ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ 102 ಸರ್ಕಾರಿ ಪದವಿ ಕಾಲೇಜುಗಳಿಗೆ ಕಟ್ಟಡಗಳೇ ಇಲ್ಲ!

By Nayana
|
Google Oneindia Kannada News

ಬೆಂಗಳೂರು, ಜು.27: ಉನ್ನತ ಶಿಕ್ಷಣ ಕ್ಷೇತ್ರದ ಗುಣಮಟ್ಟದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಅವರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕೊರತೆಯಾಗಿದೆ.

ರಾಜ್ಯದ ಎಲ್ಲಾ ವಿವಿಗೆ ಒಂದೇ ಪಠ್ಯ, ಒಂದೇ ವೇಳಾಪಟ್ಟಿ ಎಂದ ಜಿಟಿಡಿರಾಜ್ಯದ ಎಲ್ಲಾ ವಿವಿಗೆ ಒಂದೇ ಪಠ್ಯ, ಒಂದೇ ವೇಳಾಪಟ್ಟಿ ಎಂದ ಜಿಟಿಡಿ

ವಿದ್ಯಾರ್ಥಿಗಳನ್ನು ಹೆಚ್ಚೆಚ್ಚು ವ್ಯಾಸಂಗದತ್ತ ಸೆಳೆಯಬೇಕಿದ್ದರೆ ಮೂಲಸೌಕರ್ಯಗಳನ್ನು ಒದಗಿಸಬೇಕು. ರಾಜ್ಯದ 102 ಪದವಿ ಕಾಲೇಜುಗಳಿಗೆ ಕಟ್ಟಡಗಳೇ ಇಲ್ಲ, 3800 ಉಪನ್ಯಾಸಕರ ಅಗತ್ಯವಿದೆ. 10 ಸಾವಿರ ಅತಿಥಿ ಉಪನ್ಯಾಸಕರನ್ನು ಮುಂದುವರೆಸುತ್ತೇವೆ ಎಂದು ಮಾಹಿತಿ ನೀಡಿದರು.

HE minister says no building for 102 govt degree college

ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಕಾಲೇಜುಗಳಲ್ಲಿ ಏಕಕಾಲಕ್ಕೆ ಕೋರ್ಸ್‌ ಪ್ರಾರಂಭಿಸುತ್ತೇವೆ, ಕಟ್ಟಡಗಳಿಗೆ ವಿಶೇಷವಾಗಿ 250 ಕೋಟಿ ಮೀಸಲಿಡುತ್ತೇವೆ, ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಕಾಳೇಜುಗಳಿಗೆ ಹೋಗಬೇಕು ಎಂದೆನಿಸುವ ಹಾಗೆ ಕಟ್ಟಡಗಳನ್ನು ನಿರ್ಮಿಸಬೇಕಿದೆ, ಹಾಗೆಯೇ ಉಪನ್ಯಾಸಕರನ್ನು ನೇಮಿಸಬೇಕಿದೆ. ಒಟ್ಟಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುವ ಅಗತ್ಯವಿದೆ ಎಂದು ಹೇಳಿದರು.

English summary
Higher education minister GT Devegowda revealed that there is no permanent building for 102 government degree colleges in the state. He also said that there are 3800 lectures posts are vacant in the colleges since the government reserved 250 crores development of this colleges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X