ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್ 22ಕ್ಕೆ ನೀರಿನ ಅದಾಲತ್: ದೂರುಗಳ ಕುರಿತು ಮುಕ್ತ ಚರ್ಚೆ

|
Google Oneindia Kannada News

ಬೆಂಗಳೂರು, ಮಾರ್ಚ್ 21: ಬೆಂಗಳೂರು ಜನಮಂಡಳಿಯು ಮಾರ್ಚ್ 22ರಂದು ನೀರಿನ ಅದಾಲತ್ ನ್ನು ಬೆಳಗ್ಗೆ 9.30ರಿಂದ 11ಗಂಟೆಯವರೆಗೆ ನಡೆಸಲಿದೆ.

ಈಶಾನ್ಯ-3 ಉಪವಿಭಾಗದಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆಯಲ್ಲಿ ವಿಳಂಬ ಮತ್ತಿತರೆ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಗುರುವಾರ ನೀರಿನ ಅದಾಲತ್ ನಡೆಯಲಿದೆ.

ನೀರಿನ ಮಹತ್ವ ಸಾರಲು ವಾಕಥಾನ್ ಏರ್ಪಡಿಸಿದ ಎಂಟರ ಬಾಲೆನೀರಿನ ಮಹತ್ವ ಸಾರಲು ವಾಕಥಾನ್ ಏರ್ಪಡಿಸಿದ ಎಂಟರ ಬಾಲೆ

ಗುರುವಾರ (ಈಶಾನ್ಯ-3) ಉಪವಿಭಾಗದ ವ್ಯಾಪ್ತಿಗೆ ಬರುವ ಆರ್.ಟಿ.ನಗರ, ಕಾವಲ್ ಭೈರಸಂದ, ಸಂಜಯನಗರ, ಬಿ.ಇ.ಎಲ್ ರಸ್ತೆ, ಸೇವಾಠಾಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು 3ನೇ ಅಡ್ಡರಸ್ತೆ, ಪಿ ಟಿ ಕಾಲೋನಿ, ಆರ್.ಟಿ.ನಗರ ಇಲ್ಲಿ ನಡೆಸಲಿದ್ದು ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸಲಾಗುತ್ತದೆ.

Have you water connection issue? Here is the remedy

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಕಾರ್ಯನಿರ್ವಾಹಕ ಅಭಿಯಂತರರು (ಈಶಾನ್ಯ)22945124. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು (ಈಶಾನ್ಯ-3) ಉಪವಿಭಾಗ-22945139. ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ-22238888, ಸಹಾಯವಾಣಿ 1916 ಹಾಗೂ ವಾಟ್ಸ್ ಆಪ್ ಸಂಖ್ಯೆ-8762228888 ಗೆ ಸಂಪರ್ಕಿಸಬಹುದಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸಾರ್ವಜನಿಕರು ಮೇಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಈ ಅದಾಲತ್ ಗಳ ಸೌಲಭ್ಯ ಬಳಸಿಕೊಳ್ಳ ಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

English summary
BWSSB water adalat held on March 22 in North East sub division from 9.30am to 11am to settle the grievances concerned with the water billing , delay in providing water supply, sanitary connections, delay in converting from domestic connection to non domestic connection and other related issues.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X