ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ 'ದಂಗೆ' ಹೇಳಿಕೆ ವಿರುದ್ಧ ದಂಗೆಯೆದ್ದ ಟ್ವಿಟ್ಟಿಗರು

|
Google Oneindia Kannada News

Recommended Video

ಎಚ್ ಡಿ ಕುಮಾರಸ್ವಾಮಿ ದಂಗೆ ಹೇಳಿಕೆಗೆ ದಂಗೆಯೆದ್ದ ಟ್ವಿಟ್ಟಿಗರು | Oneindia Kannada

ಬೆಂಗಳೂರು, ಸೆಪ್ಟೆಂಬರ್ 21: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ 'ದಂಗೆ' ಹೇಳಿಕೆ ಅವರಿಗೇ ಮುಳುವಾಗುವ ಲಕ್ಷಣಗಳು ಕಂಡುಬರುತ್ತಿವೆ. ಅವರ ಹೇಳಿಕೆಯನ್ನು ರಾಜ್ಯದಾದ್ಯಂತ ಬಿಜೆಪಿ ಬೆಂಬಲಿಗರು ಮಾತ್ರವಲ್ಲದೆ, ಹಲವರು ವಿರೋಧಿಸಿದ್ದಾರೆ.

ಮುಖ್ಯಮಂತ್ರಿಯಂಥ ಉನ್ನತ ಹುದ್ದೆಯಲ್ಲಿರುವವರು ನೀಡುವ ಹೇಳಿಕೆಯಲ್ಲ ಇದು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಆ ಹುದ್ದೆಗಿರುವ ಘನತೆಯನ್ನು ಕಾಪಾಡುವುದು ಮುಖ್ಯಮಂತ್ರಿಗಳ ಕರ್ತವ್ಯ ಎಂಬ ಅನಿಸಿಕೆಯೂ ಹಲವರದು.

ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡುತ್ತೇನೆ: ಎಚ್‌ಡಿಕೆಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡುತ್ತೇನೆ: ಎಚ್‌ಡಿಕೆ

ಒಟ್ಟಿನಲ್ಲಿ ಮಾತಿನ ಓಘದ ನಡುವಲ್ಲಿ ಅರಿವಿದ್ದೋ, ಇಲ್ಲದೆಯೋ ಮುಖ್ಯಮಂತ್ರಿಗಳ ಬಾಯಲ್ಲಿ ಬಂದ ಈ 'ದಂಗೆ' ಹೇಳಿಕೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ದಂಗೆ ಎದ್ದಿದ್ದಾರೆ.

ಬಿಎಸ್‌ವೈ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ, ಶಾಸಕರೊಂದಿಗೆ ಜಟಾಪಟಿಬಿಎಸ್‌ವೈ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ, ಶಾಸಕರೊಂದಿಗೆ ಜಟಾಪಟಿ

ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, 'ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿಯವರು ಇದೇ ರೀತಿ ತೊಂದರೆ ನೀಡುತ್ತಲೇ ಇದ್ದರೆ, ಬಿಜೆಪಿ ವಿರುದ್ಧ ದಂಗೆ ಏಳಲು ನಾನೇ ಜನರಿಗೆ ಹೇಳುತ್ತೇನೆ' ಎಂಬ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯ ಕೆಲವೇ ಕ್ಷಣಗಳ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಮನೆಯೆದುರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕೆಲ ಕಾಲ ಗಲಭೆ ಏರ್ಪಟ್ಟಿತ್ತು.

ಇಡೀ ದೇಶದಲ್ಲೂ ಅಸ್ತಿತ್ವದಲ್ಲಿರುವ ನಮಗೆ ಎಷ್ಟಿರಬೇಡ?!

3 ಜಿಲ್ಲೆಯ ಪಕ್ಷ ನಿಮಗೇ ಇಷ್ಟು ಇರಬೇಕಾದರೆ, ಇನ್ನು ಇಡೀ ದೇಶದಲ್ಲಿ ಇರೋ ನಮಗೆ ಎಷ್ಟಿರಬೇಡ..? ಆಕಸ್ಮಿಕ ಮುಖ್ಯಮಂತ್ರಿಯಾಗಿದ್ದೀರಾ. ಗೂಂಡಾ ವರ್ತನೆ ಬಿಟ್ಟು ಮುಖ್ಯಮಂತ್ರಿ ಕೆಲಸ ಮಾಡಿ ಎಂದು ಓಂ ಪ್ರಕಾಶ್ ಜಿ ಎಂಬುವವರು ಟ್ವೀಟ್ ಮಾಡಿದ್ದಾರೆ.

Array

ಕರ್ನಾಟಕದ ಜನ ನಿಮ್ಮ ತಾಳಕ್ಕೆ ಕುಣಿವ ಬೊಂಬೆಯಲ್ಲ!

"ಕರ್ನಾಟಕದ ಜನತೆ ಬೊಂಬೆಯಲ್ಲ, ನಿಮ್ಮ ತಾಳಕ್ಕೆ ತಕ್ಕಂತೆ ಕುಣಿಯೋದಕ್ಕೆ. ನೀವು ದಂಗೆ ಏಳಿ ಎಂದ ತಕ್ಷಣ ಯಾರೂ ದಂಗೆ ಏಳೋಣ. ನಿಮ್ಮ ಮಾತುಗಳನ್ನು ಹಿಂತೆಗೆದುಕೊಳ್ಳಿ" ಎಂದು ತೇಜಸ್ ಅರಸ್ ಟ್ವೀಟ್ ಮಾಡಿದ್ದಾರೆ.

ಯಡಿಯೂರಪ್ಪನವರೇ ಅಧಿಕಾರ ನನ್ನ ಬಳಿ ಇದೆ: ಕುಮಾರಸ್ವಾಮಿ ನೇರ ಎಚ್ಚರಿಕೆಯಡಿಯೂರಪ್ಪನವರೇ ಅಧಿಕಾರ ನನ್ನ ಬಳಿ ಇದೆ: ಕುಮಾರಸ್ವಾಮಿ ನೇರ ಎಚ್ಚರಿಕೆ

ಅವರಿಗೇನು ಎರಡು ನಾಲಿಗೆ ಇದೆಯೇ?

ಕುಮಾರಸ್ವಾಮಿ ಅವರನ್ನು ಜನ ಆರಿಸಿದ್ದಲ್ಲ. ಕಾಂಗ್ರೆಸ್ ಅವರನ್ನು ಮನವಿ ಮಾಡಿಕೊಂಡಿದ್ದಕ್ಕೆ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದಾರೆ. 'ಮುಖ್ಯಮಂತ್ರಿ ಹುದ್ದೆ ಕೊಡುತ್ತೀನಿ ಅಂದರೂ ನಾನು ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲಾರೆ ಎಂದಿದ್ದವರು ಅವರು. ಈಗ ಅವರೇ ಜನರನ್ನು ದಂಗೆಗೆ ಕರೆಯುತ್ತಿದ್ದಾರೆ. ಅವರಿಗೇನು ಎರಡು ನಾಲಿಗೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ ಸಂತೋಷ್ ಆರ್.

ದಂಗೆ ಅಂದ್ರೆ ಏನು?

ದಂಗೆ = ಹೋರಾಟ! ಅಂದ್ರಲ್ಲಾ ಅದು ಹೇಗೆ ಅಂತ ಸ್ವಲ್ಪ ಹೇಳ್ತೀರಾ ಕುಮಾರಸ್ವಾಮಿಯವರೇ!!?

ಕನ್ನಡ ಭಾಷೆಗೆ ಅದರದೇ ಆದ ಗತ್ತು, ಗಾಂಭೀರ್ಯತೆ, ಮರ್ಯಾದೆ ಇದೆ. ದಯವಿಟ್ಟು ನಿಮ್ಮ ನೀಚ-ಹೇಯ ರಾಜಕೀಯಕ್ಕೆ ಕನ್ನಡವನ್ನು ಬಲಿ ಕೊಡಬೇಡಿ. ಮೊದಲು ಕ್ಷಮೆ ಕೇಳಿ ಎಂದಿದ್ದಾರೆ ಶಶಾಂಖ ಶಿವತಾಯ

English summary
After Karnataka CM HD Kumarswamy's statement in which he calls for a revolt against BJP in Karnataka, many twitterians condemn him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X