ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ವಿಟ್ಟರ್ ವಿಡಿಯೋಗಳಲ್ಲಿ ನೋಡಿ ಬೆಂಗಳೂರು ಮಳೆಯ ಆರ್ಭಟ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 06: ಸಾಕಪ್ಪಾ ಈ ಮಳೆಯ ಸಹವಾಸ ಎಂಬಷ್ಟರ ಮಟ್ಟಿಗೆ ಗುರುವಾರ ಮಧ್ಯಾಹ್ನದಿಂದ ರಾತ್ರಿಯವರೆಗೂ ಎಡಬಿಡದೆ ಮಳೆ ಸುರಿಯುತ್ತಲೇ ಇದೆ.

ಮೊದಲೇ ಆಳಗಲ ಕೊರೆದುಕೊಂಡಿದ್ದ ಗುಂಡಿಗಳು ಮಳೆಯ ಆರಂಭಟಕ್ಕೆ ಮತ್ತಷ್ಟು ಆಳಕ್ಕಿಳಿದು ಮೃತ್ಯಕೂಪದಂತೆ ಕಾದುಕುಳಿತಿವೆ. ಹನುಮಂತನ ಬಾಲದಂತೆ ಸಾಲಾಗಿ ನಿಂತ ವಾಹನಗಳು ಬೆಂಗಳೂರಿಗರ ಟ್ರಾಫಿಕ್ ತಾಪತ್ರಯಕ್ಕೆ ಕನ್ನಡಿ ಹಿಡಿದಿವೆ.

In Pics:ಕುಂಭದ್ರೋಣ ಮಳೆಗೆ ಮುಳುಗುತಿಹುದು ಬೆಂಗಳೂರು

ಬೆಂಗಳೂರಿನ ಬಹುಪಾಲು ಪ್ರದೇಶಗಳು ಜಲಾವೃತವಾಗಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಬೆಂಗಳೂರು ಮಳೆಯ ಫೋಟೋಗಳು, ವಿಡಿಯೋಗಳು ಹರಿದಾಡಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.

ಬೆಂಗಳೂರಲ್ಲಿ ಮುಂದಿನ 48 ಗಂಟೆಗಳಲ್ಲಿ ಗಾಳಿ ಸಹಿತ ಭಾರೀ ಮಳೆಬೆಂಗಳೂರಲ್ಲಿ ಮುಂದಿನ 48 ಗಂಟೆಗಳಲ್ಲಿ ಗಾಳಿ ಸಹಿತ ಭಾರೀ ಮಳೆ

ಹಲವು ಪ್ರದೇಶಗಳು ಜಲಾವೃತವಾಗಿರುವ ವಿಡಿಯೋಗಳು ಟ್ವಿಟ್ಟರ್ ನಲ್ಲಿ ನಿನ್ನೆಯೆಲ್ಲ ಟ್ರೆಂಡಿಂಗ್ ಆಗಿದ್ದವು.

ನೈಸ್ ರಸ್ತೆಯಲ್ಲಿ ನೀರೋ ನೀರು

ನೈಸ್ ರಸ್ತೆಯ ಪೆಸಿಟ್ ಎದುರು ರಸ್ತೆಯ ತುಂಬ ನೀರು ತುಂಬಿ ವಾಹನ ಸಂಚಾರಕ್ಕೂ ಅಡ್ಡಿಯಾಗಿತ್ತು. ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ವೃಷಭಾವತಿಗೆ ಮರುಹುಟ್ಟು

ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ 5 ನದಿಗಳಿದ್ದವು. ವೃಷಭಾವತಿಯೂ ಅವುಗಳಲ್ಲೊಂಮದು. ನಾವು ಆ ನದಿಯನ್ನು ಕೊಂದು, ಚರಂಡಿಯನ್ನಾಗಿ ಬದಲಿಸಿದ್ದೆವು. ಆದರೆ ಮಳೆ ಅದನ್ನು ಮತ್ತೆ ಹುಟ್ಟುವಂತೆ ಮಾಡಿದೆ ಎಂದು ಕಿರಣ್ ಕುಮಾರ್ ಎಸ್ ಎನ್ನುವವರು ಟ್ವೀಟ್ ಮಾಡಿದ್ದಾರೆ.

ವಾಹನ ಸಂಚಾರಕ್ಕೆ ಅಡ್ಡಿ

ಬೆಂಗಳೂರಿನ ಏರಿಯಾವೊಂದರಲ್ಲಿ ರಸ್ತೆ ತುಂಬಿರುವ ನೀರು ಬೇರೆ ವಾಹನಗಳು ಸಂಚರಿಸುವುದಕ್ಕೆ ಅಡ್ಡಿಯಾಗುತ್ತಿರುವ ದೃಶ್ಯ.

ಸ್ವಿಮ್ ಸೂಟ್ ಸಿದ್ಧಪಡಿಸಿಕೊಳ್ಳಿ!

ಬೆಂಗಳೂರಿನ ತುಂಬ ಸ್ವಿಮ್ಮಿಂಗ್ ಪೂಲ್ ಗಳು ಸೃಷ್ಟಿಯಾಗಿವೆ. ಸ್ವಿಮ್ಮಿಂಗ್ ಸೂಟ್ ರೆಡಿ ಮಾಡಿಕೊಳ್ಳಿ. ಬಿಬಿಎಂಪಿ, ಮತ್ತು ಕರ್ನಾಟಕ ಸರ್ಕಾರದ್ದು ದೊಡ್ಡ ದೊಡ್ಡ ಭರವಸೆಗಳಷ್ಟೆ! ಪರಿಹಾರವಿಲ್ಲ! ಎಂದು ದೀಪಕ್ ಬೋಪಣ್ಣ ಎನ್ನುವವರು ವಿಡಿಯೋ ಜೊತೆ ಟ್ವೀಟ್ ಮಾಡಿದ್ದಾರೆ.

ಶಿವಾನಂದ ಸರ್ಕಲ್ ನಲ್ಲಿ ಪ್ರವಾಹ!

ಬೆಂಗಳೂರಿನ ಶಿವಾನಂದ ಸರ್ಕಲ್ ನಲ್ಲಿ ಶುರುವಾಗಿದ್ದು ಮಳೆಯಾ? ಪ್ರವಾಹವಾ ಎಂದು ಗೊಂದಲದಲ್ಲಿ ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ ಉಷಾ ಎಸ್.

English summary
Heavy Rains in bengaluru create havoc. Here are few video of Bengaluru rain, which are posted by twitterians.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X