'ಹೊಸ ವರ್ಷದ ಪಾರ್ಟಿಗೆ ದಯವಿಟ್ಟು ಕರೆಯಬೇಡಿ!'

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 31 : "ಈ ವರ್ಷ ಹೊಸ ವರ್ಷದ ಪಾರ್ಟಿಗೆ ದಯವಿಟ್ಟು ನಮ್ಮನ್ನು ಕರೆಯಬೇಡಿ. ನಿಮ್ಮಿಂದ ದೂರವಿರಲು ನಾವು ಬಯಸುತ್ತೇವೆ..." ಹೀಗೆಂದು ಸಂದೇಶ ರವಾನಿಸಿದವರು ಮತ್ತಾರೂ ಅಲ್ಲ, ಬೆಂಗಳೂರು ನಗರ ಪೊಲೀಸ್!

ಈ ಸಂದೇಶದ ಅರ್ಥ ಇಷ್ಟೇ... ದಯವಿಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಕುಡಿದು ಹಾರಾಡಿ, ಗಲಾಟೆ ಮಾಡಿಕೊಂಡು, ಅಸಭ್ಯವಾಗಿ ವರ್ತಿಸಿಕೊಂಡು ತೊಂದರೆಯನ್ನು ಆಹ್ವಾನಿಸಿಕೊಳ್ಳಬೇಡಿ, ಅನಗತ್ಯವಾಗಿ ಪೊಲೀಸರು ಕ್ರಮ ತೆಗೆದುಕೊಳ್ಳದಂತೆ ಎಚ್ಚರ ವಹಿಸಿ!

ಹೊಸ ವರ್ಷ ಸಂಭ್ರಮ ಸುರಕ್ಷಿತವಾಗಿರಲೆಂದು ಬೆಂಗಳೂರು ನಗರ ಪೊಲೀಸರು ವ್ಯಾಪಕ ಕ್ರಮಗಳನ್ನು ತೆಗೆದುಕೊಂಡಿದ್ದು, ಯಾವು ಅವಘಡ ಸಂಭವಿಸದಂತೆ ಸುಸಜ್ಜಿತರಾಗಿ ನಿಂತಿದ್ದಾರೆ. ಆದ್ದರಿಂದ, ನಾಗರಿಕರು ತೊಂದರೆಯನ್ನು ಆಹ್ವಾನಿಸಿಕೊಳ್ಳದೆ ಹೊಸವರ್ಷದ ಚುಮುಚುಮು ಬೆಳಕಿನಲ್ಲಿ ಸುರಕ್ಷಿತವಾಗಿ ಮನೆ ಸೇರಿಕೊಳ್ಳುವುದು ಒಳಿತು.

Have a safe new year celebration, say Bengaluru Police

ಬೆಂಗಳೂರಿನ ಬೀದಿಬೀದಿಗಳಲ್ಲಿ, ಹೆಚ್ಚಾಗಿ ಮಹಾತ್ಮಾ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ನಗರಾದ್ಯಂತ ಹರಡಿಕೊಂಡಿರುವ ಬಾರ್ ಪಬ್ಬುಗಳಲ್ಲಿ ನೆರೆಯುವ ಯುವ ಜನತೆಗಾಗಿ ಹಲವಾರು ಸೂಚನೆ, ಮಾರ್ಗದರ್ಶನಗಳನ್ನು ಪೊಲೀಸರು ನೀಡಿದ್ದಾರೆ. ಜವಾಬ್ದಾರಿಯುತ ನಾಗರಿಕರಾಗಿದ್ದರೆ ಈ ಸೂಚನೆಗಳನ್ನು ಪಾಲಿಸುತ್ತಾರೆ.

* ಹೊಸ ವರ್ಷದ ಸಂಭ್ರಮದ ಸಂದರ್ಭದಲ್ಲಿ ಏನು ಮಾಡಬೇಕು ಏನು ಮಾಡಬಾರದು (Dos and Don'ts) ಸಿದ್ಧಮಾಡಿಕೊಂಡಿದ್ದೀರಾ? ಎಂದು ಪೊಲೀಸರು ಕೇಳಿದ್ದಾರೆ. ಮಾಡಿಲ್ಲಕೊಂಡಿದ್ದರೆ ಮೊದಲು ಮಾಡಿಕೊಳ್ಳಿ.

* ಜವಾಬ್ದಾರಿಯುತವಾಗಿ ವರ್ತಿಸಿ. ಮದ್ಯ ಕುಡಿದು ವಾಹನ ಚಲಾಯಿಸಬೇಡಿ. ಒಂದು ವೇಳೆ ಕುಡಿದಿದ್ದರೆ ಕ್ಯಾಬ್ ಮೂಲಕ ಅಥವಾ ಕುಡಿದಿಲ್ಲದ ಸ್ನೇಹಿತ ಅಥವಾ ಕುಟುಂಬ ಸದಸ್ಯರ ಸಹಾಯದಿಂದ ಮನೆ ಸೇರಿಕೊಳ್ಳಿ.

* ಗೌಜು ಗದ್ದಲಗಳ ನಡುವೆ ಕೆಲ ಕ್ರಿಮಿಗಳು ಸೇರಿಕೊಂಡಿರಬಹುದು. ಎಚ್ಚರದಿಂದಿರಿ. ಸಂಶಯಾತ್ಮಕ ವಸ್ತು ಅಥವಾ ವ್ಯಕ್ತಿ ಕಂಡಕೂಡಲೆ 100 ಸಂಖ್ಯೆಗೆ ಡಯಲ್ ಮಾಡಿ ವಿಷಯ ತಿಳಿಸಿ. ಈ ಜವಾಬ್ದಾರಿ ಪೊಲೀಸರದು ಮಾತ್ರವಲ್ಲ, ನಾಗರಿಕರದು ಕೂಡ.

* ಹೆಚ್ಚುವರಿ ಸಿಸಿಟಿವಿಗಳನ್ನು ಎಲ್ಲೆಡೆ ಅಳವಡಿಸಲಾಗಿದೆ. ವಾಚ್ ಟವರ್ ಗಳು ನಿಯಮ ಉಲ್ಲಂಘಿಸುವವರನ್ನು ಗಮನಿಸುತ್ತಿರುತ್ತವೆ. ಜೊತೆಗೆ KSRP, QRT, RIV,CAR, SWAT ಪಡೆಗಳು ಕೂಡ ಸಜ್ಜಾಗಿವೆ.

* ಕಾವೇರಿ ಎಂಪೋರಿಯಂನಿಂದ ಅನಿಲ್ ಕುಂಬ್ಳೆ ವೃತ್ತದವರೆಗೆ ಮತ್ತು ಕಾವೇರಿ ಎಂಪೋರಿಯಂನಿಂದ ಓಪೆರಾ ಜಂಕ್ಷನ್ ವರೆಗೆ ವಾಹನ ನಿಲುಗಡೆಯನ್ನು ಸಂಜೆ 4.30ರಿಂದ ಜನವರಿ 1ರ 3 ಗಂಟೆಯ ವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

* ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ತಪಾಸಣೆ ಮಾಡಿಯೇ ಜನರನ್ನು ಬಿಡಲಾಗುತ್ತದೆ. ಜನರು ಕೂಡ ಸಹಕರಿಸಬೇಕಾಗಿ ವಿನಂತಿ. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ವಾಹನಗಳಲ್ಲಿ ಗುಂಡು ಹಾಕುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

* ಸೋಷಿಯಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಸಂಗತಿಗಳನ್ನು ಹಂಚಿಕೊಳ್ಳಬೇಡಿ. ಯಾರಾದರೂ ಕಾನೂನು ಉಲ್ಲಂಘನೆ ಮಾಡಿದರೆ ಅಥವಾ ನಿಮ್ಮ ಹಕ್ಕಿಗೆ ಚ್ಯುತಿ ಮಾಡಿದರೆ ತಿಳಿಸಿ ನಾವು ಫಿಕ್ಸ್ ಮಾಡುತ್ತೇವೆ.

* ರಸ್ತೆಗಳಿರುವುದು ವಾಹನಗಳಿಗಾಗಿ, ಪಾದಚಾರಿ ಮಾರ್ಗಗಳಿರುವುದು ಪಾದಚಾರಿಗಳಿಗಾಗಿ. ಇವೆರಡನ್ನೂ ಅದಲುಬದಲು ಮಾಡಬೇಡಿ. ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ. ಹೊಸ ವರ್ಷದ ನಿಯಮಗಳು ಬದಲಾಗಿಲ್ಲ, ನೀವು ಬದಲಿಸಲೂ ಹೋಗಬೇಡಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
DO NOT invite @BlrCityPolice to your new year parties - happy to be away from you, if you adhere to time & loud music guidelines.. This is the message sent by Bengaluru City Police to the people of Bangalore on the eve of New Year. Have a wonderful safe new year.
Please Wait while comments are loading...