ಬೆಂಗಳೂರು ಪೊಲೀಸರ ತಲೆಗೆ ಹೆಲ್ಮೆಟ್ ಹಾಕೋರು ಯಾರು?

By: ಮಪ
Subscribe to Oneindia Kannada

ಗೃಹ ಸಚಿವರು: ಮುಖ್ಯಮಂತ್ರಿಗಳೇ ಪೊಲೀಸರು ತುಂಬಾ ಶ್ರಮಪಡುತ್ತಿದ್ದಾರೆ. ಅವರ ವೇತನ ಹೆಚ್ಚಳ ಮಾಡಬೇಕು.
ಮುಖ್ಯಮಂತ್ರಿ: ಬೊಕ್ಕಸದಲ್ಲಿ ಹಣವಿಲ್ಲ. ಭಾಗ್ಯದ ಯೋಜನೆಗಳನ್ನು ನೀಡಿ ಖಾಲಿಯಾಗಿಹೋಗಿದೆ.
ಗೃಹ ಸಚಿವರು: ಹಾಗಾದರೆ ಏನು ಮಾಡೋಣ?
ಮುಖ್ಯಮಂತ್ರಿ: ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂದು ಮಾಡೋಣ.....!

helmet


ವಾಟ್ಸಪ್ ನಲ್ಲಿ ಹರಿದಾಡುತ್ತಿದ್ದ ಈ ಜೋಕನ್ನು ಅವರವರ ಭಾವಕ್ಕೆ ತಕ್ಕಂತೆ ಅರ್ಥ ಮಾಡಿಕೊಳ್ಳಬಹುದು. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಯಾರಿಗೆ ಲಾಭ? ಯಾರಿಗೆ ನಷ್ಟ? ನಿಜಕ್ಕೂ ಜನರು ನೀತಿಯನ್ನು ಪಾಲಿಸುತ್ತಿದ್ದಾರೆಯೇ? ಇದೆಲ್ಲದಕ್ಕೂ ಉತ್ತರ ಹುಡುಕುತ್ತ ಹೊರಟರೆ ನಮ್ಮ ಕಣ್ಣಿಗೆ ಬಿದ್ದಿದ್ದನ್ನು ಹೇಳಲೇ ಬೇಕು.[ಬೆಳಗಾವಿ, ಮೈಸೂರು, ತುಮಕೂರಲ್ಲಿ ಫೆಬ್ರವರಿ 1 ರವರೆಗೆ ಅವಕಾಶ]

ಬೆಂಗಳೂರಿನ ಕತೆಯನ್ನೇ ಇಟ್ಟುಕೊಂಡರೆ ಅರ್ಧ ತಲೆಗಳಿಗೆ ಹೆಲ್ಮೆಟ್ ಇಲ್ಲ. ಹಿಂಬದಿ ಸವಾರರಿರಲಿ ಮುಂಬದಿ ಸವಾರರೇ ಹೆಲ್ಮೆಟ್ ಹಾಕಿಕೊಳ್ಳುವುದಿಲ್ಲ. ದಂಡ ಕಟ್ಟುತ್ತೇವೆ ಎಂಬ ಉಡಾಫೆ, ಪೊಲೀಸರು ಏನು ಮಾಡಿಕೊಳ್ಳುತ್ತಾರೆ ಎಂಬ ಭಾವನೆ, ಇದೊಂದು ದಿನ ಪಾಸ್ ಆಗೋಣ ಎಂಬ ಬೀಸೋ ದೊಣ್ಣೆ ತಪ್ಪಿಸಿಕೊಳ್ಳುವ ಆತುರ ... ಒಟ್ಟಿನಲ್ಲಿ ಯಾವುದೋ ಒಂದು ಕಾರಣ ಇಟ್ಟುಕೊಂಡು ಜನ ಹೆಲ್ಮೆಟ್ ಹಾಕಿಕೊಳ್ಳುತ್ತಾ ಇಲ್ಲ.

ತಂಡ ರಚಿಸಿಕೊಂಡ ಪೊಲೀಸರು ಕಳೆದ ಎರಡು ದಿನಗಳಿಂದ ತುಂಬಾ ಬ್ಯುಸಿ. ಕರ್ತವ್ಯ ನಿಷ್ಠರಾಗಿ ತಮ್ಮ ಕೆಲಸವನ್ನು ಚಾಚೂ ತಪ್ಪದೇ ಮಾಡಿಕೊಂಡು ಬರುತ್ತಿದ್ದಾರೆ. ಅದು ಬೆಂಗಳೂರಿನ ಕತ್ರಿಗುಪ್ಪೆ ಇರಬಹುದು, ಗಾಂಧಿ ಬಜಾರ್ ಇರಬಹುದು, ಮೆಜೆಸ್ಟಿಕ್ ಸಮೀಪ ಇರಬಹುದು, ಲಾಲ್ ಬಾಗ್ ಗೇಟ್ ಇರಬಹುದು..... ಎಲ್ಲ ಕಡೆ ತಲೆ ತಪಾಸಣೆ ನಡೆಯುತ್ತಿದೆ. [ಹೆಲ್ಮೆಟ್ ಕಡ್ಡಾಯ; ಸಿ.ಎಂ ಮನೆ ಮುಂದೆ ಯುವಕ-ಯುವತಿ ಮಾಡಿದ್ದೇನು?]

hekmet

ಅದ್ಯಾಕೋ ಗೊತ್ತಿಲ್ಲ ಮೂರು ಜನರನ್ನು ಹಾಕಿಕೊಂಡು ಜುಮ್ ಎಂದು ಹೋಗುತ್ತಿದ್ದರೂ ಕೆಲವೊಮ್ಮ ಜಾಕ್ ಪಾಟ್ ಹೊಡೆಯುತ್ತಾರೆ. ಅವರನ್ನು ಯಾರು ಟಚ್ ಸಹ ಮಾಡಲ್ಲ(ಅವರ ವೇಗವೂ ಹಾಗೇ ಇರುತ್ತೆ ಬಿಡಿ) ಮಗುವನ್ನು ಕರೆದುಕೊಂಡು ಸಂಜೆ ಶಾಪಿಂಗ್ ಗೋ, ದೇವಸ್ಥಾನಕ್ಕೋ ಹೋಗುವ ನೀವು ಸಿಕ್ಕಿಹಾಕಿಕೊಳ್ಳುವ ಸಂಭವ ಹೆಚ್ಚು.

ಕಾನೂನು ಬಂದುಬಿಟ್ಟಿದೆ. ಜನವರಿ 20 ರಿಂದ ಕಾಯಂ ಆಗಿದೆ. ಆದರೆ ಅನುಷ್ಠಾನ ಸಾಧ್ಯವಾಗಿಲ್ಲ ಎಂಬುದನ್ನು ಪೊಲೀಸರು ಸೇರಿದಂತೆ ಸಾರಿಗೆ ಇಲಾಖೆ ಒಪ್ಪಿಕೊಳ್ಳಲೇಬೇಕು. ಸರ್ಕಾರದ ಬೊಕ್ಕಸಕ್ಕೆ ಸಾಕಷ್ಟು ದಂಡವೂ ಹರಿದು ಬರುತ್ತಿದೆ ಬಿಡಿ.[ಥತ್ತೇರಿಕೆ ... ಹುಡುಗಿ ಡ್ರಾಪ್ ಕೇಳಿದ್ರೂ ಕೊಡಂಗಿಲ್ಲ!]

ಸಾಮಾಜಿಕ ತಾಣದಲ್ಲಿ ವಿಡಿಯೋವೊಂದು ಬರುತ್ತೆ. ಹೆಲ್ಮೆಟ್ ಹಾಕದೇ ಹುಡುಗನೊಬ್ಬ ಬೈಕ್ ಚಲಾಯಿಸಿಕೊಂಡು ಬರುತ್ತಾನೆ. ಅವನನ್ನು ಅಡ್ಡಹಾಕುವ ಪೊಲೀಸ್ ಆತನ ಕಿಸೆಯಲ್ಲಿದ್ದ ಹಣ ಪಡೆದುಕೊಳ್ಳುತ್ತಾನೆ. ಸ್ವಲ್ಪ ಸಮಯದ ನಂತರ ಹಿಂದಕ್ಕೆ ಬರುವ ಪೊಲೀಸ್ ಹೊಸ ಹೆಲ್ಮೆಟ್ ಖರೀದಿ ಮಾಡಿ ತಂದಿರುತ್ತಾರೆ. ಅದನ್ನು ಹುಡುಗನ ತಲೆಗೆ ಹಾಕಿಸಿ ಮುಂದಕ್ಕೆ ಕಳಿಸುತ್ತಾರೆ. ಆದರೆ ಬೆಂಗಳೂರಲ್ಲಿ ಸದ್ಯ ಈ ಕತೆಯ ಅರ್ಧ ಭಾಗ ಮಾತ್ರ ನಡೆಯುತ್ತಿದೆ!

ನಾವು ಹೆಲ್ಮೆಟ್ ಹಾಕದಿದ್ರೆ ಹಿಡಿತಾರೆ. ಆದ್ರೇ ಅವರೇ ಹೆಲ್ಮೆಟ್ ಹಾಕದೇ ಓಡಾಡುತ್ತಿದ್ದಾರೆ. ಪೊಲೀಸರಿಗೆ ದಂಡ ಹಾಕುವವರು ಯಾರು? ಇದು ಹಿಂಬದಿ ಸವಾರರಿಗೆ ಹೆಲ್ಮೆಟ್, ಮುಂಬದಿ ಸವಾರರಿಗೆ ಟೋಪಿ ಆದಂಗಾಗಿದೆ ಎಂದು ದಂಡ ಕಟ್ಟಿದ ಗೃಹಸ್ಥರೊಬ್ಬರು ಗೊಣಗಿಕೊಂಡಿದ್ದು ಯಾರ ಕಿವಿಗೂ ಬೀಳಲೇ ಇಲ್ಲ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The state government has issued a notification making helmets compulsory for pillion riders across the state. Here is the real picture of helmets compulsory law across Bengaluru.
Please Wait while comments are loading...