ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ಲೆಕ್ಸ್‌ ಸಮಸ್ಯೆ, ಆ.18ರೊಳಗೆ ಬಗೆಹರಿಸಲು ಹೈಕೋರ್ಟ್‌ ಆದೇಶ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 14: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಹೋರ್ಡಿಂಗ್ಸ್‌ಗಳ ತೆರವಿಗೆ ಸಂಬಂಧಿಸಿದಂತೆ ವರದಿ ನೀಡಲು ಹೈಕೋರ್ಟ್‌ ಬಿಬಿಎಂಪಿಗೆ ಸೂಚನೆ ನೀಡಿದ್ದು, ಆಗಸ್ಟ್ 18ರ ಗಡುವು ನೀಡಿದೆ.

ನಗರದಲ್ಲಿರುವ ಫ್ಲೆಕ್ಸ್‌, ಹೋರ್ಡಿಂಗ್ಸ್‌ ತೆರವು ಕೋರಿ ಸಲ್ಲಿಸಿದ್ದ ಪಿಐಎಲ್‌ನ ವಿಚಾರಣೆಯನ್ನು ಪುನಃ ಕೈಗೆತ್ತಿಕೊಂಡ ಹೈಕೋರ್ಟ್‌ ವಿಭಾಗೀಯ ಪೀಠ ವಿಚಾರಣೆ ಮಂಗಳವಾರ ನಡೆಸಿತು. ನಿಮಗೆ ಕೋರ್ಟ್‌ ಆದೇಶದ ಬಗ್ಗೆ ಅರಿವಿದೆಯಾ, ಕೋರ್ಟ್‌ಗೆ ಸ್ಪಷ್ಟವಾದ ಅಂಕಿ ಅಂಶಗಳ ಮಾಹಿತಿ ನೀಡಿ ಹೈಕೋರ್ಟ್‌ ಆದೇಶದ ನಂತರ ಫ್ಲೆಕ್ಸ್‌ ತೆರವಿಗೆ ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಹೇಳುತ್ತೀರ ಆದಕ್ಕೂ ಮೊದಲು ಅಧಿಕಾರಿಗಳು ಏನು ಮಾಡುತ್ತಿದ್ದರು, ಇಲ್ಲಿಯವರೆಗೆ ಎಷ್ಟು ಅನಧಿಕೃತ ಫ್ಲೆಕ್ಸ್‌ ತೆಗೆಸಿದ್ದೀರಿ ಎಂದು ವರದಿ ನೀಡುವಂತೆ ಆದೇಶಿಸಿದ್ದಾರೆ.

ಹೋಟೆಲ್‌, ಮಾಲ್‌ಗಳಲ್ಲೂ ಫ್ಲೆಕ್ಸ್‌ ನಿಷೇಧ: ಬಿಬಿಎಂಪಿ ಖಡಕ್‌ ನಿರ್ಧಾರ ಹೋಟೆಲ್‌, ಮಾಲ್‌ಗಳಲ್ಲೂ ಫ್ಲೆಕ್ಸ್‌ ನಿಷೇಧ: ಬಿಬಿಎಂಪಿ ಖಡಕ್‌ ನಿರ್ಧಾರ

ಬಿಬಿಎಂಪಿಯು ಜಾಹೀರಾತು ನಿಯಮಗಳ ಕುರಿತು ಡ್ರಾಫ್ಟ್‌ ಪ್ರಮಾಣಪತ್ರವನ್ನು ಸಲ್ಲಿಸಿದೆ, ಈ ಪ್ರಮಾಣಪತ್ರಕ್ಕೆ ಹೈಕೋರ್ಟ್‌ ಕೆಂಡಾಮಂಡಲವಾಗಿದೆ, ಸರ್ಕಾರದ ವಿವಿಧ ಇಲಾಖೆಗಳ ಜೊತೆ ಚರ್ಚೆ ನಡೆಸುತ್ತೇವೆ, ಜಾಹೀರಾತು ತಜ್ಞರ ಬಳಿ ಚರ್ಚೆ ನಡೆಸುತ್ತೇವೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ, ನಗರದಲ್ಲಿ ತೆರವುಗೊಳಿಸಿರುವ ಫ್ಲೆಕ್ಸ್‌, ಬ್ಯಾನರ್‌ ಸಂಖ್ಯೆಯನ್ನು ಯಾವ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೀರಿ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರಿದ್ದ ಪೀಠ ತರಾಟೆಗೆ ತೆಗೆದುಕೊಂಡಿತು.

HC set deadline to BBMP for resolve flex and banners issue

ನಿಮ್ಮ ಅಧಿಕಾರಿಗಳು ಈಗಲೂ ಕೊರ್ಟ್ ನ ಆದೇಶವನ್ನು ಅರ್ಥ ಮಾಡಿಕೊಂಡಿಲ್ಲ, ಶೀಘ್ರದಲ್ಲಿ ಅನಧಿಕೃತ ಫ್ಲೆಕ್ಸ್ ಗಳ ವಿಚಾರಣೆ ಮುಗಿಸಬೇಕು, ಆಗಷ್ಟ್ 18ರ ಒಳಗೆ ಪ್ರಕರಣದ ಕುರಿತು ಚಾರ್ಜ್ ಶೀಟ್ ನ್ನು ಕೊರ್ಟ್ ಗೆ ಸಲ್ಲಿಸುವಂತೆ ವಕೀಲರಿಗೆ ಸೂಚನೆ ನೀಡಿಲಾಯಿತು.

English summary
High court has set a deadline as August 18 to BBMP for settle down the illegal flex and banners issue in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X