಟಾಪ್ ಟು ಬಾಟಂ ಸ್ಮಾರ್ಟ್ ಆಗಿ ರೆಡಿಯಾಗಿದ್ದ ಯುವಕ ಮತ್ತು ಯುವತಿ ಬೈಕ್ ನಲ್ಲಿ ಬೆಂಗಳೂರಿನ ಕುಮಾರ ಕೃಪ ರಸ್ತೆಯಲ್ಲಿ ಜುಂ ಅಂತ ಹೋಗ್ತಿದ್ರು.

ಪಾಪಾ....ಅವರಿಗೆ ಅದೇ ಕುಮಾರ ಕೃಪ ರಸ್ತೆಯಲ್ಲಿರುವ ಸಿ.ಎಂ ನಿವಾಸದ ಮುಂದೆ ಪೊಲೀಸರು ದುರ್ಬೀನ್ ಹಾಕೊಂಡು ಹೆಲ್ಮೆಟ್ ಇಲ್ಲದ ಹಿಂಬದಿ ಸವಾರರನ್ನ ಹಿಡಿಯುತ್ತಿದ್ದಾರೆ ಅಂತ ಗೊತ್ತಿರ್ಲಿಲ್ಲ. [ಥತ್ತೇರಿಕೆ ... ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗಿಲ್ಲ!]

ಫುಲ್ ಸ್ಪೀಡ್ ನಲ್ಲಿ ಬೈಕ್ ರೈಡ್ ಮಾಡಿಕೊಂಡು ಬಂದ ಯುವಕನನ್ನ ಪೊಲೀಸರು ಅಡ್ಡಗಟ್ಟಿದ್ರು. ಯಾಕಂದ್ರೆ, ಹಿಂಬದಿ ಸವಾರಿ ಮಾಡ್ತಿದ್ದ ಯುವತಿ ಹೆಲ್ಮೆಟ್ ಹಾಕಿರ್ಲಿಲ್ಲ. ಎಂದಿನಂತೆ ಪೊಲೀಸರು ನೂರು ರೂಪಾಯಿ ಫೈನ್ ಹಾಕಿದ್ರು.

ಮಾಡಿರುವ ತಪ್ಪಿಗೆ ಫೈನ್ ಕಟ್ಟುವ ಬದಲು, ಆ ಯುವಕ ಮತ್ತು ಯುವತಿ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು. ಪೊಲೀಸರು ಸ್ವಲ್ಪ ಸೀರಿಯಸ್ ಆದ್ರು ನೋಡಿ, ಹೆಲ್ಮೆಟ್ ಧರಿಸದ ಯುವತಿ ಪರಾರಿ.!!!!ಯಾಕಂದ್ರೆ ಹುಡುಗಿ ಬಳಿ ದುಡ್ಡು ಇರ್ಲಿಲ್ಲ.! ಹುಡುಗನಿಗೆ ಶಾಕ್.!!!

ಆ ಯುವತಿ ಏನೋ ಪರಾರಿ ಆಗ್ಬಿಟ್ಲು. ಆದ್ರೆ, ಆ ನಂತರ ಯುವಕ ಪಟ್ಟ ಪಾಡು ಯಾಕ್ ಕೇಳ್ತೀರಾ? ಪಾಪಾ...ಯುವಕನ ಬಳಿಯೂ ಫೈನ್ ಕಟ್ಟೋಕೆ ದುಡ್ಡು ಇರ್ಲಿಲ್ಲ.! [ಹೆಲ್ಮೆಟ್ ಕಡ್ಡಾಯ; ಯಾರಿಗ್ಹೇಳೋಣ ನಮ್ಮ ಪ್ರಾಬ್ಲಮ್ಮು..]

''ಸಾರ್...ಫೈನ್ ಕಟ್ಟೋಕೆ ದುಡ್ಡಿಲ್ಲ. ಬಿಟ್ಬಿಡಿ ಸಾರ್. ಇದೊಂದು ಬಾರಿ ಲಾಸ್ಟ್ ಚಾನ್ಸ್ ಕೊಡಿ ಸಾರ್'' ಅಂತ ಅಂಗಲಾಚಿದರೂ ಪೊಲೀಸರು ಬಿಡ್ಲಿಲ್ಲ. ಅಷ್ಟೆಲ್ಲಾ ರಂಪ ಮಾಡಿದ್ಮೇಲೆ ಪೊಲೀಸರು ಬಿಡುವ ಚಾನ್ಸೇ ಇರ್ಲಿಲ್ಲ ಅನ್ನೋದು ಬೇರೆ ಮಾತು.

ಕೊನೆಗೆ ಬೈಕ್ ನ ಪೊಲೀಸರ ಹತ್ರ ಬಿಟ್ಟು, ಸ್ನೇಹಿತರ ಸಹಾಯ ಪಡೆದು ನಂತರ ಫೈನ್ ಕಟ್ಟಿ ಬೈಕ್ ಬಿಡಿಸಿಕೊಂಡ ಆ ಯುವಕ. [ಹೆಲ್ಮೆಟ್ ಇಲ್ಲದೆ ಸವಾರಿ, 100 ರು. ದಂಡ ಕಟ್ರಿ]

ಒಂದ್ಕಡೆ ಹುಡುಗಿ ಅರ್ಧದಲ್ಲೇ ಕೈಕೊಟ್ಟು ಓಡಿ ಹೋಗಿದ್ದಕ್ಕೆ ಬೇಸರ. ಇನ್ನೊಂದ್ಕಡೆ ಕುಮಾರ ಕೃಪ ರಸ್ತೆಯಲ್ಲಾದ ಅವಮಾನ. ಇವತ್ತು ಬೆಳಂಬೆಳ್ಳಗೆ ಯಾರ ಮುಖ ನೋಡಿದ್ನೋ ಅಂತ ತಲೆ ಚಚ್ಚಿಕೊಂಡು ಒಬ್ಬನೇ ಆ ಹುಡುಗ ಬೈಕ್ ಸ್ಟಾರ್ಟ್ ಮಾಡಿಕೊಂಡು ಹೊರಟ.!! [ಹೆಲ್ಮೆಟ್ ಕಡ್ಡಾಯದ ಮೊದಲ ಚುಂಬನಕ್ಕೆ ತೆತ್ತ ದಂಡವೆಷ್ಟು?]

ಘಟನೆ ಸಂದೇಶ - 'ಹೆಲ್ಮೆಟ್' ಇಲ್ಲದ ಹುಡುಗಿಯರನ್ನ ಬೈಕ್ ನಲ್ಲಿ ಕೂರಿಸಿಕೊಳ್ಳುವ ಮುನ್ನ ಯೋಚನೆ ಮಾಡಿ. ನಿಮ್ಮ ಪಾಕೆಟ್ ತುಂಬಿದ್ಯಾ ಅಂತ ಒಮ್ಮೆ ನೋಡಿಕೊಳ್ಳುವುದನ್ನ ಮರೆಯಬೇಡಿ. ಇಲ್ಲಾಂದ್ರೆ, 'ಶಿವಾ...ಅಂತ ಹೋಗುವ ನೀವು...ಶಿವಾ...ಶಿವಾ ಎನ್ನಬೇಕಾದೀತು.!!'

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Helmet is mandatory for pillion riders. Those who violate this rule will have to pay Rs.100 as fine. While Bengaluru Police imposing such penalty in front of Karnataka CM Siddaramaiah's Residence, one such High Drama took place. Read the article to know about the incident.
Please Wait while comments are loading...