ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಅಷ್ಟದಿಕ್ಕುಗಳಿಗೂ 4 ಹಂತದಲ್ಲಿ ನಮ್ಮ ಮೆಟ್ರೋ: ಎಚ್ಡಿಕೆ

By Nayana
|
Google Oneindia Kannada News

Recommended Video

ನಮ್ಮ ಮೆಟ್ರೋ ಬೆಂಗಳೂರಿನ ಅಷ್ಟದಿಕ್ಕುಗಳಿಗೂ ತಲುಪುವ ಭರವಸೆ ಕೊಟ್ಟ ಎಚ್ ಡಿ ಕೆ | Oneindia Kannada

ಬೆಂಗಳೂರು, ಜೂನ್ 22: ರಾಜಧಾನಿ ಬೆಂಗಳೂರಿನ ಅಷ್ಟ ದಿಕ್ಕುಗಳನ್ನೂ ತಲುಪುವ ನಮ್ಮ ಮೆಟ್ರೊ ಸಂಪರ್ಕಕ್ಕೆ ನಾಲ್ಕು ಹಂತದ ಯೋಜನೆಗೆ ನೀಲನಕ್ಷೆ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ನಮ್ಮ ಮೆಟ್ರೊ ಯೋಜನೆಯ ಆರು ಕೋಚ್‌ಗಳ ಮೆಟ್ರೊ ರೈಲು ಸೌಲಭ್ಯಕ್ಕೆ ಶುಕ್ರವಾರ ಸಂಜೆ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಚಾಲನೆ ನೀಡಿದ ಬಳಿಕ ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು.

ನಮ್ಮ ಮೆಟ್ರೋದಲ್ಲಿ ವೈಫೈ? ಆದಾಯ ಹೆಚ್ಚಾದರೆ ಆ ಭಾಗ್ಯವೂ ಇದೆ!ನಮ್ಮ ಮೆಟ್ರೋದಲ್ಲಿ ವೈಫೈ? ಆದಾಯ ಹೆಚ್ಚಾದರೆ ಆ ಭಾಗ್ಯವೂ ಇದೆ!

ನಾನು 2006ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಮೆಟ್ರೊ ಕಾಮಗಾರಿಗೆ ಚಾಲನೆ ನೀಡಿದ್ದೆ. ಹಿಂದಿನ ಕಾಂಗ್ರೆಸ್ ಸರ್ಕಾರ ನಗರಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಮೆಟ್ರೊ ಸೇರಿದಂತೆ ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿತ್ತು. ಈಗಿನ ಸಮ್ಮಿಶ್ರ ಸರ್ಕಾರ ಕೂಡ ನಮ್ಮ ಮೆಟ್ರೊ ಮುಂದಿನ ಹಂತದ ಕಾಮಗಾರಿಗಳು ಸೇರಿದಂತೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಿದೆ ಎಂದು ಭರವಸೆ ನೀಡಿದರು.

HDK promises Namma Metro will reach every corner of the city

ಮೆಟ್ರೋ ಎರಡನೇ ಫೇಸ್ ಮುಕ್ತಾಯಗೊಂಡರೆ ಸುಮಾರು 20 ಲಕ್ಷ ಜನರು ಮೆಟ್ರೋ ಬಳಸುವ‌ ಮೂಲಕ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅಭಿಪ್ರಾಯಪಟ್ಟರು. ಆರು ಬೋಗಿಗಳ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಬೆಂಗಳೂರು ಏಷ್ಯಾದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ ಮೆಟ್ರೋ ಜನರಿಗೆ ಅನುಕೂಲ ಮಾಡಿಕೊಡುತ್ತಿದೆ.

ಬೆಂಗಳೂರು ಬೆಳೆಯುತ್ತಿರುವ ವೇಗಕ್ಕೆ ಮುಂದಿನ ದಿನಗಳಲ್ಲಿ ಕಡಿವಾಣ ಹಾಕಬೇಕಿದೆ.. ಅಕ್ಕ ಪಕ್ಕದ ಸ್ಟಾಟಲೈಟ್ ಟೌನ್‌ಗಳನ್ನು ಬೆಳೆಸಿ, ಮೆಟ್ರೋ, ಸಬ್‌ಅರ್ಬನ್ ರೈಲುಗಳ ಲಿಂಕ್ ಮಾಡುವ ಮೂಲಕ ನಗರದ ಅಭಿವೃದ್ಧಿಯನ್ನು ವಿಸ್ತರಿಸಬೇಕಿದೆ ಎಂದರು.

HDK promises Namma Metro will reach every corner of the city

ನಮ್ಮ ಮೆಟ್ರೋ ಮೊದಲ ಫೇಸ್‌ನಲ್ಲಿ ನಿತ್ಯ ಮೂರುವರೆ ಲಕ್ಷ ಜನರು ಪ್ರಯಾಣ ಮಾಡುತ್ತಿದ್ದಾರೆ. 72 ಕಿ.ಮೀ.ನ ಎರಡನೇ ಫೇಸ್ ಮೆಟ್ರೋ ಕಾಮಗಾರಿ ಪೂರ್ಣಗೊಂಡರೆ 20 ಲಕ್ಷ ಜನ ಸಂಚರಿಸಲಿದ್ದಾರೆ ಎಂದರು.

English summary
Chief minister H.D.Kumaraswamy has promised that the state government will provide Namma Metro service to every corner of the city for the convenience of lakhs of commuters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X