ಫೆಬ್ರವರಿ ಅಂತ್ಯದಲ್ಲಿ ಹೆಲಿಕಾಪ್ಟರ್ ಟ್ಯಾಕ್ಸಿ ಹಾರಾಟ ಆರಂಭ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 10 : ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಿಂದ ಬೆಂಗಳೂರು ನಗರ ನಡುವೆ ಫೆಬ್ರವರಿ ತಿಂಗಳಾಂತ್ಯಕ್ಕೆ ಮೊದಲ ಹೆಲಿಕಾಪ್ಟರ್ ಸೇವೆ ಕಾರ್ಯಾರಂಭವಾಗಲಿದೆ.

ನಗರದ ದಕ್ಷಿಣ ಹಾಗೂ ಪೂರ್ವ ಭಾಗದಿಂದ ಕೆಐಎಗೆ ಪ್ರಯಾಣಿಸುವವರಿಗೆ ಹೆಲಿ ಟ್ಯಾಕ್ಸಿಯಿಂದ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಈಗಾಗಲೇ ಎಲೆಕ್ಟ್ರಾನಿಕ್ ಸಿಯಲ್ಲಿ ಹೆಲಿಪ್ಯಾಡ್ ಗಳು ಸಿದ್ಧವಾಗಿದ್ದು, ಸೇವೆ ಆರಂಭ ಮಾತ್ರ ಬಾಕಿ ಇದೆ. ಮುಂದಿನ ವಾರ ಅಧಿಕೃತವಾಗಿ ಅಪ್ಲಿಕೇಷನ್ ಬಿಡುಗಡೆ ಮಾಡಲಾಗುತ್ತದೆ.

ಕೆಐಎಎಲ್ ವಿಮಾನ ನಿಲ್ದಾಣದಿಂದ ನಗರಕ್ಕೆ ಹೆಲಿಕಾಪ್ಟರ್ ಸೇವೆ?

ಎಲೆಕ್ಟ್ರಾನಿಕ್‌ ಸಿಟಿಯಿಂದ ಕೆಐಎಗೆ ಲಕ್ಸುರಿ ಟ್ಯಾಕ್ಸಿಯಲ್ಲಿ ಪ್ರಯಾಣಿಸಲು 2 ಸಾವಿರ ರೂ. ಬೇಕು. ಆದರೆ, ಸಿಲ್ಕ್‌ ಬೋರ್ಡ್‌ ಹಾಗೂ ಹೊಸೂರು ರಸ್ತೆ ಟ್ರಾಫಿಕ್‌ನಿಂದಾಗಿ ಪ್ರಯಾಣ ಅವಧಿ 2 ತಾಸು ಹಿಡಿಯುತ್ತಿದೆ. ಆದರೆ, ಲಕ್ಸುರಿ ಕ್ಯಾಬ್ ದರದಲ್ಲೇ ಹೆಲಿಕಾಪ್ಟರ್ ನಲ್ಲೇ 15 ನಿಮಿಷಗಳಲ್ಲಿ ಕೆಐಎ ತಲುಪಬಹುದು.

Helicopter service from Electronic city to KIAL: Ticket booking start

ಬರುವ ದಿನಗಳಲ್ಲಿ ನಗರದ ಬೇರೆ ಬೇರೆ ಭಾಗಗಳಲ್ಲಿ ಹೆಲಿಪ್ಯಾಡ್ ಗಳು ಕಾರ್ಯಾರಂಭ ಮಾಡಲಿವೆ. ಎಲೆಕ್ಟ್ರಾನಿಕ್‌ ಸಿಟಿ ಜತೆಗೆ ಈಗಾಗಲೇ ಎಚ್‌ಎಎಲ್ ನಲ್ಲಿಯೂ ಒಂದು ಹೆಲಿಪ್ಯಾಡ್ ಬಳಕೆಗೆ ಸಿದ್ಧ ಸ್ಥಿತಿಯಲ್ಲಿ ಇದೆ. ಇದರ ಜತೆಗೆ ನಗರದ ವಿವಿಧೆಡೆ ಕಟ್ಟಡಗಳ ಮೇಲೆ 90 ಹೆಲಿಪ್ಯಾಡ್ ಗಳಿವೆ.

ಆದರೆ, ರೆಸಿಡೆನ್ಸಿ ರಸ್ತೆಯಲ್ಲಿರುವ ಐಟಿಸಿ ಗಾರ್ಡೇನಿಯಾ ಹೊಟೇಲ್ ಮೇಲಿನ ಹೆಲಿಪ್ಯಾಡ್ ಮಾತ್ರ ನಾಗರೀಕ ವಿಮಾನಯಾನ ಇಲಾಖೆಯಿಂದ ಕಾರ್ಯಾಚರಣೆ ಅನುಮತಿ ಪಡೆದುಕೊಂಡಿದೆ. 6 ರಿಂದ 13 ಪ್ರಯಾಣಿಕರ ಸಾಮರ್ಥ್ಯವಿರುವ ಬೆಲ್‌ ಕಂಪನಿಯ ಎರಡು ಹೆಲಿಕಾಪ್ಟರ್ ಗಳನ್ನು ಟ್ಯಾಕ್ಸಿ ಸೇವೆಗೆ ತುಂಬಿ ಏವಿಯೇಷನ್ ಬಳಸಲಿದ್ದು, ಒಂದು ಮಾತ್ರ ಹಾರಾಟ ನಡೆಸಲಿದ್ದು ಮತ್ತೊಂದು ಸ್ಟ್ಯಾಂಡ್‌ ಬೈ ಆಗಿ ಇರಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ticket booking opened for travel by helicopter between Electronic city to Kempegowda International Airport. The fare is fixed Rs3 thousand and duration of travelling is just 15 minutes.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X