ಎಚ್‌ಎಎಲ್ ನಿಂದ ಕೆಐಎಎಲ್ ಗೆ ಹೆಲಿ ಟ್ಯಾಕ್ಸಿ ಸೇವೆ ವಿಸ್ತರಣೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ಎಚ್‌ಎಎಲ್ ನಿಂದ ಕೆಮಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಹೆಲಿಟ್ಯಾಕ್ಸಿ ಸೇವೆಯನ್ನು ವಿಸ್ತರಿಸಲು ಥಂಬಿ ಏವಿಯೇಷನ್ ಕಂಪನಿ ನಿರ್ಧರಿಸಿದೆ. ಸದ್ಯದಲ್ಲಿ ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ಸೇವೆ ಒದಗಿಸಲಾಗುತ್ತಿದೆ.

ಎರಡನೇ ಹೆಲಿ ಟ್ಯಾಕ್ಸಿ ಇಂದು ನಗರರವನ್ನು ಪ್ರವೇಶಿಸಲಿದೆ. ಈಗಾಗಲೇ ಮುಂಬೈನಿಂದ ಹುಬ್ಬಳ್ಳಿಗೆ ಬಂದು ತಲುಪಿದ್ದು ಇಂದು(ಶನಿವಾರ) ಎಲೆಕ್ಟ್ರಾನಿಕ್ ಸಿಟಿಗೆ ಬಂದು ತಲುಪಲಿದೆ. ಒಂದು ತಿಂಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯಿಂದ ಕೆಐಎಎಲ್ ಗೆ ತೆರಳಲು ಹೆಲಿ ಟ್ಯಾಕ್ಸಿಯನ್ನು ಪರಿಚಯಿಸಲಾಗಿತ್ತು.

ಕೆಐಎಎಲ್ ವಿಮಾನ ನಿಲ್ದಾಣದಿಂದ ನಗರಕ್ಕೆ ಹೆಲಿಕಾಪ್ಟರ್ ಸೇವೆ?

ಮಾರ್ಚ್ 5 ರಂದು ಹೆಲಿ ಟ್ಯಾಕ್ಸಿ ಬೆಲ್ 407 ಸೇವೆ ಆರಂಭವಾಗಿತ್ತು. ಕೇರಳ ಮೂಲದ ಥಂಬಿ ಏವಿಯೇಷನ್ ಪ್ರೈ.ಲಿ. ಕಂಪನಿಯು ಎರನೇ ಮಾರ್ಗದಲ್ಲಿ ಹೆಲಿಕಾಪ್ಟರ್ ಸೇವೆ ಮುಂದುವರೆಸಲು ನಿರ್ಧರಿಸಿದೆ. ಇದು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಲಿದೆ.

Heli-taxi firm adds another chopper to its fleet today

ಮೊದಲ ಹೆಲಿ ಟ್ಯಾಕ್ಸಿಯನ್ನು ಇದುವರೆಗೆ 175 ಮಂದಿ ಪ್ರಯಾಣಿಕರು ಬಳಕೆ ಮಾಡಿದ್ದಾರೆ. ಒಂದು ದಿನಕ್ಕೆ ಐದರಿಂದ ಆರು ಮಂದಿ ಪ್ರಯಾಣಿಕರನ್ನು ಕೊಂಡೊಯ್ಯಲಾಗುತ್ತಿದೆ. ಹೆಚ್ಚು ಎಂದರೆ ದಿನಕ್ಕೆ 12 ಮಂದಿ ಪ್ರಯಾಣಿಕರನ್ನು ಕೊಂಡೊಯ್ಯಬಹುದು, ದಿನಕ್ಕೆ ಕನಿಷ್ಟ 3 ಮಂದಿ ಪ್ರಯಾಣಿಸಿದ್ದಾರೆ ಎಂದು ಮುಖ್ಯಸ್ಥ ಕೆಎನ್ ಜಿ ನಾಯರ್ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಹೆಲಿ ಟ್ಯಾಕ್ಸಿಯನ್ನು ಪರಿಚಯಿಸಿ ಕೆಲವೇ ದಿನಗಳಲ್ಲಿ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ ತೆರಳಲು ಎರಡು ಗಂಟೆಗಳು ಬೇಕಿತ್ತು ಪೀಕ್ ಸಮಯದಲ್ಲಿ ಮೂರು ಗಂಟೆಗಳು ತಗುಲುತ್ತಿತ್ತು. ಆದರೆ ಹೆಲಿ ಟ್ಯಾಕ್ಸಿಯಲ್ಲಿ 12ರಿಂದ 15 ನಿಮಿಷಗಳಲ್ಲಿ ತೆರಳಬಹುದಾಗಿದೆ.

ಹೆಲಿಟ್ಯಾಕ್ಸಿಯಲ್ಲಿ ಆರು ಮಂದಿ ಒಟ್ಟಿಗೆ ಪ್ರಯಾಣಿಸಬಹುದಾಗಿದ್ದು 15 ಕೆಜಿ ತೂಕದ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು. ಕೇವಲ ಒಂದು ಪ್ರಯಾಣಿಕರಿದ್ದರೂ ಕೂಡ ಸೇವೆಯನ್ನು ಒದಗಿಸಲಾಗುತ್ತದೆ. ಟ್ಯಾಕ್ಸಿಯು ಬೆಳಗ್ಗೆ 6.30ರಿಂದ 10 ಗಂಟೆ ಹಾಗೂ ಮಧ್ಯಾಹ್ನ 3ರಿಂದ 6.30ರವರೆಗೆ ಸೇವೆ ಒದಗಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The second heli-taxi for the city has reached from Mumbai and is set to reach Electronics city on Saturday. It has been a month since the first such shuttle service for the city was launched and it is yet to catch up in a big way.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ