ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಸರ್ಕಾರದ ಒಂದು ಯೋಜನೆಗೆ ಎಚ್ಡಿಕೆ ಬೀಗ ಹಾಕಿದ್ಯಾಕೆ?

|
Google Oneindia Kannada News

Recommended Video

ಸಿದ್ದರಾಮಯ್ಯ ಸರ್ಕಾರದ ಒಂದು ಯೋಜನೆಗೆ ಬೀಗ ಜಡಿದ ಎಚ್ ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ನವೆಂಬರ್ 3: ಸಿದ್ದರಾಮಯ್ಯ ಸರ್ಕಾರದ ಒಂದು ಯೋಜನೆಗೆ ಎಚ್‌ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಎಳ್ಳು-ನೀರು ಬಿಟ್ಟಿದೆ. ಹಾಗಾದರೆ ಆ ಯೋಜನೆ ಯಾವುದು ಎನ್ನುವ ಕುತೂಹಲ ನಿಮಗೂ ಇರಬಹುದು ಹಾಗಾದರೆ ಮುಂದೆ ಓದಿ..

ದೀಪಾವಳಿ ವಿಶೇಷ ಪುರವಣಿ

ಸಿದ್ದರಾಮಯ್ಯ ಸರ್ಕಾರದ ಯೋಜನೆಗಳಲ್ಲೊಂದಾದ ರಾಜೀವ್ ಗಾಂಧಿ ವಿದ್ಯಾರ್ಥಿ ವೇತನ ಸಾಲ ಯೋಜನೆಗೆ ಸಮ್ಮಿಶ್ರ ಸರ್ಕಾರ ಸಲ್ಲಿಲ್ಲದೆ ಗುಡ್ ಬೈ ಹೇಳಿದೆ. ಆದರೆ ಕುಮಾರಸ್ವಾಮಿಯವರು ಹೇಳಿದಂತೆ ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರೆಸುತ್ತೇವೆ ಎನ್ನುವ ಮಾತು ಸುಳ್ಳಾಗಿದೆ.

ಮತ್ತೊಂದು ಸಾಲ ಮನ್ನಾಕ್ಕೆ ಸಿದ್ಧರಾದ ಎಚ್.ಡಿ.ಕುಮಾರಸ್ವಾಮಿ ಮತ್ತೊಂದು ಸಾಲ ಮನ್ನಾಕ್ಕೆ ಸಿದ್ಧರಾದ ಎಚ್.ಡಿ.ಕುಮಾರಸ್ವಾಮಿ

ಒಂದೊಮ್ಮೆ ಯೋಜನೆಯನ್ನು ಮುಂದುವರೆಸುವುದಾದರೆ ಬ್ಯಾಂಕ್‌ಗಳ ಜೊತೆ ಮತ್ತೊಂದು ಸುತ್ತಿನ ಒಡಂಬಡಿಕೆ ಆಗಬೇಕು. ಆದರೆ ಪ್ರಸ್ತಾವನೆ ಸರ್ಕಾರಸ ಮುಂದಿದ್ದು ಒಪ್ಪಿಗೆ ಸಿಕ್ಕಲ್ಲ ಎಂಬುದು ಅಧಿಕಾರಿಗಳ ಸಮಜಾಯಿಷಿಯಾಗಿದೆ. ಪ್ರತಿ ವರ್ಷ ಮೂರು ಸಾವಿರ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ಸಿಗಬೇಕೆಂಬುದು ಹಿಂದಿನ ಕಾಂಗ್ರೆಸ್ ಸರ್ಕಾರದ ಉದ್ದೇಶವಾಗಿತ್ತು.

 ವಿದ್ಯಾರ್ಥಿಗಳಿಗೆ ಬಡ್ಡಿರಹಿತ 60 ಸಾವಿರ ರೂ ವಾರ್ಷಿಕ ಸಾಲ

ವಿದ್ಯಾರ್ಥಿಗಳಿಗೆ ಬಡ್ಡಿರಹಿತ 60 ಸಾವಿರ ರೂ ವಾರ್ಷಿಕ ಸಾಲ

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ವಿದ್ಯಾರ್ಥಿಗಳಿಗೆ ಬಡ್ಡಿರಹಿತವಾಗಿ 60 ಸಾವಿರ ರೂ ವಾರ್ಷಿಕ ಸಾಲ ನೀಡಲು 2014-15ರಿಂದ ರಾಜೀವ್ ಗಾಂಧಿ ವಿದ್ಯಾರ್ಥಿ ವೇತನ ಸಾಲ ಮನ್ನಾ ಯೋಜನೆ ಜಾರಿಗೊಳಿಲಸಾಗಿತ್ತು.

ರೈತರ ಬಳಿಕ ವಿದ್ಯಾರ್ಥಿಗಳ ಸಾಲಮನ್ನಾ: ಸುತ್ತೋಲೆ ಹೊರಡಿಸಿದ ಸರ್ಕಾರ ರೈತರ ಬಳಿಕ ವಿದ್ಯಾರ್ಥಿಗಳ ಸಾಲಮನ್ನಾ: ಸುತ್ತೋಲೆ ಹೊರಡಿಸಿದ ಸರ್ಕಾರ

 ಕೃಷಿ ಸಾಲ ಮನ್ನಾ ಯೋಜನೆಯಿಂದಾಗಿ ಈ ಯೋಜನೆ ಕೈಬಿಟ್ಟರೆ?

ಕೃಷಿ ಸಾಲ ಮನ್ನಾ ಯೋಜನೆಯಿಂದಾಗಿ ಈ ಯೋಜನೆ ಕೈಬಿಟ್ಟರೆ?

ರೈತರ ಕೃಷಿ ಸಾಲ ಮನ್ನಾವನ್ನು ಈಗಾಗಲೇ ಜಾರಿ ಮಾಡಲಾಗಿದೆ. ಎಲ್ಲಾ ಬ್ಯಾಂಕ್‌ಗಳಿಂದ ಮಾಹಿತಿಯನ್ನು ಪಡೆಯಲಾಗುತ್ತಿದೆ. ಈ ಕೃಷಿ ಸಾಲ ಮನ್ನಾಕ್ಕಾಗಿ ವಿದ್ಯಾರ್ಥಿಗಳ ವಾರ್ಷಿಕ ಬಡ್ಡಿ ರಹಿತ ಸಾಲ ಯೋಜನೆಯನ್ನು ಕುಮಾರಸ್ವಾಮಿ ಕೈಬಿಟ್ಟರೆ ಎನ್ನುವ ಪ್ರಶ್ನೆಯನ್ನು ವಿದ್ಯಾರ್ಥಿಗಳು ಕೇಳುತ್ತಿದ್ದಾರೆ.

ಸಾಲದ ಹೊರೆ: ಮಂಡ್ಯದಲ್ಲಿ ಜೆಡಿಎಸ್ ಮುಖಂಡ ಆತ್ಮಹತ್ಯೆ ಸಾಲದ ಹೊರೆ: ಮಂಡ್ಯದಲ್ಲಿ ಜೆಡಿಎಸ್ ಮುಖಂಡ ಆತ್ಮಹತ್ಯೆ

 ಯೋಜನೆ ಫಲಾನುಭವಿಗಳು ಯಾರಾಗಿದ್ದರು?

ಯೋಜನೆ ಫಲಾನುಭವಿಗಳು ಯಾರಾಗಿದ್ದರು?

ಅನುದಾನಿತ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯದ ಕುಟುಂಬದ ವಿದ್ಯಾರ್ಥಿಗಳು ಯೋಜನೆಯ ಫಲಾನುಭವಿಗಳು. 2014ರಲ್ಲಿ ಬ್ಯಾಂಕ್ ಗಳ ಜತೆ ಕಾಲೇಜು ಶಿಕ್ಷಣ ಇಲಾಖೆ ಒಡಂಬಡಿಕೆ ಮಾಡಿಕೊಂಡಿದ್ದು, ಅದೀಗ ಅಂತ್ಯಗೊಂಡಿದೆ. ಹೀಗಾಗಿ ಬಡ ವಿದ್ಯಾರ್ಥಿಗಳಿಗೆ ಇನ್ನು ಬಡ್ಡಿ ರಹಿತ ಸಾಲ ಸಿಗುವುದಿಲ್ಲ.

 ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಮನ್ನಾ ಯೋಜನೆ ಶೀಘ್ರ ಜಾರಿ

ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಮನ್ನಾ ಯೋಜನೆ ಶೀಘ್ರ ಜಾರಿ

ವಿದ್ಯಾರ್ಥಿಗಳ ಶೈಕ್ಷಣಿಕ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದರು.ರೈತರ ಸಾಲಮನ್ನಾ ಬಳಿಕ ಇನ್ನೊಂದು ಸಾಲಮನ್ನಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಎಲ್ಲಾ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಿಣಿಕ ಸಾಲಮನ್ನಾ ಮಾಡಲು ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದೆ. ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಸರ್ಕಾರ ಮತ್ತೊಂದು ಸಾಲಮ್ನ್ನಾ ಯೋಜನೆಗೆ ಮುಂದಾಗಿದೆ, ಎಲ್ಲಾ ವರ್ಗಗಳ ವಿದ್ಯಾರ್ಥಿಗಳ ಸಾಲಮನ್ನಾಗೆ ಚಿಂತನೆ ನಡೆಸಿದೆ. ಯುವಕರ ಗಮನ ಸೆಳೆಯಲು ಎಚ್‌ಡಿ ಕುಮಾರಸ್ವಾಮಿ ಮಾಡಿರುವ ಉಪಾಯ ಇದಾಗಿದೆ.

English summary
Chief minister HD Kumaraswamy put a break on Previous Government Rajiv Gandhi education loan program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X