ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳದ ಬಿಜೆಪಿ ಅಭ್ಯರ್ಥಿ ಮೇಲೆ ಹರಿಹಾಯ್ದ ಜೆಡಿಎಸ್ ಕಾರ್ಯಕರ್ತರು

By Manjunatha
|
Google Oneindia Kannada News

ಬೆಂಗಳೂರು, ಮೇ 12: ಹೆಬ್ಬಾಳದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರು ಮತಗಟ್ಟೆ ಬಳಿ ಮತಯಾಚನೆ ಮಾಡುತ್ತಿದ್ದ ಕಾರಣ ಜೆಡಿಎಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.

LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು

ವೈ.ಎ.ನಾರಾಯಣಸ್ವಾಮಿ ಅವರು ಮತಗಟ್ಟೆ ಸುತ್ತ 100 ಮೀಟರ್‌ ನಿಷೇಧಿತ ಪ್ರದೇಶದಲ್ಲಿಯೇ ನಿಂತು ಮತ ಯಾಚನೆ ಮಾಡುತ್ತಿದ್ದರು. ಇದು ನಿಯಮಕ್ಕೆ ವಿರುದ್ಧವಾದುದು ಹಾಗಾಗಿ ಜೆಡಿಎಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಜೆಡಿಎಸ್‌ ಕಾರ್ಯಕರ್ತರು ನಾರಾಯಣಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ಬಳಿಕ ನಾರಾಯಣಸ್ವಾಮಿ ಅವರು ಮತಗಟ್ಟೆಯ ನಿಷೇಧಿತ ವಲಯ ಬಿಟ್ಟು ಹೊರಬಂದರು.

Hebbal BJP candidate Y.A.Narayanswamy scoled by jds party workers

ಇಂದು ಮುಂಜಾನೆ ಇದೇ ಕ್ಷೇತ್ರದಲ್ಲಿ ಬಿಜಪಿ ಕಾರ್ಯಕರ್ತರು ಚುನಾವಣಾ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ನಾರಾಯಣಸ್ವಾಮಿ ಅವರು ಮತ ಚಲಾಯಿಸಲು ಅನುವು ಮಾಡಿಕೊಡಲು ಬೇರೆ ಮತದಾರರಿಗೆ ಅಡ್ಡಿ ಮಾಡಿದ್ದಾಗ್ಯೂ ದೂರುಗಳು ಮುಂಜಾನೆ ಕೇಳಿ ಬಂದಿದ್ದವು.

English summary
Hebbal BJP candidate Y.A.Narayanswamy is campaigning near the polling booth against the rules so JDS party workers involve in verble clash with candidate Narayanaswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X