ಜೆಡಿಎಸ್ ಕಚೇರಿ ಉದ್ಘಾಟನೆಗೆ ಅಡ್ವಾಣಿಗೆ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 12: ಜಾತ್ಯಾತೀತ ಜನತಾ ದಳ (ಜೆಡಿಎಸ್) ಕಚೇರಿ ಉದ್ಘಾಟನೆಗೆ ಸಿದ್ಧವಾಗಿದೆ. ಉದ್ಘಾಟನಾ ಸಮಾರಂಭ ನವೆಂಬರ್ ನಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನು ಆಹ್ವಾನಿಸಲಾಗುವುದು ಎಂದು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ ಅವರು ಶುಕ್ರವಾರ ತಿಳಿಸಿದರು.

ಬೆಂಗಳೂರಿನ ಪದ್ಮನಾಭನಗರ ಕಚೇರಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನ ಹೊಸ ಕಟ್ಟಡಕ್ಕೆ 'ಜಯಪ್ರಕಾಶ್ ನಾರಾಯಣ ಭವನ' ಎಂದು ಹೆಸರಿಡಲಾಗುವುದು. [ಜೆಡಿಎಸ್ ಗೆ ಕಚೇರಿ ಖಾಲಿ ಮಾಡಲು ಸುಪ್ರೀಂ ಆದೇಶ]

HD Deve Gowda to invite LK Adani for JDS office inauguration

ಉದ್ಘಾಟನಾ ಸಮಾರಂಭವನ್ನು ಅರಮನೆ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಸಮಾರಂಭಕ್ಕೆ ಪಕ್ಷಭೇಧವಾಗಿ ಎಲ್ಲರನ್ನೂ ಆಹ್ವಾನಿಸಲಾಗುವುದು ಎಂದರು.[ಒಕ್ಕಲಿಗರ ಭವನದಲ್ಲಿ ಜೆಡಿಎಸ್ ತಾತ್ಕಾಲಿಕ ಕಚೇರಿ]

ಕಾರ್ಯಕ್ರಮಕ್ಕೆ ವಿಶೇಷವಾಗಿ ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿ, ಎ.ಕೆ.ಸುಬ್ಬಯ್ಯ, ಸೇರಿದಂತೆ ಇತರ ಹಿರಿಯರನ್ನ ಆಹ್ವಾನಿಸಲಾಗುತ್ತದೆ. ಇನ್ನೂ ಅತಿಥಿಯ ಪೂರ್ಣ ಪಟ್ಟಿ ಸಿದ್ಧವಾಗಿಲ್ಲ. ಸದ್ಯದಲ್ಲೇ ಕಾರ್ಯಕ್ರಮದ ರೂಪುರೇಷೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.[ಕಾಂಗ್ರೆಸ್ ಪಕ್ಷಕ್ಕೆ ಕಚೇರಿ ಬೀಗ ನೀಡಿದ ದೇವೆಗೌಡರು]

ಕಟ್ಟಡದ ವಿವಾದವೇನು : ರೇಸ್‌ಕೋರ್ಟ್‌ ರಸ್ತೆಯ ಕಚೇರಿ ಇರುವ ನಿವೇಶನವನ್ನು ರಂಗಸ್ವಾಮಿ ಎಂಬುವರು 1949ರಲ್ಲಿ ಬೆಂಗಳೂರು ಸಿಟಿ ಕಾಂಗ್ರೆಸ್ ಸಮಿತಿಗೆ ದಾನ ಮಾಡಿದ್ದರು. ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯು ಐವತ್ತರ ದಶಕದಲ್ಲಿ ಈಗಿನ ಕಲ್ಲು ಕಟ್ಟಡವನ್ನು ನಿರ್ಮಿಸಿ ಕಾಂಗ್ರೆಸ್ ಭವನ ಎಂದು ನಾಮಕರಣ ಮಾಡಿತ್ತು. [ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿಗೆ ಜಾಗ ಸಿಕ್ಕಿತು]

ಕಾಂಗ್ರೆಸ್ ಪಕ್ಷ ವಿಭಜನೆಯಾದ ನಂತರ ಈ ಕಟ್ಟಡವು ಸಂಸ್ಥಾ ಕಾಂಗ್ರೆಸ್, ಜನತಾ ಪಾರ್ಟಿ ಮುಂತಾಗಿ ಕೈ ಬದಲಾವಣೆಯಾಗಿ ಜೆಡಿಎಸ್ ಕೈ ಸೇರಿತು. ಜನತಾ ಪಕ್ಷವು ಈ ಕಟ್ಟಡದ ಖಾತೆಯನ್ನು ತನ್ನ ಹೆಸರಿಗೆ ಬದಲಾಯಿಸಿಕೊಳ್ಳುವ ಪ್ರಯತ್ನ ನಡೆಸಿದಾಗ ಕಾಂಗ್ರೆಸ್ 1982ರಲ್ಲಿ ಕೋರ್ಟ್ ಮೆಟ್ಟಿಲೇರಿತ್ತು. ಕಾನೂನು ಸಮರ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಕಾಂಗ್ರೆಸ್ ಪರ ತೀರ್ಪು ಬಂದ ಮೇಲೆ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಕಚೇರಿ ಬೀಗವನ್ನು ಕಾಂಗ್ರೆಸ್ಸಿಗೆ ಹಸ್ತಾಂತರಿಸಿದ್ದರು.

ಜೆಡಿಎಸ್ ಗೆ ಕಚೇರಿಗಾಗಿ ಸ್ಥಳ ಮಂಜೂರು ಮಾಡಲು ಬಿಬಿಎಂಪಿ ಮುಂದಾಯಿತು. ಶೇಷಾದ್ರಿಪುರಂನಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿ ಮುಂಭಾಗದಲ್ಲಿರುವ ಕೃಷ್ಣಾ ಪ್ಲೋರ್ ಮಿಲ್‌ನ 2 ಎಕರೆ ಜಾಗವನ್ನು ಕಚೇರಿ ನಿರ್ಮಾಣಕ್ಕೆ ಬಿಬಿಎಂಪಿ ಮಂಜೂರು ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former PM HD Deve Gowda today said JDS will invite Senior BJP leader LK Adani for JDS office inauguration. New office will be named after reformist Jayaprakash Narayan.
Please Wait while comments are loading...