ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಯ್ಯಯ್ಯೋ, ಇಲ್ನೋಡಿ, ಲಾಲ್ ಬಾಗ್ ಕೆರೆ ತುಂಬ ಹಾವೋ ಹಾವು!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 4: ಇದೇನು ಬೆಂಗಳೂರೇ ಹೌದಾ? ಅಂತ ಒಂದು ಕ್ಷಣ ಕನ್ ಫ್ಯೂಸ್ ಆಗುವ ಮಟ್ಟಿಗೆ ಕಳೆದ ಮೂರು ದಿನದಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಲೇ ಇದೆ.

ಚಿತ್ರಗಳು : ಬೆಂಗಳೂರಿನ ಜನರಿಗೆ ಸಂಕಷ್ಟ ತಂದ ಮಳೆ

ಸಂಜೆ ಹೊತ್ತಲ್ಲಿ ಮಂಜುಕವಿದ ವಾತಾವರಣ! ನೋಡೋದಕ್ಕೇನೋ ಚೆಂದ. ಆದರೆ ಈ ಮಳೆಯ ಅವಾಂತರಕ್ಕೆ ಬೆಂಗಳೂರಿಗರು ಪಟ್ಟ ಪಡಿಪಾಟಲು ಮಾತ್ರ ದೇವರಿಗೇ ಪ್ರೀತಿ!

ಬೆಂಗ್ಳೂರಲ್ಲಿ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ 300 ಕೋಟಿ ಸ್ಕೀಮುಬೆಂಗ್ಳೂರಲ್ಲಿ ಪ್ರವಾಹ ಸ್ಥಿತಿ ನಿಯಂತ್ರಣಕ್ಕೆ 300 ಕೋಟಿ ಸ್ಕೀಮು

ನಿರಂತರವಾಗಿ ಸುರಿದ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳ ಅಸಲಿ ಗುಣಮಟ್ಟವೂ ಬಯಲಾಗಿದ್ದು, ಹೊಂಡಗಳ ನಡುವಲ್ಲಿ ರಸ್ತೆಯನ್ನು ಹುಡುಕುವುದು ಸಾಹಸವೆನ್ನಿಸಿದೆ. ಇದರೊಂದಿಗೆ ರಸ್ತೆಗಳ ನಡುವಲ್ಲಿ ಅಡಿಯೆತ್ತರ ನಿಂತ ನೀರು ಸಣ್ಣ ಪುಟ್ಟ ವಾಹನಗಳನ್ನೇ ಮುಳುಗಿಸುತ್ತಿದೆ!

ಮತ್ತೆ ರಾತ್ರಿ ಮಳೆಯ ಸುದ್ದಿ, ಒದ್ದೆ ಒದ್ದೆಯಾದ ಬೆಂಗಳೂರು ಮತ್ತೆ ರಾತ್ರಿ ಮಳೆಯ ಸುದ್ದಿ, ಒದ್ದೆ ಒದ್ದೆಯಾದ ಬೆಂಗಳೂರು

ಬಿದ್ದ ಮರಗಳನ್ನಂತೂ ಲೆಕ್ಕವಿಟ್ಟವರಿಲ್ಲ. ಮನೆಗಳಿಗೆ ನೀರು ನುಗ್ಗಿ ವರುಣ ದೇವಂಗೂ, ಬಿಬಿಎಂಪಿಗೂ ಹಿಡಿಶಾಪ ಹಾಕಬೇಕಾದ ಪರಿಸ್ಥಿತಿ ಬೆಂಗಳೂರಿಗರಿಗೆ ಉಂಟಾಗಿದೆ.

ಲಾಲ್ ಬಾಗ್ ನಲ್ಲಿ ಉರಗ ಪ್ರದರ್ಶನ!

ಲಾಲ್ ಬಾಗ್ ನಲ್ಲಿ ಉರಗ ಪ್ರದರ್ಶನ!

ಇವೆಲ್ಲದರ ನಡುವೆ ಉದ್ಯಾನ ನಗರಿಯ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇನ್ನೊಂದು ಅಚ್ಚರಿ ಕಾದಿದೆ! ಕಳೆದ ತಿಂಗಳಷ್ಟೆ ಫಲ-ಪುಷ್ಪ ಪ್ರದರ್ಶನ ಮುಗಿಸಿದ್ದ ಲಾಲ್ ಬಾಗ್ ಇದೀಗ ತನ್ನ ಕೆರೆಯಲ್ಲಿ ಉರಗ ಪ್ರದರ್ಶನ ಹಮ್ಮಿಕೊಂಡಿದೆ!

ಸಸ್ಯಕಾಶಿಯ ಕೆರೆಯಲ್ಲಿ ಹಾವೋ ಹಾವು!

ಸಸ್ಯಕಾಶಿಯ ಕೆರೆಯಲ್ಲಿ ಹಾವೋ ಹಾವು!

ಹೌದು, ಜೋರು ಮಳೆಗೆ, ನೀರಿನೊಂದಿಗೆ ಕೊಚ್ಚಿಕೊಂಡು ಬಂದ ಹಲವು ಹಾವುಗಳು ಲಾಲ್ ಬಾಗ್ ಕೆರೆಗೆ ಬಂದು ಸೇರಿವೆ!

ತುಂಬಿದ ಲಾಲ್ ಬಾಗ್ ಕೆರೆ

ತುಂಬಿದ ಲಾಲ್ ಬಾಗ್ ಕೆರೆ

ಭಾರೀ ಮಳೆಯಿಂದಾಗಿ ಬೇರೆ ಬೇರೆ ಕಡೆಗಳಿಂದ ಹರಿದುಬಂದ ನೀರು ಲಾಲ್ ಬಾಗ್ ಕೆರೆಯನ್ನು ಸೇರಿದ್ದು, ಸಸ್ಯಕಾಶಿ ಕೆರೆಯೀಗ ತುಂಬಿ ತುಳುಕುತ್ತಿದೆ.

ಭೀತಿಯಲ್ಲಿ ಜನರು

ಭೀತಿಯಲ್ಲಿ ಜನರು

ಲಾಲ್ ಬಾಗ್ ನಲ್ಲಿ ಎಲ್ಲೆಂದರಲ್ಲಿ ಹಾವು ಕಂಡುಬರುತ್ತಿರುವುದರಿಂದ ಉದ್ಯಾನಕ್ಕೆ ಬರುವ ಜನರು ಆತಂಕದಲ್ಲಿದ್ದಾರೆ. ಕೇವಲ ಕೆರೆಯಲ್ಲಷ್ಟೇ ಅಲ್ಲದೆ, ಉದ್ಯಾನವದ ಹಲವೆಡೆಗಳಲ್ಲಿ ಹಾವು ಹರಿಯುವುದು ಕಂಡುಬರುತ್ತಿದೆ.

ಗೋಡೆ ಮೇಲೆ ಉರಗ ಪ್ರತ್ಯಕ್ಷ

ಗೋಡೆ ಮೇಲೆ ಉರಗ ಪ್ರತ್ಯಕ್ಷ

ಲಾಲ್ ಬಾಗಿನ ಕಾಂಪೌಂಡ್ ಗೋಡೆಗಳ ಮೇಲೂ ಹಾವುಗಳು ಕಂಡುಬರುತ್ತಿದ್ದು, ಇವೆಲ್ಲ ವಿಷಕಾರಿ ಹಾವು ಹೌದೋ, ಅಲ್ಲವೋ ಎಂಬ ಬಗ್ಗೆ ಮಾಹಿತಿ ದೊರೆತಿಲ್ಲ.

ಥಣಿಸಂದ್ರದಲ್ಲಿ ರಸ್ತೆ ನದಿಯಾಗಿ...

ಭಾರೀ ಮಳೆಗೆ ಥಣಿಸಂದ್ರದಲ್ಲಿ ರಸ್ತೆಯೆಲ್ಲ ನದಿಯಾಗಿ ಬದಲಾಗಿತ್ತು! ಎಲ್ಲೆಲ್ಲೂ ನೀರು ತುಂಬಿ ಜನರು ಸಂಚಾರಕ್ಕೂ ಕಷ್ಟಪಡುತ್ತಿದ್ದ ದೃಶ್ಯ ಕಂಡುಬಂತು.

English summary
After heavy rain in Karnataka state capital Bengaluru, many snakes spotted in lal bagh lake. People are scared.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X