ಘನತ್ಯಾಜ್ಯ ಸಂಸ್ಕರಣಾ ಘಟಕಗಳ ಕಾರ್ಯಾರಂಭಕ್ಕೆ ಹೈಕೋರ್ಟ್ ನಿರ್ದೇಶನ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 07: ನಗರದ ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಭಾರತೀಯ ವಿಜ್ಞಾನ ಮಂದಿರ, ತೋಟಗಾರಿಕಾ ಕೃಷಿ ವಿವಿಯ ತಜ್ಞರನ್ನು ಒಳಗೊಂಡ ತಾಂತ್ರಿಕ ಸಲಹಾ ಸಮಿತಿ ರಚಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.

ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾ. ಬಿ.ಎಸ್. ಪಾಟೀಲ್ ಮತ್ತು ನ್ಯಾ. ಬಿ.ವಿ. ನಾಗರತ್ನ ಅವರಿದ್ದ ವಿಶೇಷ ವಿಭಾಗೀಯ ಪೀಠವು, ಸರ್ಕಾರ ಮತ್ತು ಬಿಬಿಎಂಪಿಗೆ ಶುಕ್ರವಾರ ಹಲವು ನಿರ್ದೇಶನಗಳನ್ನು ನೀಡಿದೆ.

ಎರಡು ತಿಂಗಳಲ್ಲಿ ಇ-ತ್ಯಾಜ್ಯ ಕಾರ್ಖಾನೆಗಳ ಪರಿಶೀಲನೆ: ನಿರ್ದಾಕ್ಷಿಣ್ಯ ಕ್ರಮ

ಬಿಬಿಎಂಪಿ ಆಯುಕ್ತರ ಅಧ್ಯಕ್ಷತೆಯಲ್ಲಿರುವ ಸಮಿತಿಗೆ ತ್ಯಾಜ್ಯ ವಿಲೇವಾರಿ ನೋಡಿಕೊಳ್ಳುತ್ತಿರುವ ಜಂಟಿ ಆಯುಕ್ತರು ಸಂಚಾಲಕರಾಗಿರಬೇಕು ಮತ್ತು ಐಐಎಸ್ಸಿ, ಐಐಎಚ್ಆರ್, ಕೆಎಸ್ ಪಿಸಿಬಿ ಸೇರಿದಂತೆ ಇತರೆ ಸಂಸ್ಥೆಗಳ ಎಂಟು ತಜ್ಞರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಕೋರ್ಟ್ ಸೂಚಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆದಷ್ಟು ಬೇಗ ಘಟಕಗಳಿಗೆ ಭೇಟಿ ನೀಡಿ 2016ರ ಘನ ತ್ಯಾಜ್ಯ ವಿಲೇವಾರಿ ನಿರ್ವಹಣಾ ನಿಯಮಗಳಿಗೆ ಅನುಗುಣವಾಗಿ ಘಟಕಗಳನ್ನು ಸ್ಥಾಪಿಸಲಾಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಪರಿಶೀಲಿಸಿ ಅಗತ್ಯ ಅನುಮತಿಗಳನ್ನು ನೀಡಬೇಕು. ವಲಯ ಮಟ್ಟದ ಜಂಟಿ ಆಯುಕ್ತರುಗಳಿಗೆ ಈ ಏಳು ಘಟಕಗಳ ನಿರ್ವಹಣೆ ಹೊಣೆ ವಹಿಸಿಕೊಡಬೇಕು.

ಎಚ್‌ಎಸ್ ಆರ್ ನ ಕೆಸಿಡಿ ಘಟಕದಲ್ಲಿ ದುರ್ವಾಸನೆ

ಎಚ್‌ಎಸ್ ಆರ್ ನ ಕೆಸಿಡಿ ಘಟಕದಲ್ಲಿ ದುರ್ವಾಸನೆ

ವಿಚಾರಣೆ ವೇಳೆ ಎಚ್‌ ಎಸ್ ಆರ್ ಲೇಔಟ್‌ ನ ಸಮೀಪದ ಕೂಡ್ಲುವಿನಲ್ಲಿರುವ ಕೆಸಿಡಿಸಿ ಘಟಕದಲ್ಲಿರುವ ತ್ಯಾಜ್ಯದ ದುರ್ವಾಸನೆ ತಡೆಯಲು ಆಗುತ್ತಿಲ್ಲ ಎಂದು ಸ್ಥಳೀಯರು ನ್ಯಾಯಪೀಠದ ಗಮನ ಸೆಳೆದರು. ಅದಕ್ಕೆ ನ್ಯಾಯಪೀಠ, ಹಣ ಖರ್ಚಾದರೂ ತೊಂದರೆಯಿಲ್ಲ. ಈ ಸಮಸ್ಯೆಯನ್ನು ನಿವಾರಸಬೇಕು ಎಂದು ಪಾಲಿಕೆಗೆ ಸೂಚಿಸಿತು.

ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಬಿಬಿಎಂಪಿಗೆ ಈಗಲೂ ಸವಾಲು

ಸಂಚಾಲಕರಿಗೆ ನೋಟಿಸ್

ಸಂಚಾಲಕರಿಗೆ ನೋಟಿಸ್

ಈ ಮಧ್ಯೆ, ನ್ಯಾಯಾಲಯದ ಆದೇಶದಂತೆ ಸಮಿತಿ ಸಭೆಗಳನ್ನು ನಡೆಸದ 38 ವಾರ್ಡ್ ಸಮಿತಿ ಸಂಚಾಲಕರಿಗೆ ನೋಟಿಸ್ ಜಾರಿಗೊಳಿಸಲು ರಿಜಸ್ಟ್ರಿಗೆ, ಹೈಕೋರ್ಟ್ ಸೂಚನೆ ನೀಡಿತು. ಮೇ 28ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಲಾಗಿದ್ದು, ಅಷ್ಟರಲ್ಲಿ ವಾರ್ಡ್ ಸಮಿತಿ ಸಭೆ ನಡೆಸಿದರೆ ಅವರು ಕೋರ್ಟ್ ಮುಂದೆ ಹಾಜರಾಗಬೇಕಿಲ್ಲ ಇಲ್ಲವಾದಲ್ಲಿ ಖುದ್ದು ಹಾಜರಾಗಬೇಕಾಗುತ್ತದೆ ಎಂದು ನ್ಯಾಯಾಲಯ ತನ್ನ ಆದೇಶಲ್ಲಿ ತಿಳಿಸಿತು.

ತ್ಯಾಜ್ಯ ಸಮಿತಿ ರಚಿಸಿ

ತ್ಯಾಜ್ಯ ಸಮಿತಿ ರಚಿಸಿ

ನಗರದ ಘನತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಭಾರತೀಯ ವಿಜ್ಞಾನ ಮಂದಿರ, ತೋಟಗಾರಿಕಾ ಕೃಷಿ ವಿವಿಯ ತಜ್ಞರನ್ನು ಒಳಗೊಂಡ ತಾಂತ್ರಿಕ ಸಲಹಾ ಸಮಿತಿ ರಚಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.

ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾ. ಬಿ.ಎಸ್. ಪಾಟೀಲ್ ಮತ್ತು ನ್ಯಾ. ಬಿ.ವಿ. ನಾಗರತ್ನ ಅವರಿದ್ದ ವಿಶೇಷ ವಿಭಾಗೀಯ ಪೀಠವು, ಸರ್ಕಾರ ಮತ್ತು ಬಿಬಿಎಂಪಿಗೆ ಶುಕ್ರವಾರ ಹಲವು ನಿರ್ದೇಶನಗಳನ್ನು ನೀಡಿದೆ.

ಘಟಕಗಳ ಕಾರ್ಯಾರಂಭಕ್ಕೆ ಸೂಚನೆ

ಘಟಕಗಳ ಕಾರ್ಯಾರಂಭಕ್ಕೆ ಸೂಚನೆ

ಈ ಮಧ್ಯೆ ಹೈಕೋರ್ಟ್ ಕನ್ನಹಳ್ಳಿ, ಸೀಗೆಹಳ್ಳಿ, ದೊಡ್ಡಬಿದರಳ್ಳಿ, ಚಿಕ್ಕನಾಗಮಂಗಲ, ಸುಬ್ಬರಾಯನಪಾಳ್ಯ, ಕೂಡ್ಲು ವಿನ ಕೆಸಿಡಿಸಿ ಮತ್ತು ಲಿಂಗಧೀರನಹಳ್ಳಿಯಲ್ಲಿ ಸ್ಥಾಪಿಸಿರುವ ಘನತ್ಯಾಜ್ಯ ಸಂಸ್ಕರಣಾ ಘಟಕವನ್ನು ಒಂದು ತಿಂಗಳೊಳಗೆ ಕಾರ್ಯಾರಂಭ ಮಾಡುವಂತೆ ಸೂಚಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka High court constitutes special committee for waste management in capital city. This technical committee involves IISC, Agriculture universtities professors.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ