ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲಿಪ್‌‌ಕಾರ್ಟ್‌ನಿಂದ ಮೊಬೈಲ್‌ ಕದ್ದ ಕಳ್ಳ ಸಿಕ್ಕಿಬಿದ್ದ

By Ashwath
|
Google Oneindia Kannada News

ಬೆಂಗಳೂರು,ಜು.7: ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ನ ಮಾರಾಟ ಮಳಿಗೆಯಿಂದ ಸ್ಮಾರ್ಟ್‌‌ಫೋನ್‌‌ಗಳನ್ನು ಕಳವು ಮಾಡಿದ ಆರೋಪಿಯೊಬ್ಬನನ್ನು ಜೆ.ಜೆ.ನಗರ ಠಾಣೆಯ ಪೊಲೀಸರು ಬಂಧಿಸಿ, ಒಟ್ಟು 4.50 ಲಕ್ಷ ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಂಗೇರಿ ದೊಡ್ಡಿಪಾಳ್ಯದ ಇಮ್ಯಾನುಯಲ್ ತೇಜಸ್ ಬಿನ್ ಪ್ರೇಮಕುಮಾರ್(21) ಬಂಧಿತ ಆರೋಪಿ. ಬಂಧಿತನಿಂದ ಮೊಬೈಲ್‌ 8 ಆಪಲ್‌ ಐಫೋನ್‌ಗಳು, 4 ಸ್ಯಾಮ್‌ಸಂಗ್‌, 1 ನೋಕಿಯಾ ಲುಮಿಯಾ ಸ್ಮಾರ್ಟ್‌ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.[ಆನ್‌ಲೈನ್‌ ಶಾಪಿಂಗ್ ನಲ್ಲಿ ಫ್ಲಿಪ್ ಕಾರ್ಟ್ ಭರ್ಜರಿ ಡೀಲ್]

flipkart
‌ಬಂಧಿತ ಆರೋಪಿ ಮೈಸೂರು ರಸ್ತೆಯ ಡಿ.ಹೆಚ್.ಎಲ್.ಕಟ್ಟಡದಲ್ಲಿರುವ ಪ್ಲಿಪ್‍ಕಾರ್ಟ್‌ ಮಾರಾಟ ಮಳಿಗೆಯ ಸರ್ವೀಸ್ ಇನ್‍ಚಾರ್ಜ್ ಆಗಿ ಕೆಲಸ ಮಾಡಿಕೊಂಡಿದ್ದು ಆರು ತಿಂಗಳ ಹಿಂದೆ ಕೆಲಸತೊರೆದಿದ್ದ. ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲಿ ಪರಿಚಿತರಾಗಿದ್ದ ನೌಕರರನ್ನು ಮಾತನಾಡಿಸುವ ನೆಪದಲ್ಲಿ ಆಗಾಗ ಮಳಿಗೆಗೆ ಭೇಟಿ ನೀಡಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.[2014ರಲ್ಲಿ ಫ್ಲಿಪ್‌‌ಕಾರ್ಟ್‌‌ನಲ್ಲಿ 12 ಸಾವಿರ ನೇಮಕಾತಿ]

ಜೆ.ಜೆ.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ಆರ್.ವಸಂತಕುಮಾರ್ ನೇತೃತ್ವದಲ್ಲಿ ಪಿಎಸ್‍ಐ ಆಂಜಿನಪ್ಪ ಮತ್ತು ಸಿಬ್ಬಂದಿಯವರಾದ ಗಜೇಂದ್ರ, ಸತೀಶ್, ದೇವರಾಜ, ಪರಮೇಶ್ ನಾಯ್ಕ್ ಹಾಗೂ ವೆಂಕಟೇಶ್‍ಮೂರ್ತಿ ರವರು ಆರೋಪಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ..

English summary
Bangalore JJ Nagar Police on Monday arrested a person on charges of stealing high-end mobile phones from flipkart warehouse. The arrested person is Premkuar 21, form Doddipalaya, kengeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X