ಮತ್ತೆ ಬೆಂಗಳೂರಲ್ಲಿ ಯುವತಿಗೆ ಲೈಂಗಿಕ ಕಿರುಕುಳ?!

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು ಮಾರ್ಚ್ 20: ಬೆಂಗಳೂರು ಯುವತಿಯರಿಗೆ ಸೇಫ್ ಅಲ್ಲ ಅನ್ನೋ ಮಾತಿಗೆ ಪುಷ್ಠಿ ನೀಡುವಂಥ ಘಟನೆ ಇಂದು ನಗರದ ಚಿಕ್ಕಜಾಲ ಸರ್ವಿಸ್ ರಸ್ತೆ ಬಳಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಸ್ನೇಹಿತನೊಂದಿಗೆ ಹೋಗುತ್ತಿದ್ದ ಯುವತಿಯನ್ನು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕೆಲ ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.

ಬೈಕಿನ ಕೀ ಕಿತ್ತುಕೊಂಡು ಯುವತಿ ಮತ್ತು ಆಕೆಯ ಸ್ನೇಹಿತ ಎಲ್ಲಿಯೂ ಹೋಗಲಾಗದಂತೆ ತಡೆದು ನಿಲ್ಲಿಸಿ ಕಿರುಕುಳ ನೀಡಲಾಗಿದೆ. ಸಹಾಯಕ್ಕೆಂದು ಕೂಗಿದರೂ ಸ್ಥಳೀಯರು ಮತ್ತು ಕೆಲ ಆಟೋ ಚಾಲಕರೂ ದುಷ್ಕರ್ಮಿಗಳಿಗೇ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಯುವತಿ ದುಷ್ಕರ್ಮಿಗಳು, ಆಟೋ ಚಾಲಕರು, ಸ್ಥಳೀಯರು ಸೇರಿದಂತೆ ಸುಮಾರು 40 ರಿಂದ 45 ರ ಮೇಲೆ ದೂರು ನೀಡಿದ್ದಾಳೆ.[ಮಹಿಳಾ ಪೇದೆ ಮೇಲೆ ಕಸ್ಟಮ್ಸ್ ಅಧಿಕಾರಿಯಿಂದ ಅತ್ಯಾಚಾರ!]

Again there is harassment on woman Chikkajala Bengaluru

ಇಷ್ಟು ದಿನ ರಾತ್ರಿ ರಸ್ತೆಯಲ್ಲಿ ನಡೆದು ಹೋಗುವುದು, ಹಗಲಲ್ಲೂ ಒಂಟಿಯಾಗಿ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವುದು ಅಪಾಯ ಎಂಬ ಪರಿಸ್ಥಿತಿ ಇತ್ತು. ಇದೀಗ ದ್ವಿಚಕ್ರ ವಾಹನದಲ್ಲಿ ಹೋಗುವುದೂ ಸೇಫ್ ಅಲ್ಲ ಎಂಬುದು ಘಟನೆಯಿಂದ ದೃಢವಾಗಿದೆ! ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A girl traveling with her friend in a bike has harassed by some unidentified men, who were riding vehicle in opposite direction. Localities and some auto drivers also supported them. The compliant has been registered in Chikkajala police station
Please Wait while comments are loading...