ಯಶವಂತ ಸರದೇಶಪಾಂಡೆ ನಾಟಕ 11ಕ್ಕೆ

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 11: ರಿಟೈರ್ ಆದ ಮೇಲೆ ನಿನ್ನ ಹೆಂಗೆ ನೋಡಿಕೊಳ್ತೀನಿ ನೋಡ್ತಿರು ಎಂದು ನಿಮ್ಮ ಪತಿರಾಯರು ಪದೇಪದೇ ಹೇಳ್ತಿದ್ದರೆ, ನೀವು ತಪ್ಪದೆ ಈ ನಾಟಕವನ್ನು ಅವರ ಜೊತೆಗೆ ನೋಡಬೇಕು. ನಾಟಕದ ಹೆಸರು "ಹೀಗೇಕೆ ನೀ ದೂರ ಓಡುವೆ". ಗುರು ಇನ್ ಸ್ಟಿಟ್ಯೂಟ್, ಹುಬ್ಬಳ್ಳಿ ತಂಡದ ಈ ಹೊಸ ಪ್ರಯೋಗದ ಮುಖ್ಯ ಸೂತ್ರಧಾರರು ಯಶವಂತ ಸರದೇಶಪಾಂಡೆ.

Heegeke nee doora oduve drama on September 11th

ರಿಟೈರ್ ಆದ ನಂತರ ಹೆಂಡತಿ ಜತೆಗೆ ಇರಲು ಬಯಸುವ ಗಂಡ, ಅದೇ ಸಮಯಕ್ಕೆ ಮನೆಯಿಂದ ಹೊರಗೆ ಹೋಗಿ ತನ್ನದೇ ಐಡೆಂಟಿಟಿಯಿಂದ ಗುರುತಿಸಿಕೊಳ್ಳಬೇಕು ಎಂದು ಬಯಸುವ ಪತ್ನಿ, ಕೆಲಸಕ್ಕೆ ಮತ್ತೆ ಹೋಗಲಾರೆ, ಇನ್ನು ಹೆಂಡತಿ ತನ್ನ ಜತೆಗೆ ಇರುವುದಿಲ್ಲ ಎಂಬ ಸನ್ನಿವೇಶಗಳಲ್ಲಿ ಗಂಡಸಿನ ತಾಕಲಾಟ ತುಂಬ ಚೆನ್ನಾಗಿ ಮೂಡಿಬಂದಿದೆ. ಅಂದಹಾಗೆ ಈ ನಾಟಕದ ಮೂಲ ಮರಾಠಿಯಲ್ಲಿ, ಶೇಖರ್ ಢವಳೀಕರ ರಚಿಸಿದ್ದಾರೆ.[ಮೈಸೂರಿನಲ್ಲಿ ಮೂರು ದಿನ 'ರಂಗವಲ್ಲಿ ರಂಗಸಂಭ್ರಮ']

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

Heegeke nee doora oduve drama on September 11th

ಸೆಪ್ಟೆಂಬರ್ 11ರಂದು ಭಾನುವಾರ ಸಂಜೆ 6.30ಕ್ಕೆ ಜಯನಗರ ಏಳನೇ ಬ್ಲಾಕ್ ನಲ್ಲಿರುವ ಜೆ ಎಸ್ ಎಸ್ ಸಭಾಂಗಣ ಶಿವರಾತ್ರೀಶ್ವರ ಕೇಂದ್ರದಲ್ಲಿ ನಾಟಕ ಪ್ರದರ್ಶನ ಇದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡದಲ್ಲಿ ಪ್ರದರ್ಶನ ಕಂಡು, ಭರ್ತಿ ಚಪ್ಪಾಳೆ ಗಿಟ್ಟಿಸಿರುವ ಈ ನಾಟಕದಲ್ಲಿ ಯಶವಂತ ಸರದೇಶಪಾಂಡೆ, ಮಾಲತಿ ಸರದೇಶಪಾಂಡೆ, ಕಲಾಗಂಗೋತ್ರಿ ಕಿಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ವಿವರಗಳಿಗೆ ಮೊ.9900980099.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Heegeke nee doora oduve drama show by Guru institute of Hubballi on September 11th in JSS auditorim, Shivaratrishwara centre, Jayanagar, Bengaluru.
Please Wait while comments are loading...