ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹು, ಕೇತು, ಶನಿ... ಸಿದ್ದು ಹೇಳಿಕೆಗೆ ಮೌನವೇ ಉತ್ತರ ಎಂದ ಸಿಎಂ!

|
Google Oneindia Kannada News

Recommended Video

ಸಿದ್ದರಾಮಯ್ಯ ಹೇಳಿಕೆಗೆ ಮೌನವೇ ಉತ್ತರ ಎಂದ ಎಚ್ ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಅಕ್ಟೋಬರ್ 01: 'ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ರಾಹು, ಕೇತು ಮತ್ತು ಶನಿ ಎಲ್ಲರೂ ಸೇರಿ ಸೋಲಿಸಿದ್ದಾರೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಎಚ್ ಡಿ ಕುಮಾರಸ್ವಾಮಿ, ತಮ್ಮ ಮೌನವೇ ಉತ್ತರ ಎಂದಿದ್ದಾರೆ.

ಈ ಕುರಿತು ತಾವು ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ. ಸಿದ್ದರಾಮಯ್ಯ ಅವರು ಯಾ ಅರ್ಥದಲ್ಲಿ ಈ ಮಾತನ್ನು ಹೇಳಿದರು ಎಂಬುದು ನನಗೆ ಗೊತ್ತಿಲ್ಲ. ಅವರ ಪ್ರಕಾರ ರಾಹು, ಕೇತು, ಶನಿ ಎಂದರೆ ಯಾರು ಎಂಬುದು ತಿಳಿದಿಲ್ಲ. ಅವರು ಬೇರೆ ಯಾವುದೋ ಅರ್ಥದಲ್ಲಿ ಹೇಳಿದ್ದಿರಬಹುದು. ಆದ್ದರಿಂದ ಈ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಅವರು ಹೇಳಿದರು.

ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ 4 ಸೂತ್ರಗಳು!ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ 4 ಸೂತ್ರಗಳು!

ಬೆಂಗಳೂರಿನಲ್ಲಿ ವಿಂಟೇಜ್ ಕಾರ್ rally ಯಲ್ಲಿ ಭಾಗವಹಿಸಿದ್ದ ಅವರು, ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಅರ್ಥ ಬೇರೆಯೇ ಇರಬಹುದು!

ಅರ್ಥ ಬೇರೆಯೇ ಇರಬಹುದು!

ಸಿದ್ದರಾಮಯ್ಯ ಅವರ ಮಾತಿನ ಅರ್ಥ ಬೇರೆಯೇ ಇರಬಹುದು. ರಾಹು, ಕೇತು ಮತ್ತು ಶನಿ ಎಂಬ ಪದವನ್ನು ಯಾವುದಕ್ಕೆ ಉಪಮೇಯವಾಗಿ ಬಳಸಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅದಕ್ಕೆ ನೂರಾರು ಅರ್ಥವಿರಬಹುದು. ಆದ್ದರಿಂದ ಅದರ ಹಿನ್ನೆಲೆ ತಿಳಿಯದೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದೂ ಸರಿಯಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಸಿದ್ದರಾಮಯ್ಯ ಅವರ ಮಾತಿನ ಹಿನ್ನೆಲೆ ಗೊತ್ತಿಲ್ಲ. ಆದರೆ ಅವರ ಮಾತನ್ನು ಯಾಕೆ ನೀವು ವಿವಾದವೆಬಂತೆ ನೋಡುತ್ತಿದ್ದೀರಿ? ಎಂದು ಎಚ್ಡಿಕೆ ಅವರು ಪತ್ರಕರ್ತರ ಮೇಲೆ ಹರಿಹಾಯ್ದ ಘಟನೆಯೂ ನಡೆಯಿತು.

ಜ್ಯೋತಿಷ್ಯ: ಗ್ರಹಗಳು ನಿಮ್ಮ ಜೀವನದಲ್ಲಿ ಒಳಿತು-ಕೆಡುಕು ಮಾಡೋದು ಹೇಗೆ? ಜ್ಯೋತಿಷ್ಯ: ಗ್ರಹಗಳು ನಿಮ್ಮ ಜೀವನದಲ್ಲಿ ಒಳಿತು-ಕೆಡುಕು ಮಾಡೋದು ಹೇಗೆ?

ಸಿದ್ದರಾಮಯ್ಯ ಹಾಗೆ ಹೇಳಿದ್ದೇಕೆ?

ಸಿದ್ದರಾಮಯ್ಯ ಹಾಗೆ ಹೇಳಿದ್ದೇಕೆ?

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿ ದೇವೇಗೌಡರು ಪ್ರಬಲ ಅಭ್ಯರ್ಥಿ ಎಂಬುದು ಸಿದ್ದರಾಮಯ್ಯ ಅವರಿಗೂ ಗೊತ್ತಿತ್ತು. ಆದರೆ ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ, 'ತಮ್ಮ ಜನಪರ ಕೆಲಸಗಳು' ತಮಗೆ ಗೆಲುವು ತಂದೇ ತರುತ್ತದೆ ಎಂಬ ಅತಿಯಾದ ವಿಶ್ವಾಸವಿತ್ತು. ಆದರೆ ಚಾಮುಂಡೇಶ್ವರಿಯಲ್ಲಿ ನಡೆದಿದ್ದೇ ಬೇರೆ. ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸದೆ, ಪರೋಕ್ಷವಾಗಿ ಜೆಡಿಎಸ್ ಭ್ಯರ್ಥಿ ಜಿ ಟಿ ದೇವೇಗೌಡರನ್ನು ಬೆಂಬಲಿಸಿತು. ಅದೂ ಅಲ್ಲದೆ, ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಲ್ಲಿ ಮಗ ಯತೀಂದ್ರ ಅವರನ್ನು ಗೆಲ್ಲಿಸುವ ಧಾವಂತದಲ್ಲಿದ್ದುರಿಂದ ಚಾಮುಂಡೇಶ್ವರಿಯ ಕಡೆ ಹೆಚ್ಚು ಪ್ರಚಾರಕ್ಕೂ ಬರಲಿಲ್ಲ. ಈ ಸನ್ನಿವೇಶವನ್ನು ಚೆನ್ನಾಗಿ ಉಪಯೋಗಿಸಿಕೊಂಡವರು ಜಿಟಿಡಿ. ಆದ್ದರಿಂದ ಬಿಜೆಪಿ, ಜೆಡಿಎಸ್ ಜೊತೆಗೆ ಕಾಂಗ್ರೆಸ್ಸಿನಲ್ಲೇ ಸಿದ್ದರಾಮಯ್ಯ ಅವರನ್ನು ಕಂಡರಾಗದ ಕೆಲವರೇ ಸೇರಿ ತಮ್ಮನ್ನು ಸೋಲಿಸಿದರು ಎಂಬ ಅರ್ಥದಲ್ಲಿ ಸಿದ್ದರಾಮಯ್ಯ ಹಾಗೆ ಹೇಳಿದರೇ?

ಸಂಪುಟಕ್ಕೆ ಮೇಜರ್ ಸರ್ಜರಿ? ಪರಮೇಶ್ವರ್, ಡಿಕೆಶಿ ಖಾತೆ ಬದಲಾವಣೆ?ಸಂಪುಟಕ್ಕೆ ಮೇಜರ್ ಸರ್ಜರಿ? ಪರಮೇಶ್ವರ್, ಡಿಕೆಶಿ ಖಾತೆ ಬದಲಾವಣೆ?

ಮೈತ್ರಿ ಸರ್ಕಾರದ ಟ್ರಬಲ್ ಶೂಟರ್!

ಮೈತ್ರಿ ಸರ್ಕಾರದ ಟ್ರಬಲ್ ಶೂಟರ್!

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಸಿದ್ದರಾಮಯ್ಯ ಅವರ ವರ್ಚಸ್ಸು ಕಡಿಮೆಯಾಗಿದೆಯಾ? ಖಂಡಿತ ಇಲ್ಲ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. 'ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ನಾನೇ. ಅದಕ್ಕೆಂದೇ ನನ್ನನ್ನು ಸಮನ್ವಯ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ' ಎಂದು ಭಾನುವಾರವಷ್ಟೇ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಇಂದಿಗೂ ಕರ್ನಾಟಕದ ಮೈತ್ರಿ ಸರ್ಕಾರದಲ್ಲಿ ಕೊಂಚವೇ ತಲ್ಲಣವಾದರೂ ಹೈಕಮಾಂಡ್ ಮೊದಲು ಮಾತುಕತೆ ನಡೆಸುವುದು ಸಿದ್ದರಾಮಯ್ಯ ಅವರೊಂದಿಗೇ. ಪಕ್ಷದ ನಿಷ್ಠಾವಂತ ನಾಯಕರು ಎಂಬ ಕಾರಣಕ್ಕಾಗಿಯೇ ಲೋಕಸಭಾ ಚುನಾವಣೆಯ ಜವಾಬ್ದಾರಿಯನ್ನೂ ಅವರಿಗೆ ನೀಡಲಾಗಿದೆ. ಆದರೆ ಸಿದ್ದರಾಮಯ್ಯ ಅವರ ಕೆಲವು ಹೇಳಿಕೆಗಳು ಅವರಿಗೆ ಸಮ್ಮಿಶ್ರ ಸರ್ಕಾರದ ಮೇಲೆ ತೃಪ್ತಿ ಇದ್ದಂತಿಲ್ಲ ಎಂಬುದನ್ನು ಸೂಚನೆಯನ್ನು ಕೊಡುತ್ತಿರುವುದಂತೂ ಸುಳ್ಳಲ್ಲ.

ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ನಾನೇ : ಸಿದ್ದರಾಮಯ್ಯಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ನಾನೇ : ಸಿದ್ದರಾಮಯ್ಯ

ಸಂಚು ನಡೆದಿತ್ತು!

ಸಂಚು ನಡೆದಿತ್ತು!

ನನ್ನನ್ನು ಸೋಲಿಸಲು ಚಾಮುಂಡೇಶ್ವರಿಯಲ್ಲಿ ಸಂಚುನಡೆದಿತ್ತು. ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುವುದನ್ನು ನೋಡಲು ಬಯಸದವರು ಈ ರೀತಿ ಮಾಡಿದ್ದಾರೆ. ದೇವರಾಜ್ ಅರಸ್ ಅವರ ನಂತರ ಕರ್ನಾಟಕದಲ್ಲಿ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಮುಖ್ಯಮಂತ್ರಿ ನಾನು. ಅಕಸ್ಮಾತ್ ನಾನು ವರುಣ ಕ್ಷೇತ್ರದಲ್ಲಿ ನಿಂತಿದ್ದರೆ ಖಂಡಿತ ಇವರಿಗೆ ನನ್ನನ್ನು ಸೋಲಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದರು.

English summary
Karnataka chief minister HD Kumaraswamy told, he is ot ready to respond for former chief minister Siddaramaiah's statement, in which he quoted, Rahu, Ketu and Shani defeated him in Chamundeshwari constituency in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X