ಬೆಂಗಳೂರಲ್ಲಿ ಮಳೆ, ಕೆಂಗೇರಿಯಲ್ಲಿ ರಸ್ತೆ ಜಲಾವೃತ

Posted By: Gururaj
Subscribe to Oneindia Kannada
Bengaluru rain : overflowing Vrishabhavati floods mysore road kengeri | Oneindia Kannada

ಬೆಂಗಳೂರು, ಸೆಪ್ಟೆಂಬರ್ 10 : ಬೆಂಗಳೂರು ನಗರದಲ್ಲಿ ಮಳೆ ಮುಂದುವರೆದಿದ್ದು, ರಸ್ತೆಗಳು ಜಲಾವೃತವಾಗಿವೆ. ಇನ್ನೂ ಮೂರು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೈಸೂರು ರಸ್ತೆಯಲ್ಲಿ ಆರ್.ಆರ್.ನಗರದಿಂದ ಕೆಂಗೇರಿ ತನಕ ಸಾಗುವ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ. ಎರಡು ಕೆಎಸ್‌ಆರ್‌ಟಿಸಿ ಬಸ್ ಮತ್ತು 4 ಕಾರುಗಳು ನೀರಿನಲ್ಲಿ ಮುಳುಗಡೆಯಾಗಿದೆ.

ಇದು ಬೆಂಗಳೂರು ಮಳೆ ಬರೆದ ಚಿತ್ರ! ಸ್ವಲ್ಪ ಸಿಹಿ, ಜಾಸ್ತಿ ಕಹಿ!

rain

ವೃಷಭಾವತಿ ತುಂಬಿ ಹರಿಯುತ್ತಿದೆ. ರಸ್ತೆ ಮೇಲೆ ಸುಮಾರು 6 ಅಡಿ ನೀರು ನಿಂತಿದೆ. ಒಂದು ಕಡೆ ಮೆಟ್ರೋ ಕಾಮಗಾರಿ, ಮತ್ತೊಂದು ಕಡೆ ನೀರು ತುಂಬಿರುವುದರಿಂದ ವಾಹನ ಸವಾರರು ಪರಡಾಡುತ್ತಿದ್ದಾರೆ.

ಚಿತ್ರಗಳು : ಕೆಂಗೇರಿಯಲ್ಲಿ ರಸ್ತೆ ಜಲಾವೃತ, ಮೀನು ಹಿಡಿದ ಜನರು

* ಆರ್.ವಿ.ಕಾಲೇಜು ಬಳಿ ನೀರಿನಲ್ಲಿ ಸಿಲುಕಿದ್ದ 36 ಜನರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ರಸ್ತೆಯಲ್ಲಿ ತುಂಬಿಕೊಂಡಿರುವ ನೀರು ನಿಧಾನವಾಗಿ ಇಳಿಯುತ್ತಿದೆ.

* ಮಾಗಡಿ ರಸ್ತೆಯಲ್ಲಿ ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಮನೆಯೊಂದು ಕುಸಿದುಬಿದ್ದಿದೆ

* ಕಗ್ಗಲೀಪುರದಲ್ಲಿ ಸರ್ಕಾರಿ ಆಸ್ಪತ್ರೆಗೆ ನೀರು ನುಗ್ಗಿದೆ. ಎನ್‌ಡಿಆರ್‌ಎಫ್‌ ಸಿಬ್ಬಂದಿ ರೋಗಿಗಳನ್ನು ಸ್ಥಳಾಂತರ ಮಾಡಿದರು

* ನಾಯಂಡಹಳ್ಳಿ, ವಸಂತನಗರ, ಮಾಗಡಿ ರಸ್ತೆಯ ಕೆಲವು ಕಡೆ ರಸ್ತೆಗಳು ಜಲಾವೃತವಾಗಿದೆ, ಮನೆಗಳಿಗೆ ನೀರು ನುಗ್ಗಿದೆ

* ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇನ್ಫೋಸಿಸ್ ಕ್ಯಾಂಪಸ್ ಗೋಡೆ ಕುಸಿದುಬಿದ್ದು, ನೀರು ಒಳಕ್ಕೆ ನುಗ್ಗಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Heavy Monsoon rains continued to lash Bengaluru city on Saturday, September 9, 2017 night. Bengaluru city to receive rainfall for next two days.
Please Wait while comments are loading...