ಮಳೆ ತಂದ ಸಂಕಷ್ಟ, ರಕ್ಷಣಾ ಕಾರ್ಯ ಹೇಗಿದೆ?

Written By:
Subscribe to Oneindia Kannada

ಬೆಂಗಳೂರು, ಜುಲೈ, 29: ಬೆಂಗಳೂರಿನಲ್ಲಿ ಮಳೆ ಆರ್ಭಟಿಸಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಗುರುವಾರ ರಾತ್ರಿಯ ಮಳೆ ಪರಿಣಾಮ ಬಿಟಿಎಂ ಲೇಔಟ್, ಕೋಡಿಚಿಕ್ಕನಹಳ್ಳಿಯ ನಾಗರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ಬಂದ ಜಾಗಗಕ್ಕೆ ತೆರಳಿ ಅಪಾರ್ಟ್ ಮೆಂಟ್ ಗಳಲ್ಲಿ ಸಿಕ್ಕಿರುವವರಿಗೆ ಆಹಾರ ಮತ್ತು ನೀರು ನೀಡುತ್ತಿದ್ದಾರೆ. ಕೆಲವೆಡೆ ಬೋಟ್ ಬಳಸಿ ಜನರನ್ನು ರಕ್ಷಣೆ ಮಾಡಲಾಗಿದೆ. ಅಲ್ಲದೇ ಬೋಟ್ ಗಳ ಮೂಲಕ ಆಹಾರ ಪೊಟ್ಟಣ ಮತ್ತು ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.[ಮಳೆ ಬಂತು, ಕೊಳಚೆ ನೀರಿನ ಕೆರೆಯಾದ ಬೆಂಗಳೂರು]

ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡಿರುವವರು ರಸ್ತೆಯಲ್ಲಿ ದಿನ ಕಳೆಯುತ್ತಿದ್ದರೆ, ಅಪಾರ್ಟ್ ಮೆಂಟ್ ಗಳಲ್ಲಿ ಸಿಕ್ಕಿ ಹಾಕಿಕೊಂಡವರದ್ದು ಮತ್ತೊಂದು ಕತೆ. ಬಿಟಿಎಂ ಲೇಔಟ್ ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳ ಪರಿಸ್ಥಿತಿ ಯಾರಿಗೂ ಬೇಡ ಎಂಬಂತಾಗಿದೆ.

ಕೆರೆಯಂತಾದ ಕೋಡಿಚಿಕ್ಕನಹಳ್ಳಿ ರಸ್ತೆ

ಕೆರೆಯಂತಾದ ಕೋಡಿಚಿಕ್ಕನಹಳ್ಳಿ ರಸ್ತೆ

ಭಾರೀ ಮಳೆ ಕೋಡಿಚಿಕ್ಕನಹಳ್ಳಿ ನಾಗರಿಕರಿಗೆ ಸಂಕಷ್ಟದ ಸರಮಾಲೆ ತಂದಿದೆ. 10ಕ್ಕೂ ಹೆಚ್ಚು ಅಪಾರ್ಟ್ ಮೆಂಟ್ ಗಳ ಬೇಸ್ ಮೆಂಟ್ ನಲ್ಲಿರುವ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಯಾರು ಹೊರಕ್ಕೆ ಬರಲು ಸಾಧ್ಯವಾಗುತ್ತಿಲ್ಲ.

 ಮೀನು ಹಿಡಿಯಲು ಮುಗಿಬಿದ್ದ ಜನ

ಮೀನು ಹಿಡಿಯಲು ಮುಗಿಬಿದ್ದ ಜನ

ಮಡಿವಾಳ ಕೆರೆ ತುಂಬಿ ರಸ್ತೆಗೆ ಹರಿದು ಬಂದ ಪರಿಣಾಮ ಜನರು ಬಿಟಿಎಂ ಲೇಔಟ್ ನಲ್ಲಿ ಮೀನು ಹಿಡಿಯಲು ಮುಗಿಬಿದ್ದರು. ಮನೆಯ ಒಳಗಡೆ ಇದ್ದ ಸೊಳ್ಳೆ ಪರದೆಗಳನ್ನು ಬಳಸಿ ಮೀನಿ ಹಿಡಿದರು.

ಭೇಟಿ ನೀಡಿದ ಅಧಿಕಾರಿಗಳು

ಭೇಟಿ ನೀಡಿದ ಅಧಿಕಾರಿಗಳು

ಮಳೆ ನೀರು ಮತ್ತು ಕೊಳಚೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದ್ದರೂ ಇಲ್ಲಿಯವರೆಗೆ ಯಾವ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಜನರ ಆಕ್ರೋಶ ಹೆಚ್ಚಿಸಿದೆ.

ಮುರಿದು ಬಿದ್ದ ಮರ

ಮುರಿದು ಬಿದ್ದ ಮರ

ಶ್ರೀನಿವಾಸ ನಗರ, ಬನಶಂಕರಿ, ಜಯನಗರದ, ರಾಮಮೂರ್ತಿ ನಗರ, ಬನ್ನೇರುಘಟ್ಟ ರಸ್ತೆಯಲ್ಲಿ ಮರಗಳು ಧರೆಗುರುಳಿ ಟ್ರಾಫಿಕ್ ಸಮಸ್ಯೆ ಮಿತಿಮೀರಿದೆ. ತಿರುಪಾಳ್ಯದ ಕೆರೆ ತುಂಬಿ ಹರಿಯುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru grappling with water-logged streets, massive traffic jams due to heavy rain on 29, July 2016.
Please Wait while comments are loading...