ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐದು ವರ್ಷ ಅಧಿಕಾರ ನಡೆಸೋದು ಶತಃಸಿದ್ಧ: ಎಚ್ಡಿಕೆ ವಿಶ್ವಾಸ

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಪ್ರಕಾರ, ಮೈತ್ರಿ ಸರ್ಕಾರ 5 ವರ್ಷ ಪೂರೈಸಲಿದೆ | Oneindia Kannada

ಬೆಂಗಳೂರು, ಸೆಪ್ಟೆಂಬರ್ 19: ನನಗೆ ಯಾವುದೇ ರಾಜಕೀಯ ಒತ್ತಡವಿಲ್ಲ, ನಾನು ಅಧಿಕಾರವನ್ನು ಕಳೆದುಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿರುವುದು ವಿಷಾದ ಸಂಗತಿ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.

ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ 100 ನೇ ರಾಜ್ಯ ಪರಿಷತ್ ಸಭೆ ಹಾಗೂ ಕೊಂಡಜ್ಜಿ ಸಭಾಂಗಣ ಉದ್ಘಾಟಿಸಿ ಮಾತನಾಡಿ ಅವರು, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಯಾವುದೇ ಆತಂಕವಿಲ್ಲ, ನಾವು ಐದು ವರ್ಷಗಳನ್ನು ಪೂರೈಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಭೇಟಿ ಮಾಡಲು ಸಂಸದರ ನಿರ್ಧಾರ, ಉದ್ದೇಶವೇನು? ಕುಮಾರಸ್ವಾಮಿ ಭೇಟಿ ಮಾಡಲು ಸಂಸದರ ನಿರ್ಧಾರ, ಉದ್ದೇಶವೇನು?

ನಾನು ಅನಾರೋಗ್ಯದ ನಡುವೆಯೂ ಪಿ ಜಿ ಆರ್ ಸಿಂದ್ಯಾ ಅವರ ಒತ್ತಡ ನಡುವೆ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೆನೆ. ಈ ಸರ್ಕಾರವನ್ನು ಐದು ವರ್ಷ ಇಟ್ಟುಕೊಳ್ಳುತ್ತೇನೆ, ಈ ಬಗ್ಗೆ ಆತಂಕ ಬೇಡ, ಸರ್ಕಾರ ರಚನೆಯಾದಗಿನಿಂದ ಸರ್ಕಾರ ಬೀಳುವ ಬಗ್ಗೆ ವರದಿ ಮಾಡುತ್ತಾರೆ.

HDK confident on completing his five years tenure

ಹೃದಯ ಚಿಕಿತ್ಸೆಗೆ ಒಳಗಾದ ನನ್ನ ಸ್ಥಿತಿ ಏನಾಗಬಾರದು, ನಾನು ಮಾಡುವ ಒಳ್ಳೆಯ ಕಾರ್ಯಗಳಿಗೆ ಮಾಧ್ಯಮದವರು ಬೆಂಬಲ ನೀಡಿ, ಕುರ್ಚಿ ಉಳಿಸಿಕೊಳ್ಳಲಿಕ್ಕೆ ನೀವು ಬೆಂಬಲ ನೀಡ ಬೇಡಿ, ನಾನು ಬೆಳಗ್ಗೆಯಿಂದ ರಾತ್ರಿವರೆಗೆ ಜನತಾದರ್ಶನ ನಡೆಸುತ್ತೇನೆ ಇದು ಸುಲಭದ ಕೆಲಸವಲ್ಲ, ರಾಜಕೀಯ ಒತ್ತಡ ಬದಿಗಿಟ್ಟು ಜನರ ಒಳಿತಿಗಾಗಿ ದುಡಿಯುತ್ತಿದ್ದೇನೆ ಎಂದರು.

ಸಂಧಾನಕ್ಕೆ ತೆರಳಿದ್ದ ಎಚ್ ಡಿಕೆಗೆ ಜಾರಕಿಹೊಳಿ ಸಹೋದರರ 5 ಷರತ್ತುಗಳು ಸಂಧಾನಕ್ಕೆ ತೆರಳಿದ್ದ ಎಚ್ ಡಿಕೆಗೆ ಜಾರಕಿಹೊಳಿ ಸಹೋದರರ 5 ಷರತ್ತುಗಳು

ನಾನು ಅಧಿಕಾರಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತೇನೆ, ಸರ್ಕಾರದ ಬಗ್ಗೆ ಅನುಮಾನ ಹೊಂದಿರುವ ಅಧಿಕಾರಿಗಳಿಗೆ ಒಂದು ವಾರ ಟೈಮ್ ಕೊಡುತ್ತೇನೆ, ಸರಿಯಾದ ರೀತಿ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

English summary
Chief minister H.D.Kumaraswamy has expressed his confidence he will complete five years of tenure despite any political circumstances.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X