ಬೆಳಗ್ಗೆ ಮುಷ್ಕರದ ಬಿಸಿ, ಸಂಜೆ ಮಳೆ ತಂದ ತಲೆಬಿಸಿ

Written By:
Subscribe to Oneindia Kannada

ಬೆಂಗಳೂರು, ಜುಲೈ, 25: ಬೆಂಗಳೂರಿನಲ್ಲಿ ಸೋಮವಾರ ಬೆಳಗ್ಗೆ ಬಿಎಂಟಿಸಿ ಮುಷ್ಕರದ ಬಿಸಿ. ಸಂಜೆ ಕೊಚ್ಚಿ ಹೋಗುವಂಥ ಮಳೆ.

ಬಿಎಂಟಿಸಿ ಮುಷ್ಕರದ ಪರಿಣಾಮ ಇಡೀ ದಿನ ನಾಗರಿಕರು ತೊಂದರೆ ಅನುಭವಿಸಿದರು. ಕೆಲವರು ಅಪರೂಪಕ್ಕೆ ಸ್ವಂತ ವಾಹನವನ್ನು ಹೊರಕ್ಕೆ ತೆಗೆದಿದ್ದರು. ಆದರೆ ಸಂಜೆ ಮನೆಗೆ ಬರುವ ವೇಳೆಗೆ ಸರಿಯಾಗಿ ಮಳೆ ಆರ್ಭಟ ಶುರುಮಾಡಿತು.[ಆಲಮಟ್ಟಿ ಜಲಾಶಯ ಭರ್ತಿ]

rain

ಪರಿಣಾಮವನ್ನು ಹೊಸದಾಗಿ ಹೇಳಬೇಕಾಗಿಲ್ಲ. ಎಲ್ಲೆಲ್ಲೂ ಟ್ರಾಫಿಕ್ ಜಾಮ್, ಮಲ್ಲೇಶ್ವರಂ, ಜಯನಗರ, ಸಿಟಿ ಮಾರುಕಟ್ಟೆ, ಮೆಜೆಸ್ಟಿಕ್, ಬಿಟಿಎಂ, ಮಾರತ್ ಹಳ್ಳಿ ಸೇರಿದಂತೆ ಎಲ್ಲ ಕಡೆ ಮಳೆ ಅಬ್ಬರಿಸಿದೆ.[ದೇಶದ ಶೇ. 89 ಭಾಗಕ್ಕೆ ವರುಣನ ಕೃಪೆ, ಕರ್ನಾಟಕದ ಕತೆ?]

ಬಿಟಿಎಂ ಲೇಔಟ್ ಬಳಿಯ ಬ್ರ್ಯಾಂಡ್ ಫಾಕ್ಟರಿ ಬಳಿ ಕಾರೊಂದು ಮುಳುಗುವ ಹಂತಕ್ಕೆ ರಸ್ತೆಗೆ ನೀರು ನುಗ್ಗಿತ್ತು. ಸ್ವಾತಂತ್ರ್ಯ ಉದ್ಯಾನವನದ ಬಳಿ ಮರ ಧರೆಗುರುಳಿದೆ.

ಬಿಟಿಎಂ ಬಳಿ ಮಳೆ ಆರ್ಭಟದ ವಿಡಿಯೋ ನೋಡಿ (ವಿಡಿಯೋ ಕೃಪೆ: ಅನಿಲ್ ಜೋಯ್ಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: Heavy rains affected traffic movement on Monday evening. JP Nagar II Phase, Jayanagar, Mejestic, Basavanagudi and several part of city received rainfall.
Please Wait while comments are loading...