ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆ.24ರೊಳಗೆ ಗುಂಡಿ ಮುಕ್ತ ಬೆಂಗಳೂರು: ಹೈಕೋರ್ಟ್ ಡೆಡ್ ಲೈನ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ನಗರದಲ್ಲಿರುವ ರಸ್ತೆಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲು ಹೈಕೋರ್ಟ್ ಬಿಬಿಎಂಪಿಗೆ ಮೂರು ದಿನಗಳ ಗಡುವು ನೀಡಿದೆ.

ಸೋಮವಾರ(ಸೆ.24)ರೊಳಗೆ ಒಂದೇ ಒಂದು ರಸ್ತೆಗುಂಡಿ ಕಾಣಿಸಬಾರದು ಎಂದು ಸಿಜೆ ದಿನೇಶ್ ಮಹೇಶ್ವರಿ ತಾಕೀತು ಮಾಡಿದ್ದಾರೆ, ಬುಧವಾರ ಸಂಜೆಯಿಂದ ಇಲ್ಲಿಯವರೆಗೆ 899 ಗುಂಡಿಗಳನ್ನು ಮುಚ್ಚಲಾಗಿದೆ, ಇನ್ನೂ 2,172 ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.

ರಸ್ತೆಗುಂಡಿಗಳ ಕುರಿತಂತೆ ಬುಧವಾರ ನಡೆದಿದ್ದ ವಿಚಾರಣೆಯಲ್ಲಿ ರಸ್ತೆಗುಂಡಿಗಳ ಬಗ್ಗೆ ಮೆಷರ್ ಮೆಂಟ್ ಪುಸ್ತಕ ಸಲ್ಲಿಸಲು ಒಂದು ದಿನ ಕಾಲಾವಕಾಶ ನೀಡುವಂತೆ ಬಿಬಿಎಂಪಿ ಪರ ವಕೀಲರು ಮಾಡಿದ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿತ್ತು. ಅಷ್ಟೇ ಅಲ್ಲದೆ ಒಂದೇ ದಿನದಲ್ಲಿ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚುವಂತೆ ಸೂಚಿಸಿತ್ತು.

ರಸ್ತೆ ಗುಂಡಿಗೆ ಶಾಶ್ವತ ಪರಿಹಾರ: ಬಿಬಿಎಂಪಿಗೆ ಸಿಜೆ ಖಡಕ್ ಆದೇಶ ರಸ್ತೆ ಗುಂಡಿಗೆ ಶಾಶ್ವತ ಪರಿಹಾರ: ಬಿಬಿಎಂಪಿಗೆ ಸಿಜೆ ಖಡಕ್ ಆದೇಶ

ರಸ್ತೆಯಲ್ಲಿ ಗುಂಡಿಗಳು ಉಂಟಾದರೆ, ಅದಕ್ಕೆ ಸಂಬಂಧಪಟ್ಟ ಇಂಜಿನಿಯರ್ ಅಥವಾ ಗುತ್ತಿಗೆದಾರನ ಹೆಸರಿಡಬೇಕು ಎಂದು ಸಿಜೆ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು ಸ್ವಚ್ಛಗೊಳ್ಳಲೇಬೇಕು. ಫ್ಲೆಕ್ಸ್ ನಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯ, ರಸ್ತೆಗುಂಡಿ ಮುಚ್ಚುವುದರೊಂದಿಗೆ ಮುಗಿಯಬೇಕು. ನಗರದ ಯಾವೊಂದು ರಸ್ತೆಯಲ್ಲೂ ಒಂದೇ ಒಂದು ಗುಂಡಿಯೂ ಕಾಣಸಿಗಬಾರದು ಎಂದು ತಿಳಿಸಿದೆ.

 ಅಂತೂ ಇಂತು ಬಿಬಿಎಂಪಿಗೆ ಬುದ್ಧಿ ಬಂತು

ಅಂತೂ ಇಂತು ಬಿಬಿಎಂಪಿಗೆ ಬುದ್ಧಿ ಬಂತು

ಇಷ್ಟು ವರ್ಷಗಳಲ್ಲಿ ಬಾರದ ಬುದ್ಧಿ ಇದೀಗ ಬಿಬಿಎಂಪಿಗೆ ಬಂದಿದೆ. ಎಷ್ಟೇ ಅಪಘಾತ ಸಂಭವಿಸಿದರೂ ಬಿಬಿಎಂಪಿ ತನ್ನದೇನೂ ತಪ್ಪಿಲ್ಲ ಎನ್ನುವ ರೀತಿ ಹಾರಿಕೆ ಉತ್ತರಗಳನ್ನು ನೀಡುತ್ತಿತ್ತು,ಅಪಘಾತವಾದ ಸ್ಥಳದಲ್ಲಿ ಮಾತ್ರ ಗುಂಡಿಗಳನ್ನು ಮುಚ್ಚಿ ಸುಮ್ಮನಾಗುತ್ತಿತ್ತು. ಇದೀಗ ಹೈಕೋರ್ಟ್ ಚಾಟಿ ಬೀಸಿರುವುದರಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಗುಂಡಿಗಳನ್ನು ಮುಚ್ಚಲು ಮುಂದಾಗಿದೆ.

ತ್ವರಿತಗತಿಯಲ್ಲಿ ರಸ್ತೆಗುಂಡಿ ರಿಪೇರಿಯಾಗ್ತಿದೆ, ಸಹಕರಿಸಿ: ಪರಮೇಶ್ವರ್ ತ್ವರಿತಗತಿಯಲ್ಲಿ ರಸ್ತೆಗುಂಡಿ ರಿಪೇರಿಯಾಗ್ತಿದೆ, ಸಹಕರಿಸಿ: ಪರಮೇಶ್ವರ್

ಗುಂಡಿ ಮುಚ್ಚುವುದರಿಂದ ಲಕ್ಷಾಂತರ ಮಂದಿ ಪ್ರಾಣ ಉಳಿಯುತ್ತದೆ

ಗುಂಡಿ ಮುಚ್ಚುವುದರಿಂದ ಲಕ್ಷಾಂತರ ಮಂದಿ ಪ್ರಾಣ ಉಳಿಯುತ್ತದೆ

ಬೆಂಗಳೂರಿನ ಪ್ರತಿ ರಸ್ತೆಯಲ್ಲೂ ಒಂದು ಕಿ.ಮೀ ವ್ಯಾಪ್ತಿಯೊಳಗೆ ಸಾವಿರಾರು ಗುಂಡಿಗಳನ್ನು ಕಾಣಬಹುದಾಗಿದೆ, ಇದೀಗ ಹೈಕೋರ್ಟ್ ನಿರ್ದೇಶನದ ಮೇರೆಗೆ ಬಿಬಿಎಂಪಿಯು ಗುಂಡಿ ಮುಚ್ಚುವ ಕೆಲಸವನ್ನು ಮಾಡುತ್ತಿದ್ದು, ಇದರಿಂದ ಅಪಘಾತಗಳು ತಪ್ಪಿ ಲಕ್ಷಾಂತರ ಮಂದಿ ಪ್ರಾಣ ಉಳಿಸಬಹುದಾಗಿದೆ.

ಬೆಂಗಳೂರು ರಸ್ತೆಗಳು ಬಾಯಿ ತೆರೆದಿವೆ: ಸಾವಿರಾರು ರಸ್ತೆಗುಂಡಿ ಬಾಕಿ ಇವೆ ಬೆಂಗಳೂರು ರಸ್ತೆಗಳು ಬಾಯಿ ತೆರೆದಿವೆ: ಸಾವಿರಾರು ರಸ್ತೆಗುಂಡಿ ಬಾಕಿ ಇವೆ

ರಾತ್ರೋರಾತ್ರಿ 899 ಗುಂಡಿಗಳನ್ನು ಮುಚ್ಚಿರುವ ಬಿಬಿಎಂಪಿ

ರಾತ್ರೋರಾತ್ರಿ 899 ಗುಂಡಿಗಳನ್ನು ಮುಚ್ಚಿರುವ ಬಿಬಿಎಂಪಿ

ಹೈಕೋರ್ಟ್ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ನಗರದಲ್ಲಿ 899 ಗುಂಡಿಗಳನ್ನು ಬಿಬಿಎಂಪಿ ಮುಚ್ಚಿದೆ. ಇನ್ನೂ 2,172 ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಬಿಬಿಎಂಪಿ ಪರ ವಕೀಲರು ತಿಳಿಸಿದ್ದಾರೆ, ಅಷ್ಟೇ ಅಲ್ಲದೆ ರಾತ್ರಿಯೆಲ್ಲಾ ಗುಂಡಿ ಮುಚ್ಚುವ ಕೆಲಸವನ್ನು ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಸೋಮವಾರದವರೆಗೆ ಗಡುವು

ಸೋಮವಾರದವರೆಗೆ ಗಡುವು

ಬೆಂಗಳೂರಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 24ರೊಳಗೆ ಗುಂಡಿ ಮುಚ್ಚಲು ಗಡುವು ನೀಡಿದೆ. ಸೋಮವಾರದ ನಂತರ ಒಂದೇ ಒಂದು ಗುಂಡಿ ಕಾಣಿಸಿದರೂ ಬಿಬಿಎಂಪಿ ಎಂಜಿನಿಯರ್ ಗಳು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.

English summary
High court has set BBMP as three days deadline to fill more than two thousand potholes in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X