ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ತಿ ಕಸಿದು ತಂದೆಯನ್ನೇ ಬೀದಿಗೆ ತಳ್ಳಿದ್ದ ಮಕ್ಕಳಿಗೆ ಹೈಕೋರ್ಟ್ ಶಾಸ್ತಿ

|
Google Oneindia Kannada News

ಬೆಂಗಳೂರು, ನವೆಂಬರ್ 10: ಆಸ್ತಿ ಕಸಿದು ಬೀದಿಗೆ ತಳ್ಳಿದ್ದ ಮಕ್ಕಳಿಗೆ ಹೈಕೋರ್ಟ್ ಸರಿಯಾಗಿ ತರಾಟೆ ತೆಗೆದುಕೊಂಡಿತು. ಅಷ್ಟೇ ಅಲ್ಲದೆ ವಾರದಲ್ಲೇ ತಂದೆಗೆ ಆಸ್ತಿ ವಾಪಸ್ ಕೊಡಿಸುವಂತೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹೈಕೋರ್ಟ್ ತಾಕೀತು ಮಾಡಿತು.

ತಮ್ಮ ಆಸ್ತಿ ಮಗನ ವಶದಲ್ಲಿದೆ ಅದನ್ನು ಹಿಂದಿರುಗಿಸುವಂತೆ ಮಾಡಿ ಎಂದು 71 ವರ್ಷದ ಪಟೇಲ್ ಶಿವಲಿಂಗೇಗೌಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವೀರಪ್ಪ ಅವರಿದ್ದ ಪೀಠ, ಅರ್ಜಿದಾರರ ಮಕ್ಕಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಪಾಲಕರನ್ನು ವೃದ್ಧಾಶ್ರಮಕ್ಕೆ ಕಳಿಸಿದ ಪುತ್ರಿ: ಹುಬ್ಬಳ್ಳಿ ಬಸ್ಟಾಪಿನಲ್ಲಿ ದಂಪತಿಗಳ ಪರದಾಟ ಪಾಲಕರನ್ನು ವೃದ್ಧಾಶ್ರಮಕ್ಕೆ ಕಳಿಸಿದ ಪುತ್ರಿ: ಹುಬ್ಬಳ್ಳಿ ಬಸ್ಟಾಪಿನಲ್ಲಿ ದಂಪತಿಗಳ ಪರದಾಟ

ಅರ್ಜಿದಾರ ತಂದೆಯ ದುಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು ಶಿವಲಿಂಗೇಗೌಡ ಸ್ವಯಾರ್ಜಿತ ಆಸ್ತಿ ಅನುಭವಿಸಲು ಸಂತ್ರಸ್ತರು ಅವರ ಜೀವಿತಾವಧಿಯಲ್ಲಿ ಯಾರೂ ಈ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ ಎಂಉ ಉಪವಿಭಾಗಾಧಿಕಾರಿ 2017ರ ಸೆಪ್ಟೆಂಬರ್ 14ರಂದು ಹೊರಡಿಸಿದ ಆದೇಶವನ್ನು ಒಂದು ವಾರದಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಎಸ್‌ಪಿಗೆ ತಾಕೀತು ಮಾಡಿದರು.

HC slams children who thrown father into street

ಧಾರವಾಡ: ವೃದ್ಧ ಅಪ್ಪನನ್ನು ರಸ್ತೆಯಲ್ಲಿ ಬಿಟ್ಟು ಹೋದ ನಿರ್ದಯಿ ಮಗ ಧಾರವಾಡ: ವೃದ್ಧ ಅಪ್ಪನನ್ನು ರಸ್ತೆಯಲ್ಲಿ ಬಿಟ್ಟು ಹೋದ ನಿರ್ದಯಿ ಮಗ

ಉಪ ವಿಭಾಗಾಧಿಕಾರಿ ಆದೇಶವನ್ನು ಇಲ್ಲಿಯವರೆಗೆ ಕರ್ತವ್ಯಲೋಪ ಎಸಗಿದ ಕೆ.ಎಂ. ದೊಡ್ಡಿ ಠಾಣೆಯ ಪೊಲೀಸರ ವಿರುದ್ಧ ಶಿಸ್ತುಕ್ರಮ ಜರುಗಿಸಿ ವರದಿ ಸಲ್ಲಿಸುವಂತೆಯೂ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದರು.

English summary
High court has slammed children who thrown their father into street after engulfing the property in Mandya district. The court has also instructed to district police to ensure the old man his property back from the children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X