ಬೆಂಗಳೂರು: ಧಾರಾಕಾರ ಮಳೆಗೆ 4 ಬಲಿ; ಶಾಲಾ ಕಟ್ಟಡ ಕುಸಿತ

Posted By:
Subscribe to Oneindia Kannada
   Bengaluru Rain : Overnight Heavy Rain In Bengaluru | Oneindia Kannada

   ಬೆಂಗಳೂರು, ಸೆಪ್ಟೆಂಬರ್ 8: ನಗರದಲ್ಲಿ ಶುಕ್ರವಾರ ಸಂಜೆ ಧಾರಾಕಾರವಾಗಿ ಸುರಿದ ಮಳೆಯು ನಾಲ್ವರನ್ನು ಬಲಿಪಡೆದುಕೊಂಡಿದೆ.

   ಶಿವಾನಂದ ಸರ್ಕಲ್ ಬಳಿ ಯುವಕನೊಬ್ಬ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರೆ, ಮಿನರ್ವ ಸರ್ಕಲ್ ಬಳಿ ಮರವೊಂದು ಕಾರೊಂದರ ಮೇಲೆ ಉರುಳಿಬಿದ್ದು ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

   ಸಿಲಿಕಾನ್ ಸಿಟಿ ಜನತೆಯನ್ನು ಕಂಗೆಡಿಸಿದ ಧಾರಾಕಾರ ಮಳೆ

   ಇನ್ನು, ಟೌನ್ ಹಾಲಿನ ಬಳಿಯಿರುವ ಸರ್ಕಾರಿ ಶಾಲೆಯ ಕಟ್ಟಡವೊಂದು ಕುಸಿದುಬಿದ್ದಿದ್ದು, ಅದರ ಸುತ್ತಲೂ ನಿಲ್ಲಿಸಿದ್ದ ಅನೇಕ ಕಾರುಗಳು ಜಖಂ ಆಗಿವೆ ಎಂದು ವರದಿಯಾಗಿದೆ.

   Heavy rain in Bengaluru on September 8 claims 4 lives

   ಶುಕ್ರವಾರ ಸಂಜೆ ವೇಳೆ ಸುರಿದ ಧಾರಾಕಾರ ಮಳೆಯು ಸಂಜೆ ಸುಮಾರಿಗೆ 5 ಗಂಟೆ ಸುಮಾರಿಗೆ ಒಂದು ಬ್ರೇಕ್ ತೆಗೆದುಕೊಂಡು ಆನಂತರ ಭರ್ಜರಿಯಾಗಿ ಸುರಿಯಿತು. ಜಯನಗರ, ಮೆಜೆಸ್ಟಿಕ್, ಶಿವಾಜಿ ನಗರ, ಮೈಸೂರು ರಸ್ತೆ ಹೀಗೆ ಎಲ್ಲಾ ದಿಕ್ಕುಗಳ ಪ್ರದೇಶಗಳಲ್ಲೂ ಭಾರೀ ಮಳೆ ಆಗಿದ್ದರಿಂದ ಹಲವಾರು ಕಡೆ ಮರಗಳು, ವಿದ್ಯುತ್ ಕಂಬಗಳು ಉರುಳಿ ಜನರಿಗೆ ಭಾರೀ ತೊಂದರೆಯಾಯಿತು.

   ನಗರದ ರೇಸ್ ಕೋರ್ಸ್ ಹತ್ತಿರವಿರುವ ಶಿವಾನಂದ ಸರ್ಕಲ್ ಬಳಿಯಿರುವ ರೈಲ್ವೇ ಅಂಡರ್ ಪಾಸ್ ಬಳಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದರಿಂದಾಗಿ ಫುಟ್ ಪಾತ್ ಮೇಲೆ ಸಾಗುತ್ತಿದ್ದ 18 ವರ್ಷದ ವರುಣ್ ಎಂಬ ಯುವಕ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಆತ ಕಾಲಿಟ್ಟು ಸಾಗುತ್ತಿದ್ದ ಫುಟ್ ಪಾತ್ ದೊಡ್ಡ ಚರಂಡಿಯ ಮೇಲೆ ಹಾಕಿದ್ದ ಸ್ಲಾಬ್ ಗಳಾಗಿದ್ದವು. ಈ ಸ್ಲಾಬ್ ಗಳಲ್ಲಿನ ಒಂದು ಸ್ಲಾಬ್ ಮೇಲೆ ಕಾಲಿಟ್ಟಾಗ ಆ ಸ್ಲಾಬ್ ಕುಸಿದು ಆತ ಡ್ರೈನೇಜ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆಂದು ಹೇಳಲಾಗಿದೆ.

   ಕೆಆರ್ ಎಸ್ ನಿಂದ ನಾಲೆಗಳಿಗೆ ನೀರು: ಸಿದ್ದರಾಮಯ್ಯ

   ಮಿನರ್ವ ಸರ್ಕಲ್ ನಲ್ಲಿ ಕೆಎ 02, ಎನ್ 0771 ಸಂಖ್ಯೆ ಮಾರುತಿ ಎಸ್ಟೀಮ್ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದಿದ್ದರಿಂದ ದಂಪತಿ ಸೇರಿ ಮೂವರು ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಭಾರತಿ, ಜಗದೀಶ್ ಹಾಗೂ ರಮೇಶ್ ಎಂದು ಗುರುತಿಸಲಾಗಿದೆ.

   Heavy rain in Bengaluru on September 8 claims 4 lives

   ಕಾರಿನಲ್ಲಿ ಒಟ್ಟು ಐವರು ಪ್ರಯಾಣಿಸುತ್ತಿದ್ದರು. ಮರ ಬಿದ್ದ ಮೇಲೆ ಹಿಂಬದಿ ಸೀಟ್ ನಲ್ಲಿದ್ದ ಇಬ್ಬರನ್ನು ಸ್ಥಳೀಯರು ಹರಸಾಹಸ ಮಾಡಿ ಬಚಾವ್ ಮಾಡಿದ್ದಾರೆ. ಆದರೆ, ಮರದ ಬಿದ್ದ ರಭಸಕ್ಕೆ ಮುಂದಿನ ಸೀಟ್ ಗಳಲ್ಲಿ ಕುಳಿತಿದ್ದ ದಂಪತಿ ಹಾಗೂ ಹಿಂಬದಿ ಸೀಟ್ ನಲ್ಲಿದ್ದ ಅವರ ಸಂಬಂಧಿಯೊಬ್ಬ ಸಾವನ್ನಪ್ಪಿದ್ದಾರೆ. ಈ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

   ಸುದ್ದಿ ತಿಳಿದ ನಂತರ, ಮಿನರ್ವ ಸರ್ಕಲ್ ಗೆ ಬಂದಿದ್ದ ಮೇಯರ್ ಪದ್ಮಾವತಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.

   ಇತ್ತ, ಟೌನ್ ಹಾಲ್ ಬಳಿಯಿರುವ ಎಸ್.ಪಿ. ರೋಡ್ ಹತ್ತಿರದ ಸರ್ಕಾರಿ ಶಾಲೆಯೊಂದರ ಕಟ್ಟಡ ರಾತ್ರಿ 11:40ರ ಸುಮಾರಿಗೆ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲವಾದರೂ, ಆ ಕಟ್ಟಡದ ಸುತ್ತ ನಿಲ್ಲಿಸಲಾಗಿದ್ದ ಕಾರುಗಳು ಜಖಂಗೊಂಡಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   The heavy rain in Bengaluru on September 8th, 2017, claims 4 lives. 3 persons were killed when a tree fell on a car near Minerva Circle. Near Shivananda Circle, a youth has disappeared in after falling into a drainage.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ