ಸ್ಟೀಲ್‍ ಬ್ರಿಡ್ಜ್ ಗೆ ತಡೆ ನೀಡಲು ಹೈಕೋರ್ಟ್ ನಕಾರ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 07: ವಿವಾದಿತ ಸ್ಟೀಲ್‍ ಬ್ರಿಡ್ಜ್ ಯೋಜನೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಸುಮಾರು 1,800 ಕೋಟಿ ರು ವೆಚ್ಚದ 6 ಪಥ ಉಕ್ಕಿನ ಮೇಲ್ಸೇತುವೆ ರಸ್ತೆ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಇದನ್ನು ಪ್ರಶ್ನಿಸಿ ನಮ್ಮ ಬೆಂಗಳೂರು ಫೌಂಡೇಶನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿತ್ತು.

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ ಕಮಲ್ ಮುಖರ್ಜಿ ಹಾಗೂ ಜಸ್ಟೀಸ್ ಬೂದಿಹಾಲ್ ಆರ್ ಬಿ ಅವರಿದ್ದ ವಿಭಾಗೀಯ ಪೀಠ, ಯೋಜನೆಗೆ ತಾತ್ಕಾಲಿಕ ತಡೆಯನ್ನು ನೀಡಿದೆ. ಆದರೆ, ಅರ್ಜಿ ವಿಚಾರಣೆ ಬಳಿಕ ಯೋಜನೆ ರದ್ದುಗೊಳಿಸಬೇಕೇ? ಅಥವಾ ಮುಂದುವರೆಸಬೇಕೆ? ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.

HC refuses to stay steel elevated road project

ವಿಧಾನ ಸೌಧದಿಂದ ವಿಮಾನ ನಿಲ್ದಾಣದವರೆಗೆ ಪ್ರಯಾಣಿಸುವವರು, ಹೆಬ್ಬಾಳದವರೆಗೆ ತೀವ್ರ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿರುವ ಸಾರ್ಜನಿಕರ ಅನುಕೂಲಕ್ಕಾಗಿ ಈ ಉದ್ದೇಶಿತ ಯೋಜನೆಯನ್ನು ರೂಪಿಸಲಾಗಿದೆ. ಬಸವೇಶ್ವರ ಸರ್ಕಲ್ ನಿಂದ ಹೆಬ್ಬಾಳದ ಎಸ್ಟೀಮ್ ಮಾಲ್ ವರೆಗೆ ಸ್ಟೀಲ್‍ ಬ್ರಿಡ್ಜ್ ನಿರ್ಮಿಸಲು ಎಲ್ ಅಂಡ್ ಟಿ ಸಂಸ್ಥೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿತ್ತು.

ಆದರೆ, ಟೆಂಡರ್ ಪ್ರಕ್ರಿಯೆ ಸೇರಿದಂತೆ ಯಾವುದೇ ನೀತಿ ನಿಯಮ ಪಾಲಿಸದೆ ಎಲ್ ಅಂಡ್ ಟಿ ಸಂಸ್ಥೆಗೆ ಯೋಜನೆ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ನಮ್ಮ ಬೆಂಗಳೂರು ಫೌಂಡೇಶನ್ ಸಾರ್ಜನಿಕ ಹಿತಾಸಕ್ತಿ ಅರ್ಜಿ ಹಾಕಿತ್ತು.

ಸುಮಾರು 812 ಮರಗಳು ಬ್ರಿಡ್ಜ್ ನಿರ್ಮಾದಲ್ಲಿ ನೆಲಕ್ಕುರುಳಲಿವೆ.'ಸೇತುವೆಗಾಗಿ ಸರ್ಕಾರ ₹1,858 ಕೋಟಿ ವ್ಯಯಿಸಲಿದೆ. ಆ ಹಣದಲ್ಲಿ ನಾಲ್ಕು ಸಾವಿರ ಬಸ್‌ಗಳನ್ನು ಖರೀದಿ ಮಾಡಬಹುದು. ಇದರಿಂದ 1.2 ಲಕ್ಷ ಕಾರುಗಳು ರಸ್ತೆಯಿಂದ ಆಚೆ ಉಳಿಯಲಿವೆ ನಗರ ಯೋಜನಾತಜ್ಞ ಅಶ್ವಿನ್‌ ಮಹೇಶ್‌ ಹೇಳಿದ್ದಾರೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Karnataka High Court, on Friday, refused to stay the Rs.1,800 crore six-lane steel elevated road project. However, the court said the project would be subject to the final order to be passed on a petition that has questioned the legality of procedure followed in approving the project.
Please Wait while comments are loading...