ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ ಕೇಸಿನಿಂದ ಹಿಂದೆ ಸರಿದ ನ್ಯಾ. ರತ್ನಕಲಾ

By Mahesh
|
Google Oneindia Kannada News

ಬೆಂಗಳೂರು, ಜುಲೈ 13: ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯಿಂದ ಹೈಕೋರ್ಟ್ ನ್ಯಾ. ರತ್ನಕಲಾ ಅವರು ಹಿಂದೆ ಸರಿದಿದ್ದಾರೆ.

ಶಿವಮೊಗ್ಗದ ವಕೀಲ ಬಿ.ವಿನೋದ್‌ 2012, 2013 ಹಾಗೂ 2014ರಲ್ಲಿ ಲೋಕಾಯುಕ್ತ ನ್ಯಾಯಾಲಯಕ್ಕೆ ಪ್ರತ್ಯೇಕವಾಗಿ ಮೂರು ದೂರು ಸಲ್ಲಿಸಿದ್ದರು. ಈ ಪ್ರಕರಣಗಳಲ್ಲಿ ಹುರುಳಿಲ್ಲ ಎಂದು ವಿಶೇಷ ನ್ಯಾಯಾಲಯ ದೂರು ವಜಾ ಮಾಡಿತ್ತು. ಈ ಆದೇಶವನ್ನು ವಿನೋದ್‌ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಮೂರು ಪ್ರಕರಣಗಳ ವಿಚಾರಣೆಯಿಂದ ರತ್ನಕಲಾ ಹಿಂದೆ ಸರಿದಿದ್ದಾರೆ.

HC Judge Rathnakala recuses from BSY's Illegal assets case

'ಈ ಹಿಂದೆ ಯಡಿಯೂರಪ್ಪ ಅರ್ಜಿದಾರರಾಗಿದ್ದ ಪ್ರಕರಣವನ್ನು ನಾನೇ ವಿಚಾರಣೆ ನಡೆಸಿದ್ದೆ. ಈಗ ಈ ಪ್ರಕರಣದಲ್ಲಿ ಯಡಿಯೂರಪ್ಪ ಪ್ರತಿವಾದಿಯಾಗಿದ್ದಾರೆ. ಹಾಗಾಗಿ ನಾನು ಈ ಪ್ರಕರಣದ ವಿಚಾರಣೆ ನಡೆಸುವುದಿಲ್ಲ' ಎಂದು ರತ್ನಕಲಾ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಕ್ಕೆ ಮೌಖಿಕ ವಿವರಣೆ ನೀಡಿದರು.

English summary
High Court of Karnataka judge Justice Rathnakala has recused from hearing the criminal revision petition filed by advocate Vinod B who had filed a private complaint before the Lokayukta against former chief minister B S Yeddyurappa and his son, Shikaripur MLA,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X