ಕೆರೆಗಳ ಡಿನೋಟಿಫೀಕೇಶನ್ ವಿರುದ್ಧ ರಾಜ್ಯಪಾಲರಿಗೆ ಎಚ್.ಡಿ.ಕೆ ಪತ್ರ

Subscribe to Oneindia Kannada

ಬೆಂಗಳೂರು, ಆಗಸ್ಟ್ 1: ಬತ್ತಿಹೋದ ಕೆರೆಗಳನ್ನು ಡಿನೋಟಿಫೈ ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಯಡಿಯೂರಪ್ಪಗೆ ಹಿನ್ನಡೆ, ಡಿನೋಟಿಫಿಕೇಷನ್ ಕೇಸ್ ಮತ್ತೆ ವಿಚಾರಣೆಗೆ

ಸೋಮವಾರ ರಾಜ್ಯಪಾಲ ವಜೂಭಾಯಿ ವಾಲಾರಿಗೆ ಬರೆದ ಪತ್ರದಲ್ಲಿ 1500 ಕೆರೆಗಳನ್ನು ಡಿನೋಟಿಫೈ ಮಾಡುವ ರಾಜ್ಯ ಸಚಿವ ಸಂಪುಟದ ತೀರ್ಮಾನವನ್ನು ಖಂಡಿಸಿದ್ದಾರೆ.

 HD Kumaraswamy wrote a letter to governor against denotification of lakes

ಮಾತ್ರವಲ್ಲ ತಮ್ಮ ಕಾಲದಲ್ಲಿ ಹಾಗೂ ತಮ್ಮ ತಂದೆ ದೇವೇಗೌಡರ ಕಾಲದಲ್ಲಿ ಕೆರೆಗಳನ್ನು ಉಳಿಸಲು ತೆಗೆದುಕೊಂಡ ತೀರ್ಮಾನಗಳನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಈ ವಿಚಾರದಲ್ಲಿ ನೀವು ಮಧ್ಯ ಪ್ರವೇಶ ಮಾಡಬೇಕು ಮತ್ತು ಸಮಾಜ ಮತ್ತು ಪರಿಸರ ವಿರೋಧಿ ಕೆರೆಗಳ ಡಿನೋಟಿಫೈ ವಿಚಾರದಲ್ಲಿ ಮುಂದುವರಿಯದಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕುಮಾರಸ್ವಾಮಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

 HD Kumaraswamy wrote a letter to governor against denotification of lakes
Bangalore, Bellandur Lake catches fire all of a sudden

ಈ ಹಿಂದೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಕೆರೆಗಳ ಡಿನೋಟಿಫಿಕೇಶನ್ ವಿರೋಧಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former chief minister of Karnataka and JDS state president HD Kumaraswamy wrote a letter to governer and seek action against the Karnataka State Government move on denotification of 1500 dying lakes.
Please Wait while comments are loading...