ಅದೃಷ್ಟಶಾಲಿಗಳಿಗೆ ಪ್ರೇಮಿಗಳ ದಿನಕ್ಕೆ ಫ್ರೀ ಹೆಲಿ ಟ್ಯಾಕ್ಸಿ ಸೇವೆ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 13 : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ನಡುವೆ ಅಧಿಕೃತವಾಗಿ ಹೆಲಿ ಟ್ಯಾಕ್ಸಿ ಷಟಲ್ ಸೇವೆ ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿದೆ.

ಆದರೆ ಪ್ರೇಮಿಗಳ ದಿನದಂದು ಕೆಲವು ಅದೃಷ್ಟಶಾಲಿ ಪ್ರೇಮಿಗಳಿಗೆ ಈ ಹೆಲಿ ಟ್ಯಾಕ್ಸಿ ಸೇವೆಯ ಅನುಭವ ದೊರೆಯಲಿದೆ. ಹೆಲಿ ಟ್ಯಾಕ್ಸಿ ಷಟಲ್ ಸೇವೆಗಳನ್ನು ನೀಡಲಿರುವ ತುಂಬಿ ಏವಿಯೇಷನ್ ಪ್ರೇವೇಟ್ ಲಿಮಿಟೆಡ್ ಕಂಪನಿ, ತಾನು ನಡೆಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಫೆ.14ರ ಪ್ರೇಮಿಗಳ ದಿನದಂದು ಹೆಲಿಕಾಪ್ಟರ್ ನಲ್ಲಿ ಹಾರಾಡುವ ಸೇವೆಗಳನ್ನು ನೀಡಲಿದೆ.

ರೂ.5000 ಕೊಡಿ, ಆಕಾಶದಲ್ಲಿ ಹಾರಾಡುತ್ತಾ ಪ್ರಿಯತಮೆಗೆ ಮುತ್ತಿಡಿ

ಪ್ರೇಮಿಗಳ ದಿನದ ಅಂಗವಾಗಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಾಯೋಜಕ ಚಟುವಟಿಕೆಗಳ ಭಾಗವಾಗಿ ಒಂದು ಹೆಲಿಕಾಪ್ಟರ್ ಬಳಸಿ ಷಟಲ್ ಸೇವೆಗಳನ್ನು ಜಾಯ್ ರೈಡ್ ರೂಪದಲ್ಲಿ ಒದಗಿಸಲಾಗುವುದು ಎಂದು ತುಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ನ ಬ್ಯುಸಿನೆಸ್ ಡೆವಲಮೆಂಟ್ ನಿರ್ದೇಶಕ ಗೋವಿಂದ್ ನಾಯರ್ ತಿಳಿಸಿದ್ದಾರೆ.

Heli Taxi service on Valentine's day for lucky lovers

ಹೆಲಿಕಾಪ್ಟರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಹೆಲಿಕಾಪ್ಟರ್ ನಿಂದ ಹಾರಾಟ ನಡೆಸಲಿದೆ. ಅಲ್ಲಿಂದ ಎಲೆಕ್ಟ್ರಾನಿಕ್ ಸಿಟಿಗೆ ತೆರಳಲಿದೆ. ನಂದಿ ಬೆಟ್ಟಕ್ಕೂ ಹೆಲಿ ಸೇವೆ ಒದಗಿಸುವ ಆಲೋಚನೆ ಇದೆ ಎಂದು ಅವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Heli Taxi services will resume on Valentine's day unofficially. Lucky lovers will be selected and will get opportunity to fly from Electronic city to Kempegowda International Airport.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ