ಪಾರ್ಕಿನ್‍ಸನ್ ರೋಗದ ಜತೆ ಹೋರಾಡಿ ಗೆದ್ದ ಹರಿಪ್ರಸಾದ್ ಕಥೆ ಕೇಳಿ

Posted By:
Subscribe to Oneindia Kannada

ಬೆಂಗಳೂರು, ಜ. 22: ಸುಮಾರು ಐದು ವರ್ಷದ ಹಿಂದೆ ಹರಿಪ್ರಸಾದ್ ಅವರಿಗೆ ಪಾರ್ಕಿನ್‍ಸನ್ ರೋಗ ಇರುವುದು ಪತ್ತೆಯಾಯಿತು. ಇದು, ನರವ್ಯವಸ್ಥೆಯನ್ನು ನಿಧಾನವಾಗಿ ವ್ಯಾಪಿಸುವ ರೋಗ, ಇದು, ವ್ಯಕ್ತಿಯ ಚಲನೆಯ ಮೇಲೆ ಪರಿಣಾಮ ಬೀರಲಿದೆ. ಪತ್ನಿಯ ಜತೆಗೆ ನಾನು ಮತ್ತೆ ರಸ್ತೆಯಲ್ಲಿ ಪ್ರಯಾಣ ಮಾಡುತ್ತೇನೆ ಎಂದು ಎಂದಿಗೂ ಅವರು ಭಾವಿಸಿರಲಿಲ್ಲ.

ಆದರೆ, ಹರಿಪ್ರಸಾದ್ ಈಗ ಜನವರಿ 22ರಂದು ತಮ್ಮ ಪತ್ನಿಯ ಜತೆಗೆ ಪ್ರಯಾಣ ನಡೆಸಲು ಸಜ್ಜಾಗುತ್ತಿದ್ದಾರೆ. ಪಾರ್ಕಿನ್‍ಸನ್ ರೋಗದ ಜತೆಗೆ ಸತತ ಆರು ವರ್ಷ ಹೋರಾಡಿದ ಬಳಿಕ ಇದು ಸಾಧ್ಯವಾಗಿದೆ. 41ದಿನದ ಅವಧಿಯಲ್ಲಿ ಬೆಂಗಳೂರಿನಿಂದ ಭೂತಾನ್ ತಿಂಪುವರೆಗೂ ಸುಮಾರು 6,000 ಕಿ.ಮೀ.ಗಳ ಪ್ರಯಾಣವನ್ನು ಅವರು ಯೋಜಿಸಿದ್ದಾರೆ. ಹರಿಪ್ರಸಾದ್ ಅವರದು ಎಂಥವರಿಗೂ ಪ್ರೇರೇಪಣೆ ನೀಡುವ ವ್ಯಕ್ತಿತ್ವ.[ಕ್ಯಾನ್ಸರ್ ವಿರುದ್ಧ ಸಹೋದರನ ಸವಾಲ್!]

2009ರಲ್ಲಿ ಅವರು ತಮ್ಮ ಎಡಗೈನಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಮೂಲಕ ರೋಗದ ಅನುಭವವಾಯಿತು. ಇದು, ದೇಹದ ಎಡಭಾಗವನ್ನು ಆವರಿಸಿಕೊಳ್ಳುತ್ತಾ ಹೋಯಿತು. ಅವರು ಬಳಿಕ ಯಶವಂತಪುರದ ಕೊಲಂಬಿಯ ಏಷಿಯಾ ರೆಫರೆಲ್ ಹಾಸ್ಪಿಟಲ್ ಗೆ ಕನ್ಸಲ್ಟಂಟೇಷನ್ ಗೆ ತೆರಳಿದರು. ಅವರ ಕುಟುಂಬದಲ್ಲಿ ಯಾರಿಗೂ ಪಾರ್ಕಿನ್‍ಸನ್ ಸಮಸ್ಯೆ ಇರಲಿಲ್ಲ. ಪ್ರಸ್ತುತ ಕಾಣಿಸಿಕೊಂಡಿದ್ದ ಸಮಸ್ಯೆಯೂ ಅವರ ನಿತ್ಯದ ಬದುಕಿಗೆ ಅಡ್ಡಿ ಆಗಿರಲಿಲ್ಲ. ಅವರ ಆರೋಗ್ಯವನ್ನು ಕೆಲ ದಿನ ಪರಿಶೀಲನೆ ನಡೆಸಬೇಕು ಎಂದು ನಿರ್ಧರಿಸಲಾಯಿತು.

Hari Prasad Inspiraton to all

‘ಆದರೆ, ಮುಂದಿನ ಒಂದು ತಿಂಗಳಲ್ಲಿ ಹರಿ ಅವರ ಎಡಗೈನಲ್ಲಿ ಕಾಣಿಸಿಕೊಂಡಿದ್ದ ಸಮಸ್ಯೆ ಹೆಚ್ಚಾಗಿ, ಕೈಪೂರ್ಣ ಆವರಿಸಿಕೊಳ್ಳಲು ಶುರುವಾಯಿತು.ನೀವು ಪಾರ್ಕಿನ್‍ಸನ್ ಕಾಯಿಲೆಯಿಂದ ಬಳಲುತ್ತಿದ್ದೀರಿ ಎಂದು ತಿಳಿಸಿ, ಔಷಧ ನೀಡಲು ಆರಂಭಿಸಿದೆವು. ಅವರ ಔಷಧಕ್ಕೆ ಸರಿಯಾಗಿ ಸ್ಪಂದಿಸಿದ್ದು, ಮತ್ತೆ ಅವರ ವೈಯಕ್ತಿಕಜೀವನ ಸುಧಾರಿಸಿಕೊಳ್ಳಲು ಕಾರಣವಾಯಿತು' ಎನ್ನುತ್ತಾರೆ ಡಾ. ಗುರುಪ್ರಸಾದ್ ಹೊಸೂರ್‍ಕರ್, ಕನ್ಸಲ್ಟಂಟ್ ನ್ಯೂರಾಲಜಿ, ಕೊಲಂಬಿಯ ಏಷಿಯಾ ರೆಫರೆಲ್ ಹಾಸ್ಪಿಟಲ್, ಯಶವಂತಪುರ ಅವರು.
ಆದರೆ, ಹರಿಪ್ರಸಾದ್ ಅವರ ವಿಷಯದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲು ಆರಂಭವಾಯಿತು.

'2011ರ ವೇಳಗೆ ನನ್ನ ಅನಾರೋಗ್ಯ ಸಮಸ್ಯೆ ದೇಹದ ಬಲಭಾಗವನ್ನು ಆವರಿಸಿಕೊಳ್ಳಲು ಆರಂಭಿಸಿತು. ಎಂದಿನಂತೆ ಕಾರ್ಯನಿರ್ವಹಿಸಲು, ದೀರ್ಘ ಕಾಲ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ವಾಹನ ಚಾಲನೆ ಮಾಡಲು ಕಷ್ಟ ಆಗುತ್ತಿತ್ತು. ಷೇವಿಂಗ್ ಮಾಡಿಕೊಳ್ಳುವುದು, ಡ್ರೆಸ್ ಮಾಡಿಕೊಳ್ಳಲು, ಅನ್ಯರ ಸಹಕಾರ ಬೇಕಿತ್ತು' ಎಂದು ಹರಿಪ್ರಸಾದ್ ಹೇಳುತ್ತಾರೆ.

ರೋಗ ಹೆಚ್ಚಿದಂತೆಲ್ಲಾ, ಹರಿಪ್ರಸಾದ್ ಅವರ ಔಷಧವನ್ನು ಚುರುಕುಗೊಳಿಸಿದ್ದು, ಲೆವೊಡಾಪಾ ಔಷಧ ನೀಡಲು ಆರಂಭಿಸಿದೆವು. ಹರಿಪ್ರಸಾದ್ ಅವರು ಸುಸ್ತು, ಆಯಾಸ ಅನುಭವಿಸಿದರು. ಇನ್ನೊಂದಡೆ, ಎಡಗೈನ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು.

'2014ರ ವೇಳೆಗೆ ನನಗೆ ಸಮಸ್ಯೆ ಹೆಚ್ಚಿದ್ದು, ಇದರಿಂದಾಗಿ ನಾನು ಕೆಲಸದಿಂದ ಕೆಲ ಕಾಲ ವಿರಾಮ ಪಡೆಯಬೇಕಾಯಿತು. ರೋಗದ ಜತೆಗೆ ಸೆಣಸಾಡುವುದು ಕಷ್ಟ ಎನಿಸತೊಡಗಿತು' ಎಂದು ಹರಿಪ್ರಸಾದ್ ಹೇಳಿದರು.

ಜತೆಗೆ ಬೆನ್ನಿನ ಭಾಗದಲ್ಲಿಯೂ ಸರಾಗ ಚಲನೆಗೆ ಸಮಸ್ಯೆಯಾಯಿತು. ಜನವರಿ 2015ರಲ್ಲಿ ಹರಿ ಅವರು ನಿದ್ರಾ ಸಮಸ್ಯೆ ಇರುವುದನ್ನು, ತದೇಕ ಚಿತ್ತತೆ ಕಡಿಮೆ ಆಗುತ್ತಿರುವುದರ ಬಗೆಗೆ ದೂರಿದರು. ಈ ಹಂತದಲ್ಲಿ ಡಿಬಿಎಸ್ ಸರ್ಜರಿ ಸಲಹೆ ಮಾಡಿದ್ದು, ಅದರ ಅನುಕೂಲಗಳನ್ನು ವಿವರಿಸಿದೆವು' ಎಂದು ಕೊಲಂಬಿಯ ಏಷಿಯಾ ಹಾಸ್ಪಿಟಲ್‍ನ ನ್ಯೂರೋಸರ್ಜನ್ ಮತ್ತು ಸ್ಪೈನ್ ಸರ್ಜನ್ ಡಾ. ರಘುರಾಂ ಜಿ ಅವರು ಹೇಳಿದರು.

Hari Prasad Inspiraton to all

ಹರಿ ಈ ಹಂತದಲ್ಲಿ ಮಾರ್ಚ್ 2015ರಲ್ಲಿ ಬೈಲಾಟರಲ್ ಎಸ್‍ಟಿಎನ್ ಡಿಬಿಎಸ್ ಸರ್ಜರಿಗೆ ಒಳಗಾದರು. ಹರಿ ಅವರು ಡಿಬಿಎಸ್ ನಂತರದ ಚಿಕಿತ್ಸಾ ಕ್ರಮಗಳಿಗೂ ಸ್ಪಂದಿಸಿದರು. ಅವರ ಸಹಜ ಸ್ಥಿತಿಗೆ ಮರಳಲು ಎರಡು ವಾರ ಬೇಕಾಯಿತು. ತಲೆನೋವು, ವಿಳಂಬಗತಿ, ಆಯಾಸ ಕಡಿಮೆ ಆಗಿದೆ. ಸುಧಾರಣೆ ಕಂಡುಬರುತ್ತಿತ್ತು' ಎಂದು ಡಾ. ರಘುರಾಂ ಹೇಳಿದರು.

`ಪಾರ್ಕಿನ್‍ಸನ್ ರೋಗ ಕುರಿತ ಜಾಗೃತಿ ರೋಗಿಗಳುಹಾರು ಸಾರ್ವಜನಿಕರಲ್ಲಿ ತೀರಾ ಕಡಿಮೆ. ಇದನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಚಿಕಿತ್ಸೆ ನೀಡುವುದು ಸಾಧ್ಯವಿದೆ. ಹೊಸ ಸಂಶೋಧನೆ ಅನುಸಾರ ಡಿಬಿಎಸ್ ಚಿಕಿತ್ಸೆಯನ್ನು ಒಂದುವರ್ಷದೊಳಗೆ ಪಡೆದರೆ, ಅಗತ್ಯ ಔಷಧೋಪಚಾರ ಪಡೆದರೆ ಗುಣಮುಖರಾಗುವುದು ಸಾದ್ಯವಿದೆ. ಹರಿಪ್ರಸಾದ್ ಕೂಡಾ ಸಮಸ್ಯೆ ಎದುರಿಸುತ್ತಾ ಇದ್ದರೂ, ಇಂದು ಪತ್ನಿಯೊಂದಿಗೆ ಪ್ರವಾಸ ತೆರಳಲು ಸಜ್ಜಾಗುತ್ತಿದ್ದಾರೆ.

ಡಿಬಿಎಸ್ ಎಂಬುದು ಪರಿಣಾಮಕಾರಿ ಚಿಕಿತ್ಸೆಯಾಗಿ ಹೊರಹೊಮ್ಮಿದೆ. ಇದು, ಕೇವಲ ಪಾರ್ಕಿನ್‍ಸನ್ ರೋಗವನ್ನು ಗುಣಮುಖಪಡಿಸುವುದಷ್ಟೇ ಅಲ್ಲ; ಔಷಧಗಳ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡಲಿದೆ' ಎಂದು ಡಾ. ಗುರುಪ್ರಸಾದ್ ಹೇಳಿದರು. ಆದರೆ, ಜಾಗೃತಿಯ ಕೊರತೆಯಿಂದಾಗಿ ರೋಗಿಗಳು ಈ ಚಿಕಿತ್ಸಾ ಕ್ರಮವನ್ನು ಆಯ್ಕೆ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು.

ಕೊಲಂಬಿಯ ಏಷಿಯಾ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ ಕುರಿತು: ಕೊಲಂಬಿಯ ಏಷಿಯಾ ಹಾಸ್ಪಿಟಲ್ಸ್ ಪ್ರೈವೇಟ್ ಲಿಮಿಟೆಡ್ ಭಾರತದಲ್ಲಿನ ಶೇ 100ರಷ್ಟು ವಿದೇಶಿ ನೇರ ಹೂಡಿಕೆ (ಎಫ್ ಡಿಐ) ಮಾರ್ಗದಲ್ಲಿ ಆಸ್ಪತ್ರೆ ಕ್ಷೇತ್ರವನ್ನು ಪ್ರವೇಶಿಸಿರುವ ಸಮಸ್ಥೆಯಾಗಿದೆ.

ಕೊಲಂಬಿಯ ಏಷಿಯಾ ಸಮೂಹ ಕುರಿತು: ಕೊಲಂಬಿಯ ಏಷಿಯಾ ಗ್ರೂಪ್ 150ಕ್ಕೂ ಅಧಿಕ ಖಾಸಗಿ ಈಕ್ವಿಟಿ ಕಂಪನಿಗಳು, ನಿರ್ವಹಣಾ ಸಂಘಟನೆಗಳು, ವೈಯಕ್ತಿಕ ಹೂಡಿಕೆದಾರರ ಮಾಲೀಕತ್ವವನ್ನು ಹೊಂದಿದೆ. ಸಮೂಹವು ಪ್ರಸ್ತುತ ಭಾರತದಲ್ಲಿ ಏಳು ಕಡೆ ಸೌಲಭ್ಯವನ್ನು ಹೊಂದಿದ್ದು, ಅಹಮದಾಬಾದ್, ಬೆಂಗಳೂರು, ಗುರಗಾಂವ್, ಗಾಜಿಯಾಬಾದ್, ಕೋಲ್ಕೊತ್ತಾ, ಮೈಸೂರು, ಪಾಟಿಯಾಲ ಮತ್ತು ಪುಣೆಯಲ್ಲಿ ಹೊಂದಿದೆ. ಕಂಪನಿಯು ಇದರ ಜೊತೆಗೆ ಆಸ್ಪತ್ರೆಯನ್ನು ಮಲೇಷಿಯಾ (11), ವಿಯೆಟ್ನಾಂ (3), ಇಂಡೋನೇಷಿಯಾ (3) ರಲ್ಲಿಯೂ ಹೊಂದಿದೆ. ಭಾರತದ ಆಸ್ಪತ್ರೆಗಳ ನಿರ್ವಹಣೆಯನ್ನು ಬೆಂಗಳೂರು ಕಚೇರಿಯ ಮೂಲಕ ನಿರ್ವಹಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hari Prasad Inspiration to all: Man who battled Parkinson's disease now taking a road trip with his wife. He is planning to cover 6,000 kilometres from Bangalore to Thimpu (Bhutan) and back in 41 days. He has thanked Columbia Asia Referral Hospital for the medical aide provided from 2009.
Please Wait while comments are loading...