ಹೆರಿಗೆ ರಜೆ ನಿರಾಕರಣೆ: ಕೇಂದ್ರ,ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಹೆರಿಗೆ ರಜೆ ನೀಡಲು ನಿರಾಕರಿಸಿದ ಖಾಸಗಿ ಕಂಪನಿ ಕ್ರಮ ಪ್ರಶ್ನಿಸಿ ‌ನಗರದ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಯ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆ, 2014ರಲ್ಲಿ ಮದುವೆಯಾಗಿದ್ದು, 2017ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಂದರ್ಭದಲ್ಲಿ ತಾವು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಗೆ ಹೆರಿಗೆ ರಜೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಕಂಪನಿಯು, 10ಕ್ಕಿಂತ ಹೆಚ್ಚು ನೌಕರರಿದ್ದರೆ ಮಾತ್ರ ಹೆರಿಗೆ ರಜೆ ನೀಡಲು ಕಾನೂನಿನಲ್ಲಿ ಅವಕಾಶವಿದೆ ಎಂದು ಮಹಿಳೆಗೆ ತಿಳಿಸಿ ರಜೆ ನೀಡಲು ನಿರಾಕರಿಸಿತ್ತು.

ಗ್ರ್ಯಾಚ್ಯುಟಿ ಸೌಲಭ್ಯಕ್ಕೆ ಹೆರಿಗೆ ರಜಾ ಅವಧಿಯೂ ಪರಿಗಣನೆ

ಇದರಿಂದ ಮಹಿಳೆ ಕೇಂದ್ರ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದು ಹೆರಿಗೆ ರಜೆಯ ಭತ್ಯೆ ಹಾಗೂ ಇತರ ಸೌಲಭ್ಯಗಳನ್ನು ನೀಡುವಂತೆ ಕೋರಿದ್ದರು. ಮಹಿಳೆಯ ಮನವಿಯನ್ನು ತಿರಸ್ಕರಿಸಿದ್ದ ಸಚಿವಾಲಯ, ನಿಮ್ಮ ಕಂಪನಿಯಲ್ಲಿ ಕೇವಲ 8 ಜನ ನೌಕರರಿದ್ದು, ಮೆಟರ್ನಿಟಿ ಬೆನಿಫಿಟ್ ಕಾಯ್ದೆಯ 1961, ಕಲಂ 2 ರ ಅನುಸಾರ ನಿಮಗೆ ಹೆರಿಗೆ ಭತ್ಯೆ ಅನ್ವಯವಾಗುವುದಿಲ್ಲ ಎಂದು ತಿಳಿಸಿತ್ತು. ಇದನ್ನು ಪ್ರಶ್ನಿಸಿರುವ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

HC issues notice on denial of maternity leave

ಹೊಸ ಕಾನೂನಿನ್ವಯ ದೇಶಾದ್ಯಂತ 18 ಲಕ್ಷ ಮಹಿಳಾ ನೌಕರರಿಗೆ ರಜೆ ವಿಸ್ತರಣೆ ಸೌಲಭ್ಯ ದೊರೆತಿದೆ. 10ಕ್ಕಿಂತ ಹೆಚ್ಚು ನೌಕರರಿರುವ ಎಲ್ಲ ಸಂಸ್ಥೆಗಳಿಗೂ ನಿಯಮ ಅನ್ವಯವಾಗುತ್ತಿದೆ. ವಿಶೇಷ ಸಂದರ್ಭದಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶವೂ ಇದೆ. ಮೊದಲ ಎರಡು ಮಕ್ಕಳಿಗಷ್ಟೇ 26 ವಾರಗಳ ಹೆರಿಗೆ ರಜೆ ಸೀಮಿತವಾಗಿದ್ದು, ಮೂರನೇ ಮಗುವಿಗೆ 12 ವಾರವಷ್ಟೇ ಕಾಲಾವಕಾಶ ಸಿಗಲಿದೆ. ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದತ್ತು ಪಡೆಯುವ ಮಹಿಳೆಯರಿಗೆ ಹಾಗೂ ಜೈವಿಕ ತಾಯಿ ಆಗುವ ಮಹಿಳೆಯರಿಗೂ 12 ವಾರ ರಜೆ ಸಿಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka high court Tuesday has issued show cause notice to union and state governments seeking denial of maternity leave for a women by private firm. The private company was denied to accommodate maternity leave which had less than ten employees.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ