ಸಿಲಿಕಾನ್ ಸಿಟಿ ಜನತೆಯನ್ನು ಕಂಗೆಡಿಸಿದ ಧಾರಾಕಾರ ಮಳೆ

Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 8: ಸಂಜೆಯಾಗುತ್ತಿದ್ದಂತೆ ಮತ್ತೆ ಬೆಂಗಳೂರು ನಗರದಲ್ಲಿ ಧಾರಾಕಾರ ಮಳೆ ಸುರಿಯಲು ಆರಂಭಿಸಿದೆ. ಹೆಚ್ಚಿನ ಎಲ್ಲಾ ಪ್ರದೇಶಗಳಲ್ಲಿ ಮಲೆನಾಡಿನಂತೆ ಭಾರೀ ಮಳೆ ಸುರಿದಿದ್ದು ಕಚೇರಿ ಕೆಲಸ ಮುಗಿಸಿ ಮನೆಗೆ ಹೊರಟವರು ರಸ್ತೆಗಳಲ್ಲಿ ಬಾಕಿಯಾಗಿದ್ದಾರೆ.

ಹವಾಮಾನ ತಜ್ಞರ ಮಾನ ಉಳಿಸಿದ ಮಳೆರಾಯ!

ನಗರದ ಎಂಎಂ ಟೆಂಪಲ್, ಉದಯ ಟಿವಿ, ಬೆಳಕಲ್ ಹಳ್ಳಿ, ಸೋನಿವರ್ಲ್ಡ್, ಕಲ್ಯಾಣ ನಗರ, ಜಯನಗರ, ಹನುಮಂತನಗರ, ಬಸವನಗುಡಿ, ವಿಲ್ಸನ್ ಗಾರ್ಡನ್, ಆಡುಗೋಡಿ, ಕೋರಮಂಗಲ, ಪಿಜಿ ಹಳ್ಳಿ, ಕ್ವೀನ್ಸ್ ಸರ್ಕಲ್, ಕಸ್ತೂರಿ ನಗರ, ಎಂಜಿ ರಸ್ತೆ, ಬಾಳೇಕುಂದ್ರಿ, ಟ್ರಿನಿಟಿ ಸರ್ಕಲ್, ಇಂದಿರಾ ನಗರ, ಮಡಿವಾಳ, ಮಾರುತಿ ವೃತ್ತ, ವರ್ತೂರು ಕೆರೆ, ಟೌನ್ ಹಾಲ್ ಸುತ್ತ ಮುತ್ತ ಭಾರೀ ಮಳೆ ಸುರಿದಿದೆ. ಕೆಲವೆಡೆ ಇನ್ನೂ ಮಳೆ ಸುರಿಯುತ್ತಲೇ ಇದೆ.

Heavy rain lashes out Bengaluru on September 8th night

ಕಲ್ಯಾಣ ನಗರ, ಕಸ್ತೂರಿ ನಗರ, ಎಂಜಿ ರಸ್ತೆ, 80 ಅಡಿ ರಸ್ತೆ, ಫ್ರೇಜರ್ ಟೌನ್, ಲೋಕಾಯುಕ್ತ ಕಚೇರಿ ಮುಂಭಾಗ, ಕ್ವೀನ್ಸ್ ಜಂಕ್ಷನ್, ವಿಠಲ್ ಮಲ್ಯ ರಸ್ತೆ, ಹಳೆ ವಿಮಾನನಿಲ್ದಾಣ ರಸ್ತೆ, ಸಿಬಿ ರಸ್ತೆ ಜಂಕ್ಷನ್, ಅಲಿ ಅಸ್ಗರ್ ರಸ್ತೆ, ಡೆಲ್ ಬಸ್ ನಿಲ್ದಾಣ, 100 ಅಡಿ ರಸ್ತೆ, ಎಚ್.ಎಸ್.ಬಿ.ಸಿ ಜಂಕ್ಷನ್, ಬಿ.ಜಿ ರಸ್ತೆ ಸೇರಿ ಹಲವು ಕಡೆಗಳಲ್ಲಿ ರಸ್ತೆ ಮೇಲೆ ಭಾರೀ ನೀರು ನಿಂತಿದ್ದು ಪ್ರಯಾಣಿಕರು ನೀರಿನ ಮಧ್ಯೆಯೇ ಕಷ್ಟಪಟ್ಟು ವಾಹನ ಚಲಾಯಿಸಿಕೊಂಡು ಮನೆ ತಲುಪುತ್ತಿದ್ದಾರೆ.

ಹನುಮಂತನಗರ ಸುತ್ತ ವಾಹನ ದಟ್ಟಣೆ ಹೆಚ್ಚಾಗಿದ್ದು ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಮಳೆಯಿಂದ ಬಾಳೆಕುಂದ್ರಿ ವೃತ್ತ,ಜಯನಗರದ ಮಾಧವನ್ ಪಾರ್ಕ್ ಪಕ್ಕ ಮರ ಉರುಳಿ ಬಿದ್ದಿದೆ. ಇನ್ನು ಜಯನಗರ ಅಶೋಕ ಪಿಲ್ಲರ್ ಸಮೀಪ ಭಾರೀ ಗಾತ್ರದ ಮರ ಉರುಳಿ ಬಿದ್ದಿದೆ. ಹನುಮಂತನಗರದಲ್ಲಿ ಮಳೆಯಿಂದಾಗಿ ಕರೆಂಟ್ ಕಂಬವೊಂದು ಧರೆಗುರುಳಿದೆ. ಕೆಲವು ಕಡೆಗಳಲ್ಲಿ ಮರಗಳು ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿದ್ದರಿಂದ ವಿದ್ಯುತ್ ವ್ಯತ್ಯಯ ಕೂಡ ಉಂಟಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Heavy rains lashed Bengaluru on Friday, September 8, 2017 night. Water Logging at many places including MG Road.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ