ಬೆಂಗಳೂರು ರಸ್ತೆಗಿಳಿಯಲಿದೆ ನಮ್ಮ ಟೈಗರ್ ಕ್ಯಾಬ್

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 28 : ಊಬರ್ ಹಾಗೂ ಓಲಾ ಟ್ಯಾಕ್ಸಿ ಸೇವೆಗಳಿಗೆ ಸೆಡ್ಡು ಹೊಡೆದು ಹೊರ ಹೋಗಿದ್ದ ಸಾವಿರಾರು ಚಾಲಕರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ರೂಪುಗೊಂಡಿರುವ ನಮ್ಮ ಟೈಗರ್ ಕ್ಯಾಬ್ ನ.29 ರಂದು ಲೋಕಾರ್ಪಣೆಗೊಳ್ಳಲಿದೆ.

ಸದ್ಯದಲ್ಲೇ ಬೆಂಗಳೂರಿನ ರಸ್ತೆಗಿಳಿಯಲಿದೆ 'ನಮ್ಮ ಟೈಗರ್' ಕ್ಯಾಬ್ಸ್

ಹುಲಿ ಟೆಕ್ನಾಲಜೀಸ್ ಪ್ರವೈಟ್ ಲಿಮಿಟೆಡ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಕಾರ್ಯಕ್ರಮ ಟೌನ್ ಹಾಲ್ ನಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಅಪ್ಲಿಕೇಷನ್ ಲೋಕಾರ್ಪಣೆ ಮಾಡಲಿದ್ದಾರೆ.

HDK led Namma Tiger new cab service

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಲಾಂಛನವನ್ನು ಅನಾವರಣಗೊಳಿಸಲಿದ್ದಾರೆ. ಸಾರಿಗೆ ಇಲಾಖೆ ಆಯುಕ್ತ ದಯಾನಂದ್, ಸಂಚಾರ ವಿಭಾಗ ಹೆಚ್ಚುವರಿ ಪೊಲೀಸ್ ಕಮಿಷನರ್ ಹಿತೇಂದ್ರ ಕುಮಾರ್, ಡಿಸಿಪಿ ಅಜಯ್ ಹಿಲೋರಿ, ಜೆಡಿಎಸ್ ರಾಷ್ಟ್ರೀಯ ವಕ್ತಾರ ಜಫುರುಲ್ಲಾಖಾನ್, ಜೆಡಿಎಸ್ ರಾಜ್ಯ ವಕ್ತಾರ ಬಿ.ಎಂ. ಫಾರೂಖ್, ಜೆಡಿಎಸ್ ಕಾರ್ಯಾಧ್ಯಕ್ಷ ನಾರಾಯಣಸ್ವಾಮಿ, ಬಿಬಿಎಂಪಿ ಉಪ ಮೇಯರ್ ಪದ್ಮಾವತಿ ನರಸಿಂಹಮೂರ್ತಿ ಅತಿಥಿಗಳಾಗಿ ಆಗಮಿಸಿದ್ದಾರೆ.

ಏನು-ನಮ್ಮ ಟೈಗರ್ ಕ್ಯಾಬ್ ಅಪ್ಲಿಕೇಷನ್ ಬಿಡುಗಡೆ
ಎಲ್ಲಿ- ಟೌನ್ ಹಾಲ್
ಯಾವಾಗ-ನ.29, ಬುಧವಾರ,ಬೆ.11.೦೦

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
New cab app service Namma Tiger will be launched on nov 29 in the leadership of former chief minister H.D. Kumaraswamy.Former cm HDK earlier promised thousands of cab drivers who went on strike against Uber and Ola cab services companies against Anti-Labour rules.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ