ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪನವರೇ ಅಧಿಕಾರ ನನ್ನ ಬಳಿ ಇದೆ: ಕುಮಾರಸ್ವಾಮಿ ನೇರ ಎಚ್ಚರಿಕೆ

|
Google Oneindia Kannada News

Recommended Video

ಬಿ ಎಸ್ ಯಡಿಯೂರಪ್ಪಾಗೆ ಖಡಕ್ ವಾರ್ನಿಂಗ್ ಕೊಟ್ಟ ಎಚ್ ಡಿ ಕುಮಾರಸ್ವಾಮಿ | oneindia kannada

ಬೆಂಗಳೂರು, ಸೆಪ್ಟೆಂಬರ್ 20: ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ರಾತ್ರಿ ವೇಳೆ ಜೆಡಿಎಸ್ ಶಾಸಕರಿಗೆ ಕರೆ ಮಾಡಿ ತಮ್ಮ ಪಕ್ಷಕ್ಕೆ ಬರುವಂತೆ ಕರೆಯುತ್ತಿದ್ದಾರೆ. ಇಂತಹ ಕೃತ್ಯವನ್ನು ನಿಲ್ಲಿಸದಿದ್ದರೆ ನನ್ನ ಕೈಯಲ್ಲಿ ಅಧಿಕಾರ ಎಂಬುದನ್ನು ಯಡಿಯೂರಪ್ಪ ಮರೆಯಬಾರದು ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರನ್ನು ಅಪೊಲೊ ಆಸ್ಪತ್ರೆಗೆ ತೆರಳಿ ಭೇಟಿ ಮಾಡಿದ ಕುಮಾರಸ್ವಾಮಿ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇವರ ಚರಿತ್ರೆ ಏನೆಂಬುದನ್ನು ಬಲ್ಲೆ, ವಯಸ್ಸಿನಲ್ಲಿ ಯಡಿಯೂರಪ್ಪ ತುಂಬಾ ದೊಡ್ಡವರು ತಮ್ಮ ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಬೇಕು.

ಡಿಕೆಶಿಯನ್ನು ಕುಮಾರಸ್ವಾಮಿ ಶಾಸಕರೊಂದಿಗೆ ಹಠಾತ್ ಭೇಟಿ ಮಾಡಿದ್ದೇಕೆ? ಡಿಕೆಶಿಯನ್ನು ಕುಮಾರಸ್ವಾಮಿ ಶಾಸಕರೊಂದಿಗೆ ಹಠಾತ್ ಭೇಟಿ ಮಾಡಿದ್ದೇಕೆ?

ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವಾಗ ಮಾತಿನ ಮೇಲೆ ಹಿಡಿತವಿರಬೇಕು, ಬಾಯಿಗೆ ಬಂದಂತೆ ಮಾತನಾಡಿದರೆ ನನ್ನ ಕೈಯಲ್ಲಿದೆ ಎನ್ನುವುದನ್ನು ಯಡಿಯೂರಪ್ಪ ಮರೆಯ ಬಾರದು ಎಂದು ಹೇಳಿದರು.

HDK warns Yeddyurappa will face the consequences

ಬುಧವಾರ ರಾತ್ರಿ ನಾಗಮಂಗಲ ಶಾಸಕ ಸುರೇಶ್ ಗೌಡ ಅವರಿಗೆ ಕರೆ ಮಾಡಿ ಈಗಾಗಲೇ 18 ಶಾಸಕರು ಸಿದ್ಧರಾಗಿದ್ದಾರೆ ನೀವೂ ಬಂದುಬಿಡಿ ಎಂದು ಯಡಿಯೂರಪ್ಪ ಕೋರಿದ್ದಾರೆ. ಕಾಂಗ್ರೆಸ್ ಶಾಸಕರ ಶಿವಳ್ಳಿಯವರಿಗೂ ಕರೆ ಮಾಡಿ 18 ಶಾಸಕರೊಂದಿಗೆ ರೆಸಾರ್ಟ್ ಗೆ ತೆರಳುತ್ತಿದ್ದು ನೀವೂ ಬಂದುಬಿಡಿ ಎಂದು ಕರೆದಿದ್ದಾರೆ.

ಏನೇ ಅಡೆತಡೆ ಇದ್ದರೂ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವೆ:ಸಿಎಂ ಏನೇ ಅಡೆತಡೆ ಇದ್ದರೂ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುವೆ:ಸಿಎಂ

ಪರ್ಸೆಂಟೇಜ್ ಪದ್ಧತಿಯನ್ನು ಹುಟ್ಟುಹಾಕಿದ್ದೇ ಯಡಿಯೂರಪ್ಪ, ಇಂತಹ ರಾಜಕಾರಣವನ್ನು ನಿಲ್ಲಿಸದಿದ್ದರೆ ನಾನು ಸುಮ್ಮನಿರುವುದಿಲ್ಲ, ಯಡಿಯೂರಪ್ಪ ಏನೆಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ನನಗೆ ತಿಳಿದಿದೆ ಆದರೂ ಸುಮ್ಮನಿದ್ದೇನೆ.

ಇದೇ ರೀತಿ ಯಡಿಯೂರಪ್ಪ ತಮ್ಮ ಆಪರೇಷನ್ ಬುದ್ಧಿಯನ್ನು ಮುಂದುವರೆಸಿದರೆ ನನ್ನ ಕೈಯಪ್ಪಿರುವ ಅಧಿಕಾರವನ್ನು ಬಳಸುವುದು ನನಗೆ ಅನಿವಾರ್ಯವಾಗುತ್ತದೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

English summary
Chief minister H.D.Kumaraswamy has warned state Bjp president B.S.Yeddyurappa that the latter will face the consequences if he try to purchase Congress and JDS MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X